॥ ಓಂ ॥
ಖಾಣ್ಡವದಾಹಃ
ಯಜ್ಞೋರುದಾನನರದೇವವನ್ದ್ಯತಾಪ್ರಶ್ನರ್ಷಿಪೂಜಾಸು
ಯುಧಿಷ್ಠಿರೋsಭೂತ್ ।
ಧರ್ಮ್ಮಾನುಶಾಸ್ತಿಹರಿತತ್ವಶಂಸನಸ್ವರಾಷ್ಟ್ರರಕ್ಷಾದಿಷು
ಭೀಮ ಆಸೀತ್ ॥೨೦.೦೧॥
ಯಜ್ಞ, ದಾನ, ಆಸ್ಥಾನಕ್ಕೆ ರಾಜರ ಬರಮಾಡಿಕೊಳ್ಳುವ ಕಾರ್ಯ,
ಮುನಿಗಳೊಂದಿಗೆ ತತ್ವವಿಚಾರ, ಋಷಿಪೂಜೆಗಳ ವಹಿಸಿಕೊಂಡ ಯುಧಿಷ್ಠಿರ.
ಧರ್ಮ ಅನುಶಾಸನ, ಪರತತ್ವಚಿಂತನ
ಮತ್ತು ರಾಷ್ಟ್ರರಕ್ಷಣ,
ಕಾರ್ಯಗಳನ್ನು ವಹಿಸಿಕೊಂಡು ಮುನ್ನಡೆದ ತಾ ಭೀಮಸೇನ.
ಸ್ತ್ರೀಧರ್ಮ್ಮಸಂಶಾಸನಭೃತ್ಯಕೋಶರಕ್ಷಾವ್ಯಯಾದೌ
ಗುಣದೋಷಚಿನ್ತನೇ ।
ಅನ್ತಃಪುರಸ್ಥಸ್ಯ ಜನಸ್ಯ
ಕೃಷ್ಣಾ ತ್ವಾಸೀದ್ಧರೇರ್ದ್ಧರ್ಮ್ಮನಿದರ್ಶನೀ ಚ ॥೨೦.೦೨॥
ಸ್ತ್ರೀಧರ್ಮ ಶಿಕ್ಷಣ, ಭೃತ್ಯ ಪೋಷಣೆ, ಕೋಶದ ರಕ್ಷಣೆ,
ಖರ್ಚುನಿರ್ವಹಣೆ,ಗುಣದೋಷ ಚಿಂತನೆ
ಕೃಷ್ಣೆಯಿಂದ ಪಾಲನೆ.
ಜೊತೆ ಅಂತಃಪುರ ಜನಕ್ಕೆ ಮಾಡುತ್ತಿದ್ದಳು ವಿಷ್ಣುಧರ್ಮಉಪದೇಶವನ್ನೆ.
ಭೀಭತ್ಸುರಾಸೀತ್
ಪರರಾಷ್ಟ್ರಮರ್ದ್ದನೇ ತೇನಾನಿಯಮ್ಯಾಂಸ್ತು ಜರಾಸುತಾದೀನ್ ।
ಸ ಕೀಚಕಾದೀಂಶ್ಚ
ಮಮರ್ದ್ದ ಭೀಮಸ್ತಸ್ಯೈವ ತೇ ಬಲತೋ ನಿತ್ಯಭೀತಾಃ ॥೨೦.೦೩॥
ಪರರಾಷ್ಟ್ರಗಳ ಅಂಕೆ, ಮರ್ದನ ನಿಯಮನ
ನೋಡುತ್ತಿದ್ದ ಅರ್ಜುನ,
ಅರ್ಜುನಗೆ ಮೀರಿದ ಜರಾಸಂಧ ಕೀಚಕಾದಿಗಳ ನಿಗ್ರಹಿಸಿದ ಭೀಮಸೇನ.
ಅವರೆಲ್ಲರ ಭಯಕ್ಕೆ ಕಾರಣನಾಗಿದ್ದ ಬಲವಂತ ಯುವರಾಜ ಭೀಮಸೇನ.
ರಾಷ್ಟ್ರೇಷು ಭೀಮೇನ ವಿಮರ್ದ್ದಿತೇಷು
ಜಿತಾಶ್ಚ ಯುದ್ಧೇಷು ನಿರುದ್ಯಮಾಸ್ತೇ ।
ಬಭೂವುರಾಸೀದ್ಧರಿಧರ್ಮ್ಮನಿಷ್ಠಃ
ಪ್ರಾಯೇಣ ಲೋಕಶ್ಚ ತದೀಯಶಾಸನಾತ್ ॥೨೦.೦೪॥
ಭೀಮಸೇನ ತಾನು ಶತ್ರುರಾಷ್ಟ್ರಗಳ ನಿಗ್ರಹಕ್ಕೆ ತೊಡಗಿದಾಗ,
ಜರಾಸಂಧಾದಿ ವಿಷ್ಣುವಿರೋಧಿ ರಾಜರಿಗಿರಲಿಲ್ಲ ಉದ್ಯೋಗ.
No comments:
Post a Comment
ಗೋ-ಕುಲ Go-Kula