ಕದಾಚಿತ್ ತಂ ಲಾಳಯನ್ತೀ ಯಶೋದಾ ವೋಢುಂ
ನಾಶಕ್ನೋದ್ ಭೂರಿಭಾರಾಧಿಕಾರ್ತ್ತಾ ।
ನಿಧಾಯ ತಂ ಭೂಮಿತಳೇ ಸ್ವಕರ್ಮ್ಮ ಯದಾ
ಚಕ್ರೇ ದೈತ್ಯ ಆಗಾತ್ ಸುಘೋರಃ ॥೧೨.೧೧೬॥
ಒಮ್ಮೆ ಯಶೋದೆ ಕೃಷ್ಣನ ಎತ್ತಿ ಮುದ್ದಾಡುತ್ತಿದ್ದ ಸಮಯ,
ಅವಳಿಗಾಯಿತು ಅವನು ಅತ್ಯಂತ ಭಾರವಾದ ಅನುಭವ.
ಎತ್ತಲಾರದೆ ಯಶೋದೆ ಕೃಷ್ಣನ ಮಲಗಿಸುತ್ತಾಳೆ ನೆಲದ ಮೇಲೆ,
ಕೆಲಸದಲ್ಲಿರಲವಳು ಘೋರದೈತ್ಯನ ಆಗಮನ ಆಗುತ್ತದಾಗಲೇ.
ತೃಣಾವರ್ತ್ತೋ ನಾಮತಃ ಕಂಸಭೃತ್ಯಃ
ಸೃಷ್ಟ್ವಾsತ್ಯುಗ್ರಂ ಚಕ್ರವಾತಂ ಶಿಶುಂ ತಮ್ ।
ಆದಾಯಾsಯಾದನ್ತರಿಕ್ಷ ಸ ತೇನ ಶಸ್ತಃ ಕಣ್ಠಗ್ರಾಹಸಂರುದ್ಧವಾಯುಃ ॥೧೨.೧೧೭॥
ಹೆಸರಿನಿಂದ ತೃಣಾವರ್ತನಾಗಿರುವ ಆ ದೈತ್ಯ,
ಭೀಕರ ಸುಂಟರಗಾಳಿ ಸೃಷ್ಟಿಸಿದ ಕಂಸನ ಭೃತ್ಯ.
ನೆಲದ ಮೇಲಿದ್ದ ಕೃಷ್ಣನ ಆಕಾಶಕ್ಕೆ ಕೊಂಡೊಯ್ದ ಮೇಲೆತ್ತಿ,
ಆದರೆ ಕೃಷ್ಣ ಉಸಿರುಗಟ್ಟಿಸಿ ನಿಗ್ರಹಿಸಿದ ಅವನ ಕತ್ತನ್ನೊತ್ತಿ.
ಪಪಾತ ಕೃಷ್ಣೇನ ಹತಃ ಶಿಲಾತಳೇ
ತೃಣಾವರ್ತ್ತಃ ಪರ್ವತೋದಗ್ರದೇಹಃ ।
ಸುವಿಸ್ಮಯಂ ಚಾsಪುರಥೋ ಜನಾಸ್ತೇ ತೃಣಾವರ್ತ್ತಂ ವೀಕ್ಷ್ಯ ಸಞ್ಚೂರ್ಣ್ಣಿತಾಙ್ಗಮ್ ॥೧೨.೧೧೮॥
ಹೀಗೆ ಕೃಷ್ಣನಿಂದ ಕೊಲ್ಲಲ್ಪಟ್ಟ ಆ ದೈತ್ಯ ತೃಣಾವರ್ತ,
ಬಂಡೆಮೇಲೆ ಬಿದ್ದವನ ದೇಹ ಹೋಲುತ್ತಿತ್ತು ಪರ್ವತ.
ಪುಡಿಪುಡಿಯಾದ ತೃಣಾವರ್ತನ ಕಂಡವರಾದರು ಚಕಿತ.
ಅಕ್ರುದ್ಧ್ಯತಾಂ ಕೇಶವೋsನುಗ್ರಹಾಯ ಶುಭಂ ಸ್ವಯೋಗ್ಯಾದಧಿಕಂ ನಿಹನ್ತುಮ್ ।
ಸ ಕ್ರುದ್ಧ್ಯತಾಂ ನವನೀತಾದಿ
ಮುಷ್ಣಂಶ್ಚಚಾರ ದೇವೋ ನಿಜಸತ್ಸುಖಾಮ್ಬುಧಿಃ ॥೧೨.೧೧೯॥
ಕೋಪಗೊಳ್ಳದ ಜನರ ಅನುಗ್ರಹಿಸುವುದಕ್ಕಾಗಿ,
ಕೋಪಗೊಳ್ಳುವರ ಹೆಚ್ಚುಪುಣ್ಯ ನಿಗ್ರಹಿಸುವುದಕ್ಕಾಗಿ,
ಶ್ರೀಕೃಷ್ಣ ಸಂಚರಿಸಿದ ಬೆಣ್ಣೆ ಕದಿಯುವವನಾಗಿ.
ಎಣಿಕೆಗೆಟುಕದ ಅಗಣಿತನವ ಮಹಾಯೋಗಿ.[Contributed by Shri Govind Magal]
No comments:
Post a Comment
ಗೋ-ಕುಲ Go-Kula