Friday 24 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 83 - 87

 ಸಾಕ್ಷಾತ್ ಸತ್ಯಾ ರುಗ್ಮಿಣೀತ್ಯೇಕಸಂವಿದ್ ದ್ವಿಧಾಭೂತಾ ನಾತ್ರ ಭೇದೋsಸ್ತಿ ಕಶ್ಚಿತ್ ।

ತಥಾsಪಿ ಸಾ ಪ್ರಮದಾನಾಂ ಸ್ವಭಾವಪ್ರಕಾಶನಾರ್ತ್ಥಂ ಕುಪಿತೇವಾsಸ ಸತ್ಯಾ॥೨೦.೮೩॥

ಸತ್ಯಭಾಮೆ ಮತ್ತು ರುಗ್ಮಿಣಿಯರು ಇಬ್ಬರೂ ಒಂದೇ,

ಇಬ್ಬರ ಅಭಿಪ್ರಾಯ ಏಕ -ಮೂಲದ ಲಕ್ಷ್ಮೀ ಒಂದೇ.

ಎರಡು ರೂಪಗಳಾಗಿ ಅವತರಿಸಿದ್ದು ಮೂಲ ಲಕ್ಷ್ಮಿಯಿಂದೇ,

ಭಾಮೆಯ ಕೋಪ ಹೆಣ್ಣುಸ್ವಭಾವ ಲೋಕಕೆ ತೋರಲೆಂದೇ.

 

ಸಾಕಂ ರುಗ್ಮಿಣ್ಯಾ ರಾಜಮದ್ಧ್ಯೇ ಪ್ರವೇಶಾತ್ ಸ್ತವಾದೃಷೇಃ ಪುಷ್ಪದಾನಾಚ್ಚ ದೇವೀಮ್ ।

ಕೋಪಾನನಂ ದರ್ಶಯನ್ತೀಮುವಾಚ ವಿಡಮ್ಬಾರ್ತ್ಥಂ ಕಾಮಿಜನಸ್ಯ ಕೃಷ್ಣಃ ॥೨೦.೮೪॥

ದಾತಾಸ್ಮ್ಯಹಂ ಪಾರಿಜಾತಂ ತರುಂ ತ ಇತ್ಯೇವ ತತ್ರಾಥಾsಗಮದ್ ವಾಸವೋsಪಿ ।

ಸರ್ವೈರ್ದ್ದೇವೈರ್ಭೌಮಜಿತೋsಪ್ಯದಿತ್ಯಾಸ್ತೇನೈವಾಥೋ ಕುಣ್ಡಲಾಭ್ಯಾಂ ಹೃತಾಭ್ಯಾಮ್ ॥೨೦.೮೫॥

ರುಗ್ಮಿಣಿಯಿಂದೊಡಗೂಡಿ ಅರಸರ ಮಧ್ಯ ಕೃಷ್ಣ ಮಾಡಿದ ಪ್ರವೇಶ,

ನಾರದ ರುಗ್ಮಿಣಿಯ ಸ್ತುತಿಸುತ್ತಾ ಪಾರಿಜಾತವನ್ನು ಕೊಟ್ಟ ಸನ್ನಿವೇಶ,

ಸತ್ಯಭಾಮೆ ಮುನಿಸಿಕೊಂಡಳು ತುಂಬಿ ಬಂದ ಕೋಪದಿಂದ,

ಕೃಷ್ಣ ಸಂತೈಸಿದ ಪಾರಿಜಾತ ಮರವನ್ನೇ ಕೊಡುವ ಮಾತಿನಿಂದ.

ಕೆಲ ಕಾಲಾನಂತರ ಇಂದ್ರ ಬಂದ ನರಕಾಸುರನಿಂದ ಸೋತು,

ಸಮಸ್ತ ದೇವತೆಗಳ ಜೊತೆಗೆ ಬಂದಿದ್ದ ಸೋತಮುಖ ಹೊತ್ತು.

ಅ ನರಕನಿಂದಲೇ ಅದಿತಿಯ ಕುಂಡಲಗಳ ಅಪಹಾರವಾಗಿತ್ತು.

  

ತದೈವಾsಗುರ್ಮ್ಮುನಯಸ್ತೇನ ತುನ್ನಾ ಬದರ್ಯಾಸ್ತೇ ಸರ್ವ ಏವಾsಶು ಕೃಷ್ಣಮ್ ।

ಯಯಾಚಿರೇ ಭೌಮವಧಾಯ ನತ್ವಾ ಸ್ತುತ್ವಾ ಸ್ತೋತ್ರೈರ್ವೈದಿಕೈಸ್ತಾನ್ತ್ರಿಕೈಶ್ಚ ॥೨೦.೮೬

ನರಕಾಸುರನಿಂದ ಪೀಡಿತರಾಗಿದ್ದ ಮುನಿವೃಂದ,

ಇಂದ್ರಪ್ರೇರಣೆಯಿಂದ ಬಂದಿದ್ದರು ಬದರಿಯಿಂದ.

ಎಲ್ಲರೂ ನಮಸ್ಕರಿಸಿ ವೈದಿಕವಾದ ತಂತ್ರಾದಿ ಸ್ತೋತ್ರ ಮಾಡುತ್ತಾ,

ಬೇಡಿಕೊಂಡರು ಎಲ್ಲಾ ನರಕಾಸುರನ ಸಂಹಾರ ಬಯಸುತ್ತಾ.

 

ಇನ್ದ್ರೇಣ ದೇವೈಃ ಸಹಿತೇನ ಯಾಚಿತೋ ವಿಪ್ರೈಶ್ಚ ಸಸ್ಮಾರ ವಿಹಙ್ಗರಾಜಮ್ ।

ಆಗಮ್ಯ ನತ್ವಾ ಪುರತಃ ಸ್ಥಿತಂ ತಮಾರುಹ್ಯ ಸತ್ಯಾಸಹಿತೋ ಯಯೌ ಹರಿಃ ॥೨೦.೮೭

ಹೀಗೆ ದೇವತೆಗಳೊಡನೆ ಮುನಿಗಳೊಡನೆ ಇಂದ್ರ ಬೇಡಲು,

ಕೃಷ್ಣಸ್ಮರಣೆ ಅನುಸರಿಸಿ ಗರುಡ ಬಂದು ಎದುರು ನಿಲ್ಲಲು,

ಕೃಷ್ಣ ಭಾಮೆಯೊಡನೆ ಗರುಡನೇರಿದ ಅಲ್ಲಿಂದ ಹೊರಡಲು.

[Contributed by Shri Govind Magal] 

No comments:

Post a Comment

ಗೋ-ಕುಲ Go-Kula