Saturday, 29 June 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 26 - 29


ವೃನ್ದಾವನಯಿಯಾಸುಃ ಸ  ನನ್ದಸೂನುರ್ಬೃಹದ್ವನೇ ।
ಸಸರ್ಜ್ಜ ರೋಮಕೂಪೇಭ್ಯೋ ವೃಕಾನ್ ವ್ಯಾಘ್ರಸಮಾನ್ ಬಲೇ ॥೧೩.೨೬॥
ನಂದಗೋಪನ ಮಗನಾಗಿರುವ ಶ್ರೀಕೃಷ್ಣ,
ಗೋಕುಲ ಬಿಟ್ಟು ವೃಂದಾವನಕ್ಕೆ ಹೋಗಲಿಚ್ಛೆ ಪಟ್ಟ.
ಅದಕ್ಕಾಗಿ ತೋರಲೆಂದು ಪ್ರಬಲ ಕಾರಣ,
ನಿರ್ಮಿಸಲಿಚ್ಛಿಸಿದ ಭಯದ ವಾತಾವರಣ.
ಆ ಬೃಹದ್ವನದಲ್ಲಿ ತನ್ನ ರೋಮಕೂಪದಿಂದ,
ಹುಲಿಸದೃಶ ಅಸಂಖ್ಯ ತೋಳಗಳ ಸೃಷ್ಟಿ ಮಾಡಿದ.
ಅನೇಕಕೋಟಿಸಙ್ಘೈಸ್ತೈಃ ಪೀಡ್ಯಮಾನಾ ವ್ರಜಾಲಯಾಃ ।
ಯಯುರ್ವೃನ್ದಾವನಂ ನಿತ್ಯಾನನ್ದಮಾದಾಯ ನನ್ದಜಮ್ ॥೧೩.೨೭॥
ಎಲ್ಲಿ ನೋಡಿದರೂ ಕೋಟಿಕೋಟಿ ತೋಳಗಳ ಹಿಂಡು,
ಭಯಪೀಡಿತವಾಯಿತು ಗೋಕುಲವಾಸಿಗಳ ಆ  ದಂಡು.
ಕರೆದುಕೊಂಡು ನಿತ್ಯಾನಂದನಾದ ನಂದಪುತ್ರ ಕೃಷ್ಣನ,
ಗೋಕುಲವಾಸಿಗಳು ವಲಸೆಹೋಗಿ ಸೇರಿದರು ವೃಂದಾವನ.

ಇನ್ದಿರಾಪತಿರಾನನ್ದಪೂರ್ಣ್ಣೋ ವೃನ್ದಾವನೇ ಪ್ರಭುಃ ।
ನನ್ದಯಾಮಾಸ ನನ್ದಾದೀನುದ್ದಾಮತರಚೇಷ್ಟಿತೈಃ ॥೧೩.೨೮॥
ಆನಂದಪೂರ್ಣ ಸರ್ವಸಮರ್ಥ ಇಂದಿರಾಪತಿ ಗೋವಿಂದ,
ತನ್ನ ಉತ್ಕೃಷ್ಟ ಲೀಲೆಗಳಿಂದ ನಂದಾದಿಗಳಿಗೆ ನೀಡಿದ ಆನಂದ.

ಸ ಚನ್ದ್ರತೋ ಹಸತ್ಕಾನ್ತವದನೇನೇನ್ದುವರ್ಚ್ಚಸಾ ।
ಸಂಯುತೋ ರೌಹಿಣೇಯೇನ ವತ್ಸಪಾಲೋ ಬಭೂವ ಹ ॥೧೩.೨೯॥
ಚಂದ್ರಕಾಂತಿಗೂ ಮೀರಿದ ಮುಗುಳುನಗುವಿನಿಂದ,
ಶ್ರೀಕೃಷ್ಣನದು ಮನೋಹರವಾದ ಮುಖದ ಚೆಂದ.
ಚಂದ್ರಕಾಂತಿಯ ಬಲರಾಮನ ಕೂಡಿಕೊಂಡು,
ಮೇಯಿಸತಕ್ಕವನಾದ ಆಕಳಕರುಗಳ ಹಿಂಡು.

No comments:

Post a Comment

ಗೋ-ಕುಲ Go-Kula