ದೈತ್ಯಂ ಸ ವತ್ಸತನುಮಪ್ರಮಯಃ ಪ್ರಗೃಹ್ಯ ಕಂಸಾನುಗಂ
ಹರವರಾದಪರೈರವದ್ಧ್ಯಮ್ ।
ಪ್ರಕ್ಷಿಪ್ಯ ವೃಕ್ಷಶಿರಸಿ ನ್ಯಹನದ್ ಬಕೋsಪಿ ಕಂಸಾನುಗೋsಥ ವಿಭುಮಚ್ಯುತಮಾಸಸಾದ ॥೧೩.೩೦॥
ಯಾರಿಂದಲೂ
ತಿಳಿಯಲಾಗದಂಥ ಸಂಪೂರ್ಣ,
ಅವನು ಹೋಲಿಸಲಾಗದ
ಪರಾಕ್ರಮದ ಶ್ರೀಕೃಷ್ಣ.
ರುದ್ರವರದಿಂದ
-ಇನ್ಯಾರಿಂದಲೂ ಕೊಲ್ಲಲಾಗದ ಕಂಸನ ಭೃತ್ಯ,
ಕರುವಿನಂತೆಯೇ ಶರೀರ
ಹೊಂದಿ ಬಂದಿದ್ದನವ ಆ ದೈತ್ಯ.
ಶ್ರೀಕೃಷ್ಣ ಮರದ
ಮೇಲೆ ಎಸೆದು ಅವನ ಕೊಂದ,
ಕಂಸಭೃತ್ಯ ಬಕನೂ
ಸರ್ವಶಕ್ತ ಕೃಷ್ಣನ ಬಳಿ ಬಂದ.
ಸ್ಕನ್ದಪ್ರಸಾದಕವಚಃ ಸ ಮುಖೇ ಚಕಾರ ಗೋವಿನ್ದಮಗ್ನಿವದಮುಂ ಪ್ರದಹನ್ತಮುಚ್ಚೈಃ; ।
ಚಚ್ಛರ್ದ್ದ ತುಣ್ಡಶಿರಸೈವ ನಿಹನ್ತುಮೇತಮಾಯಾನ್ತಮೀಕ್ಷ್ಯ ಜಗೃಹೇsಸ್ಯ ಸ ತುಣ್ಡಮೀಶಃ ॥೧೩.೩೧॥
ಆ ಬಕ ಸ್ಕಂದಾನುಗ್ರಹದ
ಕವಚ ಹೊಂದಿದ್ದ,
ತನ್ನ ಬಾಯಿಂದ
ಶ್ರೀಕೃಷ್ಣನನ್ನೇ ಅವ ನುಂಗಿದ.
ಬೆಂಕಿಯಂತೆ
ಚೆನ್ನಾಗಿ ಅವನೊಳಗೆ ಸುಡುತ್ತಿದ್ದ ಶ್ರೀಕೃಷ್ಣ,
ಬಕನಿಂದ ವಾಂತಿ
ಮಾಡಿಸಿದ ಕೃಷ್ಣ ತೀವ್ರಗೊಳಿಸಿ ಉಷ್ಣ.
ಬಕ ತನ್ನ
ಕೊಕ್ಕಿನಿಂದ ಕೃಷ್ಣನ ಕೊಲ್ಲಲು ಬಂದ,
ಹಾಗೆ ಬಂದ ಬಕನ
ಕೊಕ್ಕನ್ನು ಶ್ರೀಕೃಷ್ಣ ಹಿಡಿದ.
ತುಣ್ಡದ್ವಯಂ ಯದುಪತಿಃ ಕರಪಲ್ಲವಾಭ್ಯಾಂ ಸಙ್ಗೃಹ್ಯ ಚಾsಶು
ವಿದದಾರ ಹ ಪಕ್ಷಿದೈತ್ಯಮ್ ।
ಬ್ರಹ್ಮಾದಿಭಿಃ ಕುಸುಮವರ್ಷಿಭಿರೀಡ್ಯಮಾನಃ ಸಾಯಂ ಯಯೌ ವ್ರಜಭುವಂ ಸಹಿತೋsಗ್ರಜೇನ
॥೧೩.೩೨॥
ಯದುಪತಿ ಶ್ರೀಕೃಷ್ಣ
ತನ್ನೆರಡು ಕೈಗಳಿಂದ,
ಅವನ ಕೊಕ್ಕೆಗಳ
ಹಿಡಿದು ಸೀಳಿದ.
ಬ್ರಹ್ಮಾದಿಗಳ
ಹೂಮಳೆ ಸ್ತೋತ್ರಗಳಿಂದ ವಂದಿತನಾಗಿ
ಶ್ರೀಕೃಷ್ಣ
ವೃಂದಾವನಕ್ಕೆ ತೆರಳಿದ ತನ್ನ ಅಣ್ಣನ ಸಮೇತನಾಗಿ.
ಏವಂ ಸ ದೇವವರವನ್ದಿತಪಾದಪದ್ಮೋ ಗೋಪಾಲಕೇಷು ವಿಹರನ್ ಭುವಿ
ಷಷ್ಠಮಬ್ದಮ್ ।
ಪ್ರಾಪ್ತೋ ಗವಾಮಖಿಲಪೋsಪಿ ಸ ಪಾಲಕೋsಭೂದ್
ವೃನ್ದಾವನಾನ್ತರಗಸಾನ್ದ್ರಲತಾವಿತಾನೇ ॥೧೩. ೩೩॥
ಈ ರೀತಿಯಾಗಿ
ಶ್ರೇಷ್ಠ ದೇವತೆಗಳಿಂದ,
ಶ್ರೀಕೃಷ್ಣಪಾದಕಮಲಗಳವು
ಸದಾವಂದ್ಯ.
ಗೋಪಾಲಕರೊಡನೆ
ಆಡುತ್ತಾ ವಿವಿಧ ಆಟ,
ಭುವಿಯಲ್ಲಿ ಕೃಷ್ಣ
ತನ್ನ ಆರನೇ ವರ್ಷಕ್ಕೆ ಕಾಲಿಟ್ಟ.
ತಾನಾಗಿದ್ದರೂ
ಸರ್ವಜಗದ ಸರ್ವಕಾಲದ ಸರ್ವಪಾಲಕ,
ಬಳ್ಳಿಭರಿತ ವೃಂದಾವನಮಧ್ಯ ಕಂಡನಾಗಿ ಗೋಪಾಲಕ.[Contributed by Shri Govind Magal]