ಆಜೀವಿನಾಂ ವೇತನದಸ್ತದಾssಸೀನ್ಮಾದ್ರೀಸುತಃ ಪ್ರಥಮೋsಥ ದ್ವಿತೀಯಃ ।
ಸನ್ಧಾನಭೇದಾದಿಷು
ಧರ್ಮರಾಜಪಶ್ಚಾಚ್ಚ ಖಡ್ಗೀ ಸ ಬಭೂವ ರಕ್ಷನ್ ॥೨೦.೦೫॥
ಮಾದ್ರೀಸುತ ನಕುಲನದು ಕೆಲಸಗಾರರ ಸಂಬಳ ಭತ್ಯೆ ಇತ್ಯಾದಿಗಳ ಉಸ್ತುವಾರಿ,
ಎರಡನೇ ಮಗ ಸಹದೇವನದು ಸಂಧಾನಭೇದದಿ ಖಡ್ಗ ಹಿಡಿದು ರಾಜನ ಕಾಯ್ವ
ಜವಾಬ್ದಾರಿ.
ಧೃಷ್ಟದ್ಯುಮ್ನಸ್ತತ್ರ
ಸೇನಾಪ್ರಣೇತಾ ಶಕ್ರಪ್ರಸ್ಥೇ ನಿತ್ಯಮಾಸ್ತೇsತಿಹಾರ್ದ್ದಾತ್ ।
ವಿಶೇಷತೋ ಭೀಮಸಖಾ ಸ
ಆಸೀದ್ ರಾಷ್ಟ್ರಂ ಚೈಷಾಂ ಸರ್ವಕಾಮೈಃ ಸುಪೂರ್ಣ್ಣಮ್ ॥೨೦.೦೬॥
ದೃಷ್ಟದ್ಯುಮ್ನಗಿತ್ತು ಪಾಂಡವರಲ್ಲಿ ಅತ್ಯಧಿಕವಾದ ಸ್ನೇಹ,
ಸೇನಾನಾಯಕನಾಗಿ ಇಂದ್ರಪ್ರಸ್ಥದಲ್ಲೇ ಇದ್ದ ಮಹಾನುಭಾವ.
ಭೀಮಸೇನನಿಗಾಗಿದ್ದ ಅವನು ವಿಶೇಷವಾದ ಸ್ನೇಹಿತ,
ಇವರೆಲ್ಲರಿಂದ ಕೂಡಿದ ರಾಷ್ಟ್ರವಾಗಿತ್ತು ಅದು ಸುಭಿಕ್ಷಿತ.
ನಾವೈಷ್ಣವೋ ನ ದರಿದ್ರೋ
ಬಭೂವ ನ ಧರ್ಮ್ಮಾಹಾನಿಶ್ಚ ಬಭೂವ ಕಸ್ಯಚಿತ್ ।
ತೇಷಾಂ ರಾಷ್ಟ್ರೇ ಶಾಸತಿ
ಭೀಮಸೇನೇ ನ ವ್ಯಾಧಿತೋ ನಾಪಿ ವಿಪರ್ಯ್ಯಯಾನ್ಮೃತಿಃ ॥೨೦.೦೭॥
ವಿಷ್ಣುವಿರೋಧ, ದಾರಿದ್ರ್ಯಗಳು
ಇರದೇ ಇತ್ತು ಆ ದೇಶ,
ಯಾರಿಗೂ ಆಗುತ್ತಿರಲಿಲ್ಲ ಎಂದೂ ಧರ್ಮಹಾನಿ ಲವಲೇಶ.
ಯಾರೂ ಸಾಯುತ್ತಿರಲಿಲ್ಲ -ರೋಗಗಳು ಆಗಿ ಕಾರಣ,
ಸಂಭವಿಸುತ್ತಿರಲಿಲ್ಲ ವಯೋಸಹಜವಲ್ಲದ ದುರ್ಮರಣ.
ಯುಧಿಷ್ಠಿರಂ ಯಾನ್ತಿ ಹಿ
ದರ್ಶನೋತ್ಸುಕಾಃ ಪ್ರತಿಗ್ರಹಾಯಾಪ್ಯಥ ಯಾಜನಾಯ ।
ಕಾರ್ಯ್ಯಾರ್ತ್ಥತೋ ನೈವ
ವೃಕೋದರೇಣ ಕಾರ್ಯ್ಯಾಣಿ ಸಿದ್ಧಾನಿ ಯತೋsಖಿಲಾನಿ ॥೨೦.೦೮॥
ದಾನಾರ್ಥಿಗಳಾಗಿ ದರ್ಶನಾರ್ಥಿಗಳಾಗಿ ಯಾಗಾರ್ಥಿಗಳಾಗಿ ಆಗುತ್ತಿತ್ತು
ಪ್ರಜೆಗಳಿಂದ ರಾಜನ ಭೇಟಿ,
ಬೇರಾವ ಕೆಲಸವಾಗಬೇಕೆಂದು ಯಾರೂ ಬರುತ್ತಿರಲಿಲ್ಲ -ಹಾಗಿತ್ತು ಭೀಮನ
ಕಾರ್ಯಸಿದ್ಧಿಯ ರೀತಿ.
ಗನ್ಧರ್ವವಿದ್ಯಾಧರಚಾರಣಾಶ್ಚ
ಸೇವನ್ತ ಏತಾನ್ತ್ಸತತಂ ಸಮಸ್ತಾಃ ।
ಯಥಾ ಸುರೇನ್ದ್ರಮ್
ಮುನಯಶ್ಚ ಸರ್ವ ಆಯಾನ್ತಿ ದೇವಾ ಅಪಿ ಕೃಷ್ಣಮರ್ಚ್ಚಿತುಮ್ ॥೧೦.೦೯॥
ಗಂಧರ್ವರು, ವಿದ್ಯಾಧರರು, ಚಾರಣರು ಇಂದ್ರನ ಪೂಜಿಸುವಂತೆ,
ಹಾಗೆಯೇ ಅವರೆಲ್ಲಾ ಬಂದು ಪಾಂಡವರನ್ನು ಸೇವಿಸುತ್ತಿದ್ದರಂತೆ.
ಸೇರುತ್ತಿತ್ತಂತೆ ಅಲ್ಲಿ ಕೃಷ್ಣಪೂಜೆಗೆಂದು ಮುನಿ ದೇವತೆಗಳ ಸಂತೆ.
ತೇಷಾಂ ರಾಷ್ಟ್ರೇ
ಕಾರ್ತ್ತಯುಗಾ ಹಿ ಧರ್ಮ್ಮಾಃ ಪ್ರವರ್ತ್ತಿತಾ ಏವ ತತೋsಧಿಕಾಶ್ಚ ।
ಋದ್ಧಿಶ್ಚ ತಸ್ಮಾದಧಿಕಾ
ಸುವರ್ಣ್ಣರತ್ನಾಮ್ಬರಾದೇರಪಿ ಸಸ್ಯಸಮ್ಪದಾಮ್ ॥೨೦.೧೦॥
ಪಾಂಡವ ರಾಜ್ಯದಲ್ಲಿ ನೆಲೆಸಿತ್ತು ಕೃತಯುಗದ ಧರ್ಮ,
ಅದಕ್ಕಿಂತ ಮಿಗಿಲೆನಿಸಿ ಅಧರ್ಮ ಸುಳಿಯದ ಮರ್ಮ.
ಹಾಗಾಗಿ -ಬಂಗಾರ ರತ್ನ ಪೀತಾಂಬರಗಳು ಹೇರಳ,
No comments:
Post a Comment
ಗೋ-ಕುಲ Go-Kula