ತಯೋಕ್ತೋsಹಂ ನಾವತಾರೇಷು ಕಶ್ಚಿದ್ ವಿಶೇಷ ಇತ್ಯೇವ ಯದುಪ್ರವೀರಮ್ ।
ಸರ್ವೋತ್ತಮೋsಸೀತ್ಯವದಂ ಸ ಚಾsಹ ನ ಕೇವಲಂ ಮೇsಙ್ಕಗಾಯಾಃ ಶ್ರಿಯೋsಹಮ್ ॥೨೦.೭೨॥
ಸದೋತ್ತಮಃ ಕಿನ್ತು ಯದಾ
ತು ಸಾ ಮೇ ವಾಮಾರ್ದ್ಧರೂಪಾ ದಕ್ಷಿಣಾನಾಮಧೇಯಾ ।
ಯಸ್ಮಾತ್ ತಸ್ಯಾ
ದಕ್ಷಿಣತಃ ಸ್ಥಿತೋsಹಂ
ತಸ್ಮಾನ್ನಾಮ್ನಾ ದಕ್ಷಿಣೇತ್ಯೇವ ಸಾ ಸ್ಯಾತ್ ॥೨೦.೭೩ ॥
ಹೀಗೆ ಯಜ್ಞನಾಮಕ ಲಕ್ಷ್ಮೀದೇವಿ ನನಗೆ (ನಾರದರಿಗೆ)ಹೇಳಿದಳು,
ಕೃಷ್ಣ ಉತ್ಕೃಷ್ಟನೆಂದೆ ಸಿದ್ಧವಾದ್ದರಿಂದ ಭೇದವಿಲ್ಲವನ ಅವತಾರಗಳು.
ಕೃಷ್ಣನೆಂದ-ಕೇವಲ ನನ್ನ ತೊಡೆಯಲ್ಲಿರುವ ಲಕ್ಷ್ಮೀಯಿಂದ ನಾನಲ್ಲ
ಉತ್ಕೃಷ್ಟ,
ಅವಳ ಬಲಕ್ಕೆ ನಾನಿದ್ದು ದಕ್ಷಿಣಾ ನಾಮಕಳಾಗಿ ಎಡದಲ್ಲಾಗಿದ್ದಾಳೆ
ಆವಿಷ್ಟ.
ಸಾ ದಕ್ಷಿಣಾಮಾನಿನೀ
ದೇವತಾ ಚ ಸಾ ಚ ಸ್ಥಿತಾ ಬಹುರೂಪಾ ಮದರ್ದ್ಧಾ ।
ವಾಮಾರ್ದ್ಧೋ ಮೇ
ತತ್ಪ್ರವಿಷ್ಟೋ ಯತೋ ಹಿ ತತೋsಹಂ
ಸ್ಯಾಮರ್ದ್ಧನಾರಾಯಣಾಖ್ಯಃ ॥೨೦.೭೪॥
ಯಜ್ಞ ದಕ್ಷಿಣೆ, ವೇದಜ್ಞಾನಕ್ಕೆ
ಅಭಿಮಾನಿನಿಯಾಗಿ ಇರುವಳು ಲಕ್ಷ್ಮೀ,
ಬಹುರೂಪದಿಂದ ನಾರಾಯಣನರ್ಧ ರೂಪದಿಂದ ಆಗಿದ್ದಾಳೆ ಸಾಕ್ಷಿ.
ನನ್ನ ಎಡಭಾಗ ಅವಳಲ್ಲಿ ಪ್ರವೇಶ ಹೊಂದಿದ ಕಾರಣ,
ನನಗೆ ಆ ಹೆಸರು ಪ್ರಸಿದ್ಧವಾಗಿದೆ ಅರ್ಧನಾರಾಯಣ.
ತದಾsಪ್ಯಸ್ಯಾ ಉತ್ತಮೋsಹಂ ಸುಪೂರ್ಣ್ಣೋ ನ ಮಾದೃಶಃ ಕಶ್ಚಿದಸ್ತ್ಯುತ್ತಮೋ ವಾ ।
ಇತ್ಯೇವಾವಾದೀದ್ ದಕ್ಷಿಣಾಭಿಃ
ಸಹೇತಿ ಸರ್ವೋತ್ತಮತ್ವಂ ದಕ್ಷಿಣಾನಾಂ ಸ್ಮರನ್ತ್ಸಃ ॥೨೦.೭೫॥
ಆಗಲೂ ಕೂಡಾ ನಾನವಳಿಂದ ಉತ್ಕೃಷ್ಟ -ಪರಿಪೂರ್ಣ,
ಯಾರೂ ಸಮ ಮಿಗಿಲಿಲ್ಲವೆಂದನವ ಶ್ರೀಮನ್ನಾರಾಯಣ.
