ವಸನ್ನಜಸ್ತತ್ರ ಬಹೂಂಶ್ಚ ಮಾಸಾನ್ ಸಫಲ್ಗುನೋsಯಾನ್ಮೃಗಯಾಂ ಕದಾಚಿತ್ ।
ಹತ್ವಾ ಮೃಗಾನ್
ಯಮುನಾತೀರಸಂಸ್ಥಃ ಸೋsನ್ಯಾಂ
ಕಾಳಿನ್ದೀಂ ದದೃಶೇ ತತ್ಸ್ವಸಾರಮ್॥೨೦.೪೪॥
ಇಂದ್ರಪ್ರಸ್ಥದಲ್ಲಿ ಮಾಡಿದ ಕೃಷ್ಣ ಅನೇಕ ತಿಂಗಳ ವಾಸ,
ಒಮ್ಮೆ ಅರ್ಜುನನೊಂದಿಗೆ ಬೇಟೆಗೆ ಹೊರಟ ಪ್ರವಾಸ.
ಬೇಟೆಯಲ್ಲಿ ಕೆಲವು ಮೃಗಗಳನ್ನು ಕೊಂದ,
ಆ ನಂತರ ಯಮುನಾನದಿ ತೀರಕೆ ಬಂದ,
ಅಲ್ಲಿ ಇನ್ನೊಬ್ಬಳು ಕಾಳಿಂದಿಯನ್ನು ನೋಡಿದ.
ಸಾ ಸೂರ್ಯ್ಯಪುತ್ರೀ
ಯಮುನಾsನುಜಾತಾ ತಪಶ್ಚರನ್ತೀ
ಕೃಷ್ಣಪತ್ನೀತ್ವಕಾಮಾ ।
ಪೃಷ್ಟಾsರ್ಜ್ಜುನೇನಾsಹ ಸಮಸ್ತಮೇತತ್ ಪತ್ನೀಂ ಚ ತಾಂ ಜಗೃಹೇ ವಾಸುದೇವಃ ॥೨೦.೪೫॥
ಅವಳು ಸೂರ್ಯನ ಪುತ್ರಿ,
ಯಮುನೆಯ ಸಹೋದರಿ.
ಕೃಷ್ಣನ ಹೆಂಡತಿಯಾಗಬೇಕೆಂದವಳ ಬಯಕೆ,
ಅದಕ್ಕಾಗೇ ತಪಸ್ಸಿನಲ್ಲಿ ನಿರತಳಾಗಿದ್ದಳು ಆಕೆ,
ಅರ್ಜುನನಿಂದ ಪ್ರಶ್ನಿಸಲ್ಪಟ್ಟವಳಾಗಿ ಕೊಟ್ಟಳೆಲ್ಲಾ ವಿವರ,
ನಂತರ ವಾಸುದೇವ ಹೆಂಡತಿಯಾಗಿ ಮಾಡಿದವಳ ಸ್ವೀಕಾರ.
ತತೋ ಗತ್ವಾ ನಗ್ನಜಿತೋ
ಗೃಹಂ ಚ ಸ್ವಯಮ್ಬರೇ ಸಪ್ತ ವೃಷಾನಗೃಹ್ಣಾತ್ ।
ಸರ್ವೈರಗ್ರಾಹ್ಯಾನಸುರಾನ್
ವರೇಣ ಶಿವಸ್ಯ ಯೈರ್ನ್ನಿರ್ಜ್ಜಿತಾ ಭೂಮಿಪಾಲಾಃ ॥೨೦.೪೬॥
ಆನಂತರ ನಗ್ನಜಿತ್ ಎಂಬ ರಾಜನ ಮನೆಯಲ್ಲಿದ್ದ ಸ್ವಯಂವರಕ್ಕೆ ಕೃಷ್ಣ
ತೆರಳಿದ,
ಎಲ್ಲಾ ರಾಜರುಗಳೂ ಸೋತು ಹೋಗಿದ್ದರು ಗೂಳಿಗಳ ರೂಪದ ಅಸುರರಿಂದ.
ಆ ಏಳು ಗೂಳಿಗಳು ಮೆರೆಯುತ್ತಿದ್ದವು ಶಿವವರ ಬಲದಿಂದ,
ಯಾರೂ ಮಾಡಲಾಗದ ಅಸುರ ನಿಗ್ರಹವನ್ನು ಕೃಷ್ಣ ಮಾಡಿದ.
ತತೋ ನೀಲಾಂ ತಸ್ಯ ಸುತಾಂ
ಚ ಲೇಭೇ ಪೂರ್ವಂ ನೀಲಾ ಗೋಪಕನ್ಯಾsಪಿ ಯಾssಸೀತ್ ।
ಸಾ ದೇಹೇsಸ್ಯಾಃ ಪ್ರಾವಿಶತ್ ಪೂರ್ವಮೇಷಾ ಯಸ್ಮಾದೇಕಾ ದ್ವಿವಿಧಾ ಸಮ್ಪ್ರಜಾತಾ
॥೨೦.೪೭॥
ಆನಂತರ ಪಡೆದುಕೊಂಡ ಅವನ ಮಗಳು ನೀಲೆಯನ್ನು,
ಈ ಮೊದಲು ಗೋಪಕನ್ಯೆಯಾಗಿ ಇದ್ದಂಥ ಬಾಲೆಯನ್ನು.
ಗೋಪಕನ್ಯೆ ನೀಲೆಯ ದೇಹದಲ್ಲಿ ಮಾಡಿದಳು ಪ್ರವೇಶ,
ಮೊದಲು ಎರಡು ರೂಪವಿದ್ದವಳು ಒಂದಾದದ್ದು ವಿಶೇಷ.
(ಎಲ್ಲೆಲ್ಲೂ ಕೃಷ್ಣನ
ಜೊತೆ ಕೇಳಿಬರುವ ರಾಧೆಯೇ ಈ ನೀಲೆ,
ಕೃಷ್ಣನನ್ನು ವ್ರಜದಲ್ಲಿದ್ದಾಗಲೇ ಮದುವೆ ಆದ ಮೊದಲ ಬಾಲೆ.
ಎಲ್ಲರಿಗಿಂತ ಮುಂಚೆ ಮುಂಜಿಗೂ ಮುನ್ನ ಮದುವೆಯಾಗುವುದಿತ್ತವಳ ಬಯಕೆ,
No comments:
Post a Comment
ಗೋ-ಕುಲ Go-Kula