Tuesday, 11 June 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 14 - 18

ಅಥಾsತ್ತಯಷ್ಟಿಮೀಕ್ಷ್ಯ ತಾಂ ಸ್ವಮಾತರಂ ಜಗದ್ಗುರುಃ ।
ಪ್ರಪುಪ್ಲುವೇ ತಮನ್ವಯಾನ್ಮನೋವಿದೂರಮಙ್ಗನಾ ॥೧೩.೧೪॥
ನಂತರ ಕೋಲನ್ನು ತೆಗೆದುಕೊಂಡ ತನ್ನ ತಾಯಿಯ ನೋಡಿದ,
ಜಗದ್ಗುರು ಶ್ರೀಕೃಷ್ಣ ತನ್ನ ಲೀಲೆಯನ್ನು ತೋರುತ್ತಾ ಹಾರಿಓಡಿದ.
ಮನಸ್ಸಿಗೇ ನಿಲುಕದ ಮಹಾಮಹಿಮ ಅವನು,
ಯಶೋದೆ ಅವನನುಸರಿಸಿ ಓಡಿದಳು ತಾನು.

ಪುನಃ ಸಮೀಕ್ಷ್ಯ ತಚ್ಛ್ರಮಂ ಜಗಾಮ ತತ್ಕರಗ್ರಹಮ್ ।
ಪ್ರಭುಃ ಸ್ವಭಕ್ತವಶ್ಯತಾಂ ಪ್ರಕಾಶಯನ್ನುರುಕ್ರಮಃ ॥೧೩.೧೫॥
ಉತ್ಕೃಷ್ಟ ಪಾದವಿನ್ಯಾಸವುಳ್ಳ ಭಗವಂತ,
ನೋಡಿದ ಶ್ರಮದಿ ಬಳಲಿದ ತನ್ನ ತಾಯಿಯತ್ತ.
ತಾಯಿಯ ಕೈಸೆರೆಯಾಗಿ ಸಿಕ್ಕ ಜಗದ ಸ್ವಾಮಿ,
ತೋರಿದ ತಾನೆಂದೂ ವಶವಾಗುವ ಭಕ್ತಪ್ರೇಮಿ.

ಸದಾ ವಿಮುಕ್ತಮೀಶ್ವರಂ ನಿಬದ್ಧುಮಞ್ಜಸಾssದದೇ ।
ಯದೈವ ದಾಮ ಗೋಪಿಕಾ ನ ತತ್ ಪುಪೂರ ತಂ ಪ್ರತಿ ॥೧೩.೧೬॥
ನಿತ್ಯಮುಕ್ತನಾದವನು ಅವನು ಭಗವಂತ,
ಯಶೋದೆ ಹಗ್ಗ ತಂದಳವನ ಕಟ್ಟಬೇಕಂತ.
ಸಾಲದಾಯ್ತು ಹಗ್ಗ -ಅವ ಕಟ್ಟಲಾಗದ ವಿಮುಕ್ತ.

ಸಮಸ್ತದಾಮಸಞ್ಚಯಃ ಸುಸನ್ಧಿತೋsಪ್ಯಪೂರ್ಣ್ಣತಾಮ್ ।
ಯಯಾವನನ್ತವಿಗ್ರಹೇ ಶಿಶುತ್ವಸಮ್ಪ್ರದರ್ಶಕೇ ॥೧೩.೧೭॥
ಸೇರಿಸಿದಳು ಯಶೋದೆ ಅಲ್ಲಿದ್ದ ಎಲ್ಲಾ ಹಗ್ಗಗಳ ಸಮೂಹ,
ಬಂಧಿಸದಾಯಿತದು ಶಿಶುರೂಪಿ ಕೃಷ್ಣನ ಎಣೆಯಿರದ ದೇಹ.

ಅಬನ್ಧಯೋಗ್ಯತಾಂ ಪ್ರಭುಃ ಪ್ರದರ್ಶ್ಯ ಲೀಲಯಾ ಪುನಃ ।
ಸ ಏಕವತ್ಸಪಾಶಕಾನ್ತರಂ ಗತೋsಖಿಲಮ್ಭರಃ ॥೧೩.೧೮॥
ಸರ್ವಸಮರ್ಥ ಕೃಷ್ಣ ತೋರಿದ ತಾನು ಸಿಗುವವನಲ್ಲ ಅನಾಯಾಸವಾಗಿ,
ಮರುಕ್ಷಣವೇ ಕರುಕಟ್ಟುವ ಚಿಕ್ಕ ಹಗ್ಗದಿಂದ ಕಟ್ಟಿಸಿಕೊಂಡ ತಾನೇ ಬಾಗಿ. 

[Contributed by Shri Govind Magal]

No comments:

Post a Comment

ಗೋ-ಕುಲ Go-Kula