ಅಥೋಪಯೇಮೇ ಶಿಶುಪಾಲಪುತ್ರೀಂ ಯುಧಿಷ್ಠಿರೋ ದೇವಕೀಂ ನಾಮ ಪೂರ್ವಮ್ ।
ಸ್ವೀಯಾಂ ಭಾರ್ಯ್ಯಾಂ
ಯತ್ಸಹಜೋ ಧೃಷ್ಟಕೇತುರನುಹ್ಲಾದಃ ಸವಿತುಶ್ಚಾಂಶಯುಕ್ತಃ ॥೨೦.೧೧॥
ಯುಧಿಷ್ಠಿರನವಳೇ ಆಗಿರುವಂಥ ಶ್ಯಾಮಲಾ,
ಈಗ ಮಗಳಾಗಿ ಹೊಂದಿದ್ದನವ ಶಿಶುಪಾಲ.
ದೇವಕೀ ಎನಿಸಿಕೊಳ್ಳುವ ಅವಳ ಯುಧಿಷ್ಠಿರ ಮದುವೆಯಾದ,
ಅಣ್ಣ ಧೃಷ್ಟಕೇತು ಪೂರ್ವಜನ್ಮದಿ ಪ್ರಹ್ಲಾದನ ತಮ್ಮ ಅನುಹ್ಲಾದ.
ಇವನು 'ಸವಿತು' ಎನ್ನುವ ಆದಿತ್ಯನ ಅಂಶದವನು ಆಗಿಬಂದಿದ್ದ.
ತಸ್ಯಾಂ ಸುಹೋತ್ರೋ
ನಾಮತಃ ಪುತ್ರ ಆಸೀದ್ ಯಶ್ಚಿತ್ರಗುಪ್ತೋ ನಾಮ
ಪೂರ್ವಂ ಸುಲೇಖಃ ।
ಕೃಷ್ಣಾ ಸೈವಾಪ್ಯನ್ಯರೂಪೇಣ
ಜಾತಾ ಕಾಶೀಶಪುತ್ರೀ ಯಾಂ ಪ್ರವದನ್ತಿ ಕಾಳೀಮ್ ॥೨೦.೧೨॥
ದೇವಕಿಯಲ್ಲಿ ಮಗನಾಗಿ ಹುಟ್ಟಿದವನು ಸುಹೋತ್ರ,
ಚಿತ್ರಗುಪ್ತ ಬರಹಗಾರನಿಗೆ ಈಗ ದೇವಕೀಮಗನ ಪಾತ್ರ.
ದ್ರೌಪದೀ ಹುಟ್ಟಿದಳು ಇನ್ನೊಂದು ರೂಪದಿ ಆಗಿ ಕಾಶೀರಾಜನ ಮಗಳು,
ಯಾವ ದೇವಿಯನ್ನು ಕಾಳೀ ಎಂದು ಕರೆಯುತ್ತಾರೆ ಅವಳೇ ಇವಳು.
ಸಾ ಕೇವಲಾ ಭಾರತೀ
ನಾನ್ಯದೇವ್ಯಸ್ತತ್ರಾsವಿಷ್ಟಾಸ್ತತ್ಕೃತೇ
ಕಾಶಿರಾಜಃ ।
ಸ್ವಯಮ್ಬರಾರ್ತ್ಥಂ
ನೃಪತೀನಾಜುಹಾವ ಸರ್ವಾಂಸ್ತೇSಪಿ
ಹ್ಯತ್ರ ಹರ್ಷಾತ್ ಸಮೇತಾಃ ॥೨೦.೧೩॥
ಅವಳಲ್ಲಿದ್ದದ್ದು ಕೇವಲ ಭಾರತೀದೇವಿ ಮಾತ್ರ,
ಬೇರೆ ದೇವಿಯರಿಗಿರಲಿಲ್ಲ ಆವಿಷ್ಟರಾಗುವ ಪಾತ್ರ.
ಕಾಶೀರಾಜ ಏರ್ಪಡಿಸಿದ ಅವಳ ಸ್ವಯಂವರ,
ಎಲ್ಲಾ ರಾಜರುಗಳ ಕರೆಸಿದ ಆಮಂತ್ರಣದ ದ್ವಾರ.
ಹರ್ಷದಿಂದ ಎಲ್ಲರೂ ಬಂದು ಸೇರಿದ ವ್ಯಾಪಾರ.
ತೇಷಾಂ ಮಧ್ಯೇ
ಭೀಮಸೇನಾಂಸ ಏಷಾ ಮಾಲಾಮಾಧಾತ್ ತತ್ರ ಜರಾಸುತಾದ್ಯಾಃ ।
ಕೃದ್ಧಾ
ವಿಷ್ಣೋರಾಶ್ರಿತಾನಾಕ್ಷಿಪನ್ತ ಆಸೇದುರುಚ್ಚೈಃ ಶಿವಮಾಸ್ತುವನ್ತಃ ॥೨೦.೧೪॥
ಎಲ್ಲಾ ರಾಜರ ಮದ್ಧ್ಯೇ ಕಾಳಿ ಭೀಮನ ಕೊರಳಿಗೆ ಹಾಕಿದಳು ಮಾಲೆ,
ಜರಾಸಂಧ ಮೊದಲಾದವರಲ್ಲಿ ಎಬ್ಬಿಸಿಬಿಟ್ಟಿತು ಕೋಪದ ಜ್ವಾಲೆ.
ವಿಷ್ಣುಭಕ್ತರ ಬೈಯುತ್ತಾ ಶಿವಸ್ತುತಿಗೈಯುತ್ತ ಏರಿ ಬಂದರು ಮೇಲೆ.
ಪೂರ್ವಂ ವಾಕ್ಯೈರ್ವೈದಿಕೈಸ್ತಾನ್ತ್ಸ
ಭೀಮೋ ಜಿಗ್ಯೇ ತರ್ಕ್ಕೈಃ ಸಾಧುಭಿಃ ಸಮ್ಪ್ರಯುಕ್ತೈಃ ।
ವೇದಾ ಹ್ಯದೋಷಾ ಇತಿ
ಪೂರ್ವಮೇವ ಸಂಸಾಧಯಿತ್ವೈವ ಸದಾಗಮೈಶ್ಚ ॥೨೦.೧೫॥
ಭೀಮಸೇನ ನಿರೂಪಿಸಿದ ವೇದಗಳೆಲ್ಲಾ ದೋಷಮುಕ್ತ,
ಸಾಧಿಸಿದ ಸದಾಗಮ ನಿರ್ದುಷ್ಟ ತರ್ಕಗಳ ಅಭಿವ್ಯಕ್ತ.
No comments:
Post a Comment
ಗೋ-ಕುಲ Go-Kula