ತಾಭಿಶ್ಚೈತಾಭಿರ್ದ್ದಕ್ಷಿಣಾಭಿಃ
ಸಮೇತಾದ್ ವರಿಷ್ಠೋsಹಂ ಜಗತಃ
ಸರ್ವದೈವ ।
ಮತ್ಸಾಮರ್ತ್ಥ್ಯಾನ್ನೈವ ಚಾನನ್ತಭಾಗೋ ದಕ್ಷಿಣಾನಾಂ ವಿದ್ಯತೇ ನಾರದೇತಿ ॥೨೦.೭೬॥
ನಾರದಾ, ದಕ್ಷಿಣೆಯ ಎಲ್ಲಾ
ರೂಪಗಳ ಈ ಜಗತ್ತಿನಿಂದ ನಾ ಯಾವಾಗಲೂ ಉತ್ತಮ,
ನನ್ನ ಶಕ್ತಿ ಸಾಮರ್ಥ್ಯದ ಅನಂತಭಾಗದ ಒಂದಂಶ ಕೂಡಾ ದಕ್ಷಿಣೆಯಾಗಲಾರಳು
ಸಮ.
ಉಕ್ತಂ
ಕೃಷ್ಣೇನಾಪ್ರತಿಮೇನ ಭೂಪಾ ಅನ್ಯೋತ್ತಮತ್ವಂ ದಕ್ಷಿಣಾನಾಂ ಚ ಶಶ್ವತ್ ।
ಸೇಯಂ ಭೈಷ್ಮೀ ದಕ್ಷಿಣಾ
ಕೇಶವೋsಯಂ ತಸ್ಯಾಃ ಶ್ರೇಷ್ಠಃ
ಪಶ್ಯತ ರಾಜಸಙ್ಘಾಃ ॥೨೦.೭೭॥
ಇದು ಶ್ರೀಕೃಷ್ಣ ಹೇಳಿದ ಮಾತು ಎಂದು ಹೇಳಿದರು ಮುನಿ ನಾರದ,
ಸಮನಿರದವ ಕೃಷ್ಣನಾದರೂ ಉಳಿದವರಿಗಿಂತ ಲಕ್ಷ್ಮೀ ಮೇಲು ಸದಾ.
ರಾಜರೇ ಈ ರುಗ್ಮಿಣಿಯೇ ದಕ್ಷಿಣಾ,
ಈ ನಮ್ಮ ಕೃಷ್ಣನೇ ಆ ನಾರಾಯಣ.
ಪ್ರತ್ಯಕ್ಷಂ ವೋ
ವೀರ್ಯ್ಯಮಸ್ಯಾಪಿ ಕುನ್ತ್ಯಾ ಯುಧೇsರ್ತ್ಥಿತಃ ಕೇಶವೋ ವೀರ್ಯ್ಯಮಸ್ಯೈ ।
ಅದರ್ಶಯತ್ ಪಾಣ್ಡವಾನ್
ಧಾರ್ತ್ತರಾಷ್ಟ್ರಾನ್ ಭೀಷ್ಮದ್ರೋಣದ್ರೌಣಿಕೃಪಾನ್ ಸಕರ್ಣ್ಣಾನ್ ।
ನಿರಾಯುಧಾಂಶ್ಚಕ್ರ ಏಕಃ
ಕ್ಷಣೇನ ಲೋಕಶ್ರೇಷ್ಠಾನ್ ದೈವತೈರಪ್ಯಜೇಯಾನ್ ॥೨೦.೭೮॥
ಇವನ ಶಕ್ತಿ ವೀರ್ಯ ನಿಮಗೇ ಪ್ರತ್ಯಕ್ಷ ಪ್ರಮಾಣ,
ಕುಂತಿಯಿಂದವಗೆ ಬರಲು ಯುದ್ಧಕ್ಕಾಗಿ ಪ್ರಾರ್ಥನ,
ಕೃಷ್ಣ ಮಾಡಿದ ಕುಂತಿಗಾಗಿ --ತನ್ನ ಬಲಪ್ರದರ್ಶನ.
ಪಾಂಡವರು ಕೌರವರು ಭೀಷ್ಮ ದ್ರೋಣ ಅಶ್ವತ್ಥಾಮ ಕೃಪಾಚಾರ್ಯ ಕರ್ಣ
ಮುಂತಾದ ಲೋಕವೀರರು,
ಸರ್ವೋತ್ತಮ ಸರ್ವಶಕ್ತ ಕೃಷ್ಣಪರಮಾತ್ಮನಿಂದ ಒಂದೇ ಕ್ಷಣದಲ್ಲಿ ಸೋತು
ಹೋಗಿ ಆದರವರು ನಿರಾಯುಧರು.
