Sunday, 26 July 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 58 - 62

ಅಥ ಪೃಷ್ಟೋ ದಕ್ಷಿಣಾರ್ತ್ಥಂ ದ್ರೋಣ ಆಹ ಕುಮಾರಕಾನ್ ।

ಬಧ್ವಾ ಪಾಞ್ಚಾಲರಾಜಾನಂ ದತ್ತೇತ್ಯೂಚುಸ್ತಥೇತಿ ತೇ ॥೧೮.೫೮॥

ತೇ ಧಾರ್ತ್ತರಾಷ್ಟ್ರಾಃ  ಕರ್ಣ್ಣೇನ ಸಹಿತಾಃ ಪಾಣ್ಡವಾ ಅಪಿ ।

ಯಯುರ್ದ್ದ್ರೋಣೇನ ಸಹಿತಾಃ ಪಾಞ್ಚಾಲನಗರಂ ಪ್ರತಿ ॥೧೮.೫೯॥

ಆನಂತರ ಗುರುದಕ್ಷಿಣೆ ಏನು ಬೇಕೆಂದು ದ್ರೋಣರಲ್ಲಿ ಕೇಳಿದರು ಎಲ್ಲಾ ಕುಮಾರರು ,

ಪಾಂಚಾಲರಾಜನಾದ ದ್ರುಪದನ ಕಟ್ಟಿ ತಂದೊಪ್ಪಿಸಿ ಅಂದರು ದ್ರೋಣಾಚಾರ್ಯರು .

ಒಪ್ಪಿದ ಕರ್ಣಸಹಿತ ಕೌರವರು ದ್ರೋಣರ ಜೊತೆ ಪಾಂಡವರು ಪಾಂಚಾಲಕ್ಕೆ ಹೊರಟರು.

 

ಅಥಾsಹ ಭೀಮಃ ಸಾಮರ್ತ್ಥ್ಯವಿವೇಕಾಭೀಪ್ಸಯಾ ಗುರುಮ್ ।

ಗರ್ವ ಏಷ ಕುಮಾರಾಣಾಮನಿವಾರ್ಯ್ಯೋ ದ್ವಿಜೋತ್ತಮ ।

ಗಚ್ಛನ್ತ್ವೇತೇsಗ್ರತೋ ನೈಷಾಂ ವಶಗೋ ದ್ರುಪದೋ ಭವೇತ್ ॥೧೮.೬೦॥

ನಿವೃತ್ತೇಷ್ವಕೃತಾರ್ತ್ಥೇಷು ವಯಂ ಬಧ್ವಾ ರಿಪುಂ ತವ ।

ಆನಯಾಮ ನ ಸನ್ದೇಹ ಇತಿ ತಸ್ಥೌ ಸಸೋದರಃ ॥೧೮.೬೧॥

ನಂತರ ಗುರುದ್ರೋಣರಲ್ಲಿ ತಮ್ತಮ್ಮ ಸಾಮರ್ಥ್ಯ ತಿಳಿಸುವ ದೃಷ್ಟಿಯಿಂದ ಭೀಮಸೇನ,

ವಿಪ್ರೋತ್ತಮಾ, ಈ ದುರ್ಯೋಧನಾದಿಗಳಿಗೆಲ್ಲಾ  ಸಹಿಸಲಾಗದ ಗರ್ವ-ದುರಭಿಮಾನ .

ಇವರು ಈಗ ಮುಂದೆ ಹೋದರೂ ದ್ರುಪದರಾಜನು ಆಗಲಾರ ಇವರ ವಶ ,

ಹಿಂದಿರುಗಲಿ ಸೋತು,ನಾವು ಕಾರ್ಯ ಸಾಧಿಸುತ್ತೇವೆ ಸಂದೇಹ ಬೇಡ ಲೇಶ .

ಹೀಗೆಂದು ನುಡಿದು ಸೋದರರೊಡಗೂಡಿ ಹಿಂದೆಯೇ ನಿಂತನವನು ಪ್ರಾಣೇಶ .

 

ಸದ್ರೋಣಕೇಷು ಪಾರ್ತ್ಥೇಷು ಸ್ಥಿತೇಷ್ವನ್ಯೇ ಸಸೂತಜಾಃ ।

ಯಯುರಾತ್ತಪ್ರಹರಣಾಃ ಪಾಞ್ಚಾಲಾನ್ತಃಪುರಂ ದ್ರುತಮ್ ॥೧೮.೬೨॥

ಈ ತೆರನಾಗಿ ದ್ರೋಣರಿಂದ ಕೂಡಿದ ಪಾಂಡವರು ಹಿಂದೆ ನಿಂತರು ,

ಕರ್ಣನ ಕೂಡಿ ಕೌರವರು ಆಯುಧ ಹಿಡಿದು ಪಾಂಚಾಲವ  ಹೊಕ್ಕರು . 

[Contributed by Shri Govind Magal]

No comments:

Post a Comment

ಗೋ-ಕುಲ Go-Kula