ಸುತಸ್ಯ ಮಾತೃವಶ್ಯತಾಂ ಪ್ರದರ್ಶ್ಯ ಧರ್ಮ್ಮಮೀಶ್ವರಃ ।
ಬಭಞ್ಜ ತೌ ದಿವಿಸ್ಪೃಶೌ ಯಮಾರ್ಜ್ಜುನೌ ಸುರಾತ್ಮಜೌ ॥೧೩.೧೯॥
ಶ್ರೀಕೃಷ್ಣ ತೋರಿದ
ತಾಯಿಗೆ ವಶವಾಗುವುದು ಮಗನ ಧರ್ಮ,
ಮೂಲದಿ
ಕುಬೇರಪುತ್ರರಾಗಿದ್ದ ಮತ್ತೀಮರಗಳ ಕಿತ್ತ ಮರ್ಮ.
ಗಗನಚುಂಬೀ
ಅವಳಿಮತ್ತೀಮರಗಳ ಮುರಿದ ಬಾಲ ಶ್ಯಾಮ.
ಪುರಾ ಧುನಿಶ್ಚುಮುಸ್ತಥಾsಪಿ ಪೂತನಾಸಮನ್ವಿತೌ ।
ಅನೋಕ್ಷಸಂಯುತೌ ತಪಃ ಪ್ರಚಕ್ರತುಃ ಶಿವಾಂ ಪ್ರತಿ ।
ತಯಾ ವರೋsಪ್ಯವದ್ಧ್ಯತಾ ಚತುರ್ಷು ಚ ಪ್ರಯೋಜಿತಃ ॥೧೩.೨೦॥
ಹಿಂದೆ ದುನಿ ಮತ್ತು
ಚುಮು ಎಂಬ ರಕ್ಕಸರಿಬ್ಬರು,
ಪೂತನೆ ಶಕಟನೊಂದಿಗೆ
ಸೇರಿ ತಪವ ಮಾಡಿದ್ದರು.
ಪಾರ್ವತಿ ಕುರಿತ
ತಪದಿಂದ ಅವಧ್ಯತ್ವ ಪಡೆದಿದ್ದರು.
ಅನನ್ತರಂ ತೃಣೋದ್ಭೃಮಿಸ್ತಪೋsಚರದ್ ವರಂ ಚ ತಮ್ ।
ಅವಾಪ ತೇ ತ್ರಯೋ ಹತಾಃ ಶಿಶುಸ್ವರೂಪವಿಷ್ಣುನಾ ॥೧೩.೨೧॥
ಧುನಿಶ್ಚುಮುಶ್ಚ ತೌ ತರೂ ಸಮಾಶ್ರಿತೌ ನಿಸೂದಿತೌ ।
ತರುಪ್ರಭಙ್ಗತೋsಮುನಾ ತರೂ ಚ ಶಾಪಸಮ್ಭವೌ ॥೧೩.೨೨॥
ಪುರಾ ಹಿ ನಾರದಾನ್ತಿಕೇ ದಿಗಮ್ಬರೌ ಶಶಾಪ ಸಃ ।
ಧನೇಶಪುತ್ರಕೌ ದ್ರುತಂ ತರುತ್ವಮಾಪ್ನುತಂ ತ್ವಿತಿ ॥೧೩.೨೩॥
ದುನಿ ಮತ್ತು
ಚುಮುಗೆ ಸಿಕ್ಕಿತು ಅವಧ್ಯತ್ವದ ವರ,
ತೃಣಾವರ್ತನೂ ಅದೇ
ವರ ಪಡೆದ ತಪಸ್ಸಿನ ದ್ವಾರ.
ಶಿಶುಕೃಷ್ಣನಿಂದಾಗಿತ್ತು
ಪೂತನೆ ಶಕಟ ತೃಣಾವರ್ತರ ಸಂಹಾರ.
ಮತ್ತೀಮರದಿ
ಸೇರಿದ್ದ ಧುನಿ ಮತ್ತು ಚುಮು ಇಬ್ಬರು,
ಶ್ರೀಕೃಷ್ಣ ಆ ಮರಗಳ
ಕಿತ್ತಾಗ ಸಂಹರಿಸಲ್ಪಟ್ಟಿದ್ದರು.
ಅವರಿಬ್ಬರಲ್ಲದೆ ಆ
ಮರಗಳಲ್ಲಿ ಇನ್ನಿಬ್ಬರು ಶಾಪಗ್ರಸ್ತರಿದ್ದರು.
ಕುಬೇರನ ಮಕ್ಕಳಾದ
ನಳಕೂಬರ -ಮಣಿಗ್ರೀವ,
ನಾರದೆದುರು
ಬೆತ್ತಲೆಯಾಗಿ ಓಡಾಡಿದ ಪ್ರಭಾವ.
ಮರವಾಗಿ ಹುಟ್ಟಿ
ಎಂದು ಶಪಿಸಿದ್ದರು ನಾರದ ಮಹಾನುಭಾವ.
ತತೋ ಹಿ ತೌ ನಿಜಾಂ ತನುಂ ಹರೇಃ ಪ್ರಸಾದತಃ ಶುಭೌ ।
ಅವಾಪತುಃ ಸ್ತುತಿಂ ಪ್ರಭೋರ್ವಿಧಾಯ ಜಗ್ಮತುರ್ಗ್ಗೃಹಮ್ ॥೧೩.೨೪॥
ಇದೀಗ
ಕೃಷ್ಣಾನುಗ್ರಹದಿಂದ ಸಾತ್ವಿಕರಾದ ಕುಬೇರನ ಮಕ್ಕಳಿಬ್ಬರು,
ತಮ್ಮ ನೈಜದೇಹ
ಹೊಂದಿ ನಾರಾಯಣನ ಸ್ತುತಿಸಿ ಸ್ವಗೃಹಕೆ ಹೊರಟರು.
ನಳಕೂಬರಮಣಿಗ್ರೀವೌ ಮೋಚಯಿತ್ವಾ ತು ಶಾಪತಃ ।
ವಾಸುದೇವೋsಥ ಗೋಪಾಲೈರ್ವಿಸ್ಮಿತೈರಭಿವೀಕ್ಷಿತಃ ॥೧೩.೨೫॥
ಹೀಗೆ ನಳಕೂಬರ
ಮತ್ತು ಮಣಿಗ್ರೀವರದ್ದಾಗಿತ್ತು ಶಾಪದಿಂದ ಬಿಡುಗಡೆ,
ಇದನ್ನ ಮಾಡಿದ್ದ ಶ್ರೀಕೃಷ್ಣನ ಅಚ್ಚರಿಯಿಂದ ನೋಡಿತ್ತು
ಗೋಪಾಲಕರ ಪಡೆ.[Contributed by Shri Govind Magal]
No comments:
Post a Comment
ಗೋ-ಕುಲ Go-Kula