ವ್ರತಂ ಭೀಮಸ್ಯಾಸ್ತಿ
ನೈವಾಭಿ ಕೃಷ್ಣಮಿಯಾಮಿತಿ ಸ್ಮಾsಜ್ಞಯಾ
ತಸ್ಯ ವಿಷ್ಣೋಃ ।
ಚಕ್ರಂ ರಥಸ್ಯಾಗ್ರಹೀತ್
ಸಃ ಪ್ರಣಮ್ಯ ಕೃಷ್ಣಂ ಸ ತಂ ಕೇಶವೋsಪಾಹರಚ್ಚ ॥೨೦.೭೯॥
ಕೃಷ್ಣನ ಎಂದೂ ಎದುರಿಸಲಾರೆ ಇದು ಭೀಮಸೇನನ ವ್ರತ,
ಕೃಷ್ಣನಾಜ್ಞೆಯಂತೆ ಭೀಮ ನಮಸ್ಕರಿಸಿ ರಥಚಕ್ರ ಹಿಡಿದು ನಿಂತ.
ಅವನನ್ನು ತಳ್ಳಿ ಮುಂದೆ ಯುದ್ಧಕೆಂದು ಹೊರಟ ದೇವಕೀಸುತ.
ಏವಂ ಕ್ರೀಡನ್ತೋsಪ್ಯಾತ್ಮಶಕ್ತ್ಯಾ ಪ್ರಯತ್ನಂ ಕುರ್ವನ್ತಸ್ತೇ ವಿಜಿತಾಃ ಕೇಶವೇನ ।
ತತಃ ಸರ್ವೇ ನೇಮುರಸ್ಮೈ
ಪೃಥಾ ಚ ಸವಿಸ್ಮಯಾ ವಾಸುದೇವಂ ನನಾಮ ॥೨೦.೮೦॥
ಎಲ್ಲ ರಾಜರ ಕ್ರೀಡೆಯಲ್ಲಿತ್ತು ಪೂರ್ಣಬಲದ ಪ್ರಯತ್ನ,
ಕೃಷ್ಣನಿಂದ ಸೋತು ಕೃಷ್ಣಗೆ ಮಾಡಿದರೆಲ್ಲ ನಮನ.
ಕುಂತಿಯಿಂದಲೂ ಆಯ್ತು ಕೃಷ್ಣಗೆ ಅಚ್ಚರಿಯ ನಮನ.
ಏವಂವಿಧಾನ್ಯದ್ಭುತಾನೀಹ
ಕೃಷ್ಣೇ ದೃಷ್ಟಾನಿ ವಃ ಶತಸಾಹಸ್ರಶಶ್ಚ ।
ತಸ್ಮಾದೇಷ ಹ್ಯದ್ಭುತೋsತ್ಯುತ್ತಮಶ್ಚೇತ್ಯುಕ್ತಾ ನೇಮುಸ್ತೇsಖಿಲಾ ವಾಸುದೇವಮ್ ॥೨೦.೮೧॥
ಈ ಥರದ ಅದ್ಭುತಗಳು ಕೃಷ್ಣನಲ್ಲಿ ಅನಂತ,
ಹಾಗಾಗಿ ಇವನು ಅತ್ಯುತ್ತಮ -ಅತ್ಯದ್ಭುತ.
ಕೇಳಿದ ರಾಜರಿಂದ ಭಗವಂತನಾದ ನಮಸ್ಕೃತ.
ವಾಯ್ವಾಜ್ಞಯಾ
ವಾಯುಶಿಷ್ಯಃ ಸ ಸತ್ಯಮಿತ್ಯಾದ್ಯುಕ್ತ್ವಾ ನಾರದೋ ರುಗ್ಮಿಣೀಂ ಚ ।
ಸ್ತುತ್ವಾ ಪುಷ್ಪಂ
ಪಾರಿಜಾತಸ್ಯ ದತ್ವಾ ಯಯೌ ಲೋಕಂ ಕ್ಷಿಪ್ರಮಬ್ಜೋದ್ಭವಸ್ಯ ॥೨೦.೮೨॥
ವಾಯುದೇವರ ಆಜ್ಞಾನುಸಾರ,
ಅವರ ಶಿಷ್ಯ ನಾರದರ ವ್ಯಾಪಾರ.
ಕೃಷ್ಣ ಹಿರಿಮೆಯನ್ನು' ಇದು ಸತ್ಯಾ' ಎಂದ,
ರುಗ್ಮಿಣಿಗೆ ಪಾರಿಜಾತ ಕೊಟ್ಟು ಸ್ತುತಿ ಮಾಡಿದ,
No comments:
Post a Comment
ಗೋ-ಕುಲ Go-Kula