Wednesday 2 December 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 16 - 19

 

ವೇದಾಧಿಕ್ಯಂ ಶೈವಶಾಸ್ತ್ರಾಣಿ ಚಾsಹುರ್ವೇದೋಜ್ಝಿತಾನಾಂ ಬಹುಲಾಂ ಚ ನಿನ್ದಾಮ್ ।

ತಥಾ ಶಾಕ್ತೇಯಸ್ಕಾನ್ದಸೌರಾದಿಕಾನಾಂ ತತ್ರೈವೋಕ್ತಂ ಛನ್ದಸಾಂ ವೈಷ್ಣವತ್ವಮ್ ॥೨೦.೧೬॥

ಶೈವಶಾಸ್ತ್ರಗಳು ಕೂಡಾ ಹೇಳಿವೆ ವೇದಗಳು ಶ್ರೇಷ್ಠ,

ವೇದವರ್ಜಿತರ ನಿಂದನೆಯಾಗಿರುವುದು ಅಲ್ಲಿ ಸ್ಪಷ್ಟ.

ಶಾಕ್ತ,ಸ್ಕಾಂದ, ಸೂರ್ಯ ಸರ್ವಾಧಿಕ ಎಂದ್ಹೇಳುವ ಮತಗಳಲ್ಲಿ,

ಮತ್ತನೇಕ ಮತಗಳಲ್ಲಿ ವೇದ ವಿಷ್ಣು ಪರವಾಗಿದೆ ಎಂದ್ಹೇಳಿದೆಯಲ್ಲಿ.

 

ವಿಷ್ಣೋರಾಧಿಕ್ಯಂ ತಾನಿ ಶಾಸ್ತ್ರಾಣಿ ಚಾsಹುಃ ಶಿವಾದಿಭ್ಯಃ ಕುತ್ರಚಿನ್ನೈವ ವೇದೇ ।

ವಿಷ್ಣೂತ್ಕೃಷ್ಟಃ ಕಥಿತೋ ಬೌದ್ಧಪೂರ್ವಾಶ್ಚಾsಹುರ್ವಿಷ್ಣುಂ ಪರಮಂ ಸರ್ವತೋsಪಿ ॥೨೦.೧೭॥

ಆ ಶಾಸ್ತ್ರಗಳು ಹೇಳುತ್ತವೆ ವಿಷ್ಣುವೇ ಶಿವಾದಿಗಳಿಗಿಂತ ಶ್ರೇಷ್ಠ,

ವೇದಗಳಲ್ಲಿ ಹೇಳಿಲ್ಲ -ಇದ್ದಾನೊಬ್ಬ ದೇವತೆ ವಿಷ್ಣುಗಿಂತ ಉತ್ಕೃಷ್ಟ.

ಬೌದ್ಧರು ಮೊದಲಾದವರೂ ವಿಷ್ಣುಪಾರಮ್ಯ ಹೇಳಿರುವುದು ವಿಶಿಷ್ಟ.

 

ಲೋಕಾಯತಾಶ್ಚ ಕ್ವಚಿದಾಹುರಗ್ರ್ಯಂ ವಿಷ್ಣುಂ ಗುರುಂ ಸರ್ವವರಂ ಬೃಹಸ್ಪತೇಃ ।

ಸರ್ವಾಗಮೇಷು ಪ್ರಥಿತೋsತ ಏವ ವಿಷ್ಣುಃ ಸಮಸ್ತಾಧಿಕ ಏವ ಮುಕ್ತಿದಃ ॥೨೦.೧೮॥

ಲೋಕಾಯತರು ಕೆಲವೊಮ್ಮೆ ಒಪ್ಪಿಕೊಂಡಿದ್ದಾರೆ ನಾರಾಯಣ ಬೃಹಸ್ಪತಿಯ ಗುರು,

ನಾರಾಯಣ ಎಲ್ಲಕಿಂತ ಮಿಗಿಲು ಮುಕ್ತಿದಾತ ಎಂದು ಆಗಮ ಮೂಲದಿ ಒಪ್ಪಿರುವರು.

 

ತೇಷ್ವಾಗಮೇಷ್ವೇವ ಪರಸ್ಪರಂ ಚ ವಿರುದ್ಧತಾ ಹ್ಯನ್ಯಪಕ್ಷೇಷು ಭೂಪಾಃ ।

ಪ್ರತ್ಯಕ್ಷತಶ್ಚಾತ್ರ ಪಶ್ಯಧ್ವಮಾಶು ಬಲಂ ಬಾಹ್ವೋರ್ಮ್ಮೇ ವಿಷ್ಣುಪದಾಶ್ರಯಸ್ಯ ॥೨೦.೧೯॥

ಆ ಆಗಮಗಳಲ್ಲೇ ಕಾಣಸಿಗುತ್ತದೆ ಪರಸ್ಪರ ವಿರೋಧ -ತಿಕ್ಕಾಟ,

ಕೇಳಿ,ನೋಡಿ ಪ್ರತ್ಯಕ್ಷ-ವಿಷ್ಣುಭೃತ್ಯ ಭೀಮನ ತೋಳ್ಬಲದ ಆಟ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula