Saturday, 5 December 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 29 - 32

 [ಈ ಸಮಯದಲ್ಲಿ ದ್ವಾರಕೆಯಲ್ಲಿ ಏನು ನಡೆಯುತ್ತಿತ್ತು ಎನ್ನುವುದನ್ನು ವಿವರಿಸುತ್ತಾರೆ:]

ಕೃಷ್ಣೋsಪಿ ಗತ್ವಾ ದ್ವಾರವತೀಂ ಸರಾಮಃ ಸತ್ಯಾಪಿತುರ್ವಧಕರ್ತ್ತಾರಮೇವ ।

ಶತಧನ್ವಾನಂ ಹನ್ತುಮೈಚ್ಛತ್ ಸ ಚೈವ ಯಯಾಚೇsಕ್ರೂರಂ ಕೃತವರ್ಮ್ಮಾನುಯುಕ್ತಮ್ ॥೨೦.೨೯॥

ಹೀಗಿರುತ್ತಾ ದ್ವಾರಕಾಪಟ್ಟಣವನ್ನು ಸೇರಿಕೊಂಡ ಭಗವಾನ್ ಶ್ರೀಕೃಷ್ಣ,

ವ್ಯೂಹ ರಚಿಸುತ್ತಿತ್ತು ಸತ್ಯಭಾಮಾಪಿತ ಸತ್ರಾಜಿತನ ಕೊಲೆಯ ಉಷ್ಣ.

ಕೃಷ್ಣಗೆ -ಬಲರಾಮನೊಡನೆ ಸೇರಿ ಶತಧನ್ವನ ಕೊಲ್ಲುವ ಬಯಕೆ,

ಶತಧನ್ವ-ಕೃತವರ್ಮ ಅಕ್ರೂರರಲ್ಲಿಟ್ಟ ರಕ್ಷಣೆಗಾಗಿ ತನ್ನ ಬೇಡಿಕೆ.

 

ತಾವಬ್ರೂತಾಂ ಸರ್ವಲೋಕೈಕಕರ್ತ್ತುರ್ನ್ನಾsವಾಂ ವಿರೋಧಂ ಮನಸಾsಪಿ ಕುರ್ವಃ ।

ಕೃಷ್ಣಸ್ಯ ಸರ್ವೇಶಿತುರಿತ್ಯನೂಕ್ತ ಆರುಹ್ಯ ಚಾಶ್ವೀಂ ಭಯತಃ ಪರಾದ್ರವತ್ ॥೨೦.೩೦॥

ಆಗ ಕೃತವರ್ಮ ಹಾಗೂ ಅಕ್ರೂರ ಇಬ್ಬರು ಹೇಳಿದಂಥ  ಮಾತು ಹೀಗಿತ್ತು,

ಲೋಕದ ಸೃಷ್ಟಿ ಸ್ಥಿತಿ ಲಯಗಳ ಕರ್ತನ ವಿರೋಧ ಮನಕ್ಕೂ ಬಾರದ ಮಾತು.

ಅದನು ಕೇಳಿಸಿಕೊಂಡವನಾದ ಶತಧನ್ವ ತಾನು,

ಭಯದಿ ಹೆಣ್ಣುಕುದುರೆಯೇರಿ ಅಲ್ಲಿಂದ ಓಡಿದನು.

 

ಅನ್ವೇವ ತಂ ಕೃಷ್ಣರಾಮೌ ರಥೇನ ಯಾತೌ ಶತಂ ಯೋಜನಾನಾಂ ದಿನೇನ ।

ಗತ್ವಾ ಮೃತಾಯಾಂ ಬಡಬಾಯಾಂ ಪದೈವ ಸ ಪ್ರಾದ್ರವತ್  ಕೃಷ್ಣ ಏನಂ ಪದಾsಗಾತ್ ॥೨೦.೩೧॥

ಅವನನ್ನು ಅನುಸರಿಸಿ ಹೊರಟಿತಾಗ ಶ್ರೀಕೃಷ್ಣ ಬಲರಾಮರ ರಥ,

ದಿನದಿ ನೂರುಯೋಜನ ಓಡಿದ ಕುದುರೆ ಸೋತು ಬಿದ್ದಾಯಿತು ಹತ.

ಶತಧನ್ವ ಆರಂಭಸಿದ ತನ್ನ ಕಾಲ್ನಡಿಗೆಯ ಓಟ,

ರಥವಿಳಿದ ಕೃಷ್ಣನಿಂದ ಅವನನುಸರಿಸುವ ಆಟ.

 

ಛಿತ್ವಾ ಶಿರಸ್ತಸ್ಯ ಚಕ್ರೇಣ ಕೃಷ್ಣೋ ಜಾನನ್ನಕ್ರೂರೇ ಮಣಿಮೇನೇನ ದತ್ತಮ್ ।

ಅಪ್ಯಜ್ಞವಲ್ಲೋಕವಿಡಮ್ಬನಾಯ ಪರೀಕ್ಷ್ಯ ವಾಸೋsತ್ರ ನೇತ್ಯಾಹ ರಾಮಮ್ ॥೨೦.೩೨॥

ಶ್ರೀಕೃಷ್ಣ ಮಾಡಿದ ಚಕ್ರದಿಂದ ಶತಧನ್ವನ ಶಿರಚ್ಛೇದನ,

ಮಣಿಯ ಹುಡುಕಾಟ ತೋರಿದ್ದು ಕೇವಲ ಲೋಕವಿಡಂಬನ.

ಅದು ಅಕ್ರೂರಗೆ ಕೊಡಲ್ಪಟ್ಟಿದೆ ಎಂದು ಕೃಷ್ಣ ಅರಿತಿದ್ದ,

ಅವನ ಬಟ್ಟೆ ಪರೀಕ್ಷಿಸಿ ಮಣಿ ಇಲ್ಲಣ್ಣಾ ಎಂದು ಹೇಳಿದ.

No comments:

Post a Comment

ಗೋ-ಕುಲ Go-Kula