Friday, 18 December 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 52 - 56

 ಲಕ್ಷಂ ಚ ತತ್ ಸರ್ವತಶ್ಛನ್ನಮೇವ ದ್ವಾರಂ ಶರಸ್ಯಾಪ್ಯುಪರಿ ಸ್ಮ ಲಕ್ಷಾತ್ ।

ಛಿನ್ನೇಷುಣಾ ಪಾತನೀಯಂ ಚ ತದ್ಧಿ ದ್ರೌಪದ್ಯರ್ತ್ಥಾತ್ ತದಶಕ್ಯಂ ತತೋsಲಮ್ ॥೨೦.೫೨॥

ಆ ಗುರಿಯು ಎಲ್ಲ ಕಡೆಯಿಂದ ಮುಚ್ಚಲ್ಪಟ್ಟಿತ್ತು,

ತಲುಪುವ ಬಾಗಿಲು ಮೇಲ್ಭಾಗದಿ ಕೊಡಲ್ಪಟ್ಟಿತ್ತು.

ಮುರಿದ ಬಾಣದಿ ಹೊಡೆದು ಬೀಳಿಸಬೇಕಾಗಿತ್ತು.

ಹಾಗಾಗಿ,ಅದು ಹೇಗಿತ್ತೋ ದ್ರೌಪದೀ ಸ್ವಯಂವರ,

ಅದಕ್ಕಿಂತ ಇದು ಆಗಿತ್ತು ಇನ್ನೂ ಬಲು ಕ್ಲಿಷ್ಟಕರ.

 

ತತ್ರಾsಜಗ್ಮುರ್ಮ್ಮಾಗಧಾದ್ಯಾಶ್ಚ ಸರ್ವೇ ಪಾರ್ತ್ಥಾ ಅಪಿ ದ್ರಷ್ಟುಮಿಹಾಭ್ಯುಪಾಯಯುಃ ।

ದುರ್ಯ್ಯೋಧನಾದ್ಯಾಶ್ಚ ಸಸೂತಪುತ್ರಾ ಸಜ್ಯೀಕರ್ತ್ತುಂ ಧನುರಪ್ಯುತ್ಸಹನ್ತೇ ॥೨೦.೫೩॥

ಅಲ್ಲಿ ಜರಾಸಂಧ ಮೊದಲಾದ ರಾಜರದಾಗಿತ್ತು ಆಗಮನ,

ಪಾಂಡವರೂ ಬಂದಿದ್ದರು ಸ್ವಯಂವರ ನೋಡುವ ಕಾರಣ.

ದುರ್ಯೋಧನ, ಕರ್ಣನೊಡಗೂಡಿದ ಕೌರವರು,

ಕನಿಷ್ಠ ಬಿಲ್ಲ ಹೆದೆಯೇರಿಸುವ ಉತ್ಸಾಹದಲ್ಲಿದ್ದರು.

 

ಕೇಚಿನ್ನಿಪೇತುರ್ದ್ಧನುಷೈವ ತಾಡಿತಾ ನ ವೈ ಕೇಚಿಚ್ಚಾಲಯಿತುಂ ಚ ಶೇಕುಃ ।

ದುರ್ಯ್ಯೋಧನೋ ಮಾಗಧಃ ಸೂತಪುತ್ರಃ ಸಜ್ಯಂ ಕೃತ್ವಾ ಲಕ್ಷವೀಕ್ಷಾಂ ನ ಶೇಕುಃ ॥೨೦.೫೪॥

ಕೆಲವರು ಕೆಳಗೆ ಬಿದ್ದರು ಬಿಲ್ಲೇಟು ತಿಂದು,

ಕೆಲವರಿಗೆ ಅಲುಗಾಡಿಸಲಾಗದ ಶಕ್ತಿಕುಂದು.

ದುರ್ಯೋಧನ ಜರಾಸಂಧ ಕರ್ಣ ಮೊದಲಾದವರು,

ಹೆದೆಯೇರಿಸಿ ಬಿಲ್ಲನ್ನು ಬಗ್ಗಿಸಿ ದಾರವನ್ನು ಬಿಗಿದರು.

ಆದರೆ ಗುರಿಯನ್ನು ಮಾತ್ರ ಯಾರೂ ನೋಡದಾದರು.

 

ಧನಞ್ಜಯಃ ಸ್ವಾತ್ಮಬಲಂ ಪ್ರಕಾಶಯನ್ ಸಜ್ಯಂ ಕೃತ್ವಾ ಧನುರೈಕ್ಷಚ್ಚ ಲಕ್ಷಮ್ ।

ನೈವಾsದದೇ ಬಾಣಮನಿಚ್ಛಯೈವ ತತ್ ಪ್ರಾಪ್ಯಾಂ ಜಾನನ್ ಕೇಶವೇನೈವ ತಾಂ ಚ ॥೨೦.೫೫॥

ಅರ್ಜುನ ತನ್ನ ಬಲ ಪ್ರದರ್ಶಿಸಲು ಬಯಸಿದ,

ಬಿಲ್ಲ ಬಗ್ಗಿಸಿ ಹಗ್ಗ ಬಿಗಿದು ಗುರಿಯನ್ನು ನೋಡಿದ.

ಆದರೆ ಹೊಡೆಯಲು ಬಾಣ ಎತ್ತಿಕೊಳ್ಳಲೇ ಇಲ್ಲ,

ಕೃಷ್ಣನ ಗುರಿಯದು ಅವ ಹೊಂದಬೇಕೆಂದು ಬಲ್ಲ.

ಭೀಮಶ್ಚಾಪಂ ಲಕ್ಷಮಪ್ಯೇತದತ್ರ ದ್ರಷ್ಟುಂ ಚ ನೈವೈಚ್ಛದರೀನ್ದ್ರಧಾರಿಣಃ ।

ಯೋಗ್ಯೇ ಕರ್ಮ್ಮಣ್ಯಾಯತಂಶ್ಚಾಪರಾಧೀ ಸ್ಯಾದಿತ್ಯಞ್ಜಃ ಪಶ್ಯಮಾನೋ ಮಹಾತ್ಮಾ ॥೨೦.೫೬॥

ಭೀಮಸೇನ ಮಾತ್ರ ಬಿಲ್ಲನ್ನು ಮುಟ್ಟಲೇ ಇಲ್ಲ,

ಗುರಿಯನ್ನು ಕೂಡಾ ನೋಡಲು ಇಚ್ಛಿಸಲಿಲ್ಲ.

ಆ ಕಾರ್ಯ ಪರಮಾತ್ಮನಾದ ಕೃಷ್ಣಗೆ ಮಾತ್ರ ಉಚಿತ,

ಅದರ ಪ್ರಯತ್ನವೂ ಅಪರಾಧ ಎಂದು ಅವನ ಮತ.

No comments:

Post a Comment

ಗೋ-ಕುಲ Go-Kula