ಸ ಸರ್ವವಿದ್ ಬಲವಾನಸ್ತ್ರವೇತ್ತಾ ಕೃಪಸ್ವಸಾಯಾಂ ದ್ರೋಣವೀರ್ಯ್ಯೋದ್ಭವೋsಭೂತ್ ।
ದುರ್ಯ್ಯೋಧನಸ್ತಚ್ಚತುರ್ತ್ಥೇsಹ್ನಿ ಜಾತಸ್ತಸ್ಯಾಪರೇದ್ಯುರ್ಭೀಮಸೇನಃ ಸುಧೀರಃ ॥೧೨.೧೦೫॥
ಎಲ್ಲವನ್ನೂ ಬಲ್ಲವನೂ ಬಲಿಷ್ಠನೂ ಆಗಿದ್ದ ಆ ಅಶ್ವತ್ಥಾಮಾಚಾರ್ಯ,
ಕೃಪನತಂಗಿ ಕೃಪಿ ಮತ್ತು ದ್ರೋಣರಲ್ಲಿ ತಾಳಿಬಂದ ಅವ ಅವತಾರ
ಅಶ್ವತ್ಥಾಮ ಹುಟ್ಟಿದ ನಾಕು ದಿನಗಳ ನಂತರ ಹುಟ್ಟಿದ ದುರ್ಯೋಧನ,
ದುರ್ಯೋಧನ ಹುಟ್ಟಿದ ಮಾರನೇ ದಿನ ಅವತರಿಸಿದ ಭೀಮಸೇನ.
ಯದಾ ಸ ಮಾಸದ್ವಿತಯೀ ಬಭೂವ ತದಾ
ರೋಹಿಣ್ಯಾಂ ಬಲದೇವೋsಭಿಜಾತಃ ।
ಬಲೀ ಗುಣಾಢ್ಯಃ ಸರ್ವವೇದೀ ಯ ಏವ
ಸೇವಾಖಿನ್ನೋ ಲಕ್ಷ್ಮಣೋsಗ್ರೇ ಹರೇರ್ಭೂತ್ ॥೧೨.೧೦೬॥
ಅತ್ಯಂತ ಬಲಿಷ್ಠ ಗುಣವಂತ ಮತ್ತು ಎಲ್ಲವನ್ನೂ ಬಲ್ಲ ಪರಾಕ್ರಮಿಯಾತ,
ಭೀಮಗೆರಡು ತಿಂಗಳಿದ್ದಾಗ ರೋಹಿಣಿಯಲ್ಲಿ ಹುಟ್ಟಿದ ಬಲರಾಮನಾಗಿ ಆತ.
ತ್ರೇತೆಯಲ್ಲಿ ರಾಮನ ತಮ್ಮನಾಗಿ ಸೇವೆಗೈದು ಪರಿಶ್ರಾಂತನಾದ ಲಕ್ಷ್ಮಣ,
ಈಗ ಪರಮಾತ್ಮನಿಗಿಂತ ಮೊದಲೇ ಬಲರಾಮನಾಗಿ ಜನಿಸಿದ್ದಕ್ಕೆ ಕಾರಣ.
ಯದಾ ಹಿ ಪುತ್ರಾನ್ ವಿನಿಹನ್ತುಮೇತೌ
ಸಹೈವ ಬದ್ಧೌ ಗತಿಶೃಙ್ಖಲಾಯಾಮ್ ।
ಕಂಸೇನಾಪಾಪೌ ದೇವಕೀಶೂರಪುತ್ರೌ
ವಿಯೋಜಿತಾಃ ಶೌರಿಭಾರ್ಯ್ಯಾಃ ಪರಾಶ್ಚ ॥೧೨.೧೦೭॥
ಕಂಸನಿಂದ ದೇವಕೀಪುತ್ರರನ್ನು ಕೊಲ್ಲುವ ಆಲೋಚನ-ತೀರ್ಮಾನ,
ದ್ರೋಹರಹಿತ ವಸುದೇವ ದೇವಕಿಯರಿಗೆ ನಡೆಸಂಕೋಲೆಯ ಬಂಧನ.
ಆಗ ಮಾಡಿದ ವಸುದೇವನ ಬೇರೆ ಪತ್ನಿಯರ ದೂರವಿಡುವ ಶಾಸನ.
ವಿನಿಶ್ಚಯಾರ್ತ್ಥಂ
ದೇವಕೀಗರ್ಭಜಾನಾಮನ್ಯಾ ಭಾರ್ಯ್ಯಾ ಧೃತಗರ್ಭಾಃ ಸ ಕಂಸಃ ।
ಸ್ಥಾನಾನ್ತರೇ ಪ್ರಸವೋ ಯಾವದಾಸಾಂ
ಸಂಸ್ಥಾಪಯಾಮಾಸ ಸುಪಾಪಬುದ್ಧಿಃ ॥೧೨.೧೦೮॥
ಅತ್ಯಂತ ಪಾಪಬುದ್ಧಿಯುಳ್ಳ ಕಂಸನ ವಿಶೇಷ ನೀತಿ,
ದೇವಕಿಯಲ್ಲಿ ಹುಟ್ಟುವ ಮಕ್ಕಳ ತಿಳಿಯುವ ರೀತಿ.
ವಸುದೇವನ ಇತರ ಪತ್ನಿಯರು ಗರ್ಭ ಧರಿಸಿದ ತಕ್ಷಣ,
ಗೊಂದಲಕ್ಕೆಡೆಯಿರದೆ ಅವರ ಸ್ಥಳಾಂತರಿಸುತ್ತಿದ್ದ ಕಾರಣ.
ಹೇತೋರೇತಸ್ಮಾದ್ ರೋಹಿಣೀ ನನ್ದಗೇಹೇ
ಪ್ರಸೂತ್ಯರ್ತ್ಥಂ ಸ್ಥಾಪಿತಾ ತೇನ ದೇವೀ ।
ಲೇಭೇ ಪುತ್ರಂ ಗೋಕುಲೇ
ಪೂರ್ಣ್ಣಚನ್ದ್ರಕಾನ್ತಾನನಂ ಬಲಭದ್ರಂ ಸುಶುಭ್ರಮ್ ॥೧೨.೧೦೯॥
ಹೀಗಾಗಿ ಗರ್ಭಿಣಿ ರೋಹಿಣಿ ನಂದನ ಮನೆಯಲ್ಲಿ ಇಡಲ್ಪಟ್ಟಿದ್ದಳು,
ಅಲ್ಲಿ ಪೂರ್ಣಚಂದ್ರ ಮುಖದ ಪವಿತ್ರ ಬಲಭದ್ರನ ಪಡೆದಳು.
No comments:
Post a Comment
ಗೋ-ಕುಲ Go-Kula