Thursday, 23 May 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 04 - 06

ಸ ಕದಾಚಿಚ್ಛಶುಭಾವಂ ಕುರ್ವನ್ತ್ಯಾ ಮಾತುರಾತ್ಮನೋ ಭೂಯಃ ।
ಅಪನೇತುಂ ಪರಮೇಶೋ ಮೃದಂ ಜಘಾಸೇಕ್ಷತಾಂ ವಯಸ್ಯಾನಾಮ್ ॥೧೩.೦೪॥
ಎಲ್ಲರಿಗೂ ಒಡೆಯನಾದವನು ಶ್ರೀಕೃಷ್ಣ - ಅವನೇ ಶ್ರೀಮನ್ನಾರಾಯಣ,
ತಾಯಿಗೆ ಸುತ್ತಿಕೊಂಡಿತ್ತು ಇದು ನನ್ನ ಮಗುವೆಂಬ ಮಮಕಾರದ ಆವರಣ.
ತಾಯಿಯ ಆ ಭಾವನೆ ನಾಶಮಾಡಲು ಕೃಷ್ಣನೆಂಬ ಆ ಕಂದ,
ತನ್ನ ಗೆಳೆಯರೆಲ್ಲ ನೋಡುತ್ತಿರುವಂತೆಯೇ ಮಣ್ಣನ್ನು ತಿಂದ.

ಮಾತ್ರೋಪಾಲಾಬ್ದ ಈಶೋ ಮುಖವಿವೃತಿಮಕರ್ನ್ನಾಮ್ಬ ಮೃದ್ಭಕ್ಷಿತಾsಹಂ ।
ಪಶ್ಯೇತ್ಯಸ್ಯಾನ್ತರೇ ತು ಪ್ರಕೃತಿವಿಕೃತಿಯುಕ್ ಸಾ ಜಗತ್ ಪರ್ಯ್ಯಪಶ್ಯತ್ ।
ಇತ್ಥಂ ದೇವೋsತ್ಯಚಿನ್ತ್ಯಾಮಪರದುರಧಿಗಾಂ ಶಕ್ತಿಮುಚ್ಚಾಂ ಪ್ರದರ್ಶ್ಯ
ಪ್ರಾಯೋ ಜ್ಞಾತಾತ್ಮತತ್ತ್ವಾಂ ಪುನರಪಿ ಭಗವಾನಾವೃಣೋದಾತ್ಮಶಕ್ತ್ಯಾ ॥೧೩.೦೫॥
ಎಲ್ಲೀ ಕೃಷ್ಣಾ ಬಾಯಿತೆರೆ ಎಂದಳು ತಾಯಿ ಯಶೋದೆ,
ನಾ ಮಣ್ತಿನ್ಲಿಲ್ಲಮ್ಮಾ ಎನ್ನುತ್ತಾ ಬಾಯಿತೆರೆದ ಜಗದತಂದೆ.
ಆಗ ಯಶೋದೆಗೆ ಪ್ರಕೃತಿ ವಿಕೃತಿಯಿಂದ ಕೂಡಿದ ಜಗದ ದರ್ಶನ,
ಬೇರಾರೂ ತಿಳಿಯಲಾಗದ ತನ್ನ ಸ್ವರೂಪಶಕ್ತಿಯ  ತೋರಿದಾ ಕ್ಷಣ.
ಹೆಚ್ಚಾಗಿ ತನ್ನ ತಿಳಿದ ಯಶೋದೆಗೆ ಮತ್ತೆ ಮಾಡಿದ ಮೋಹದಾವರಣ.

ಇತಿ ಪ್ರಭುಃ ಸ ಲೀಲಯಾ ಹರಿರ್ಜ್ಜಗದ್ ವಿಡಮ್ಬಯನ್ ।
ಚಚಾರ ಗೋಷ್ಠಮಣ್ಡಲೇsಪ್ಯನನ್ತಸೌಖ್ಯಚಿದ್ಘನಃ ॥೧೩.೦೬॥
ಈರೀತಿಯಾಗಿ ಸರ್ವಸಮರ್ಥನಾದ ಶ್ರೀಕೃಷ್ಣ,
ತನ್ನ ಲೀಲೆಯ ತೋರಿದ್ದು -ಲೋಕಾನುಕರಣ.
ಆ ಗೋವುಗಳ ಗ್ರಾಮದಲ್ಲಿ ಎಣೆಯಿರದ ಸುಖದ ಧಾರ,
ಹರಿಸುತ್ತಾ ಮಾಡಿದ ಜ್ಞಾನಾನಂದದೇಹಿ ತಾನು ಸಂಚಾರ.

No comments:

Post a Comment

ಗೋ-ಕುಲ Go-Kula