Friday 24 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 116 - 120

 ಸಮನ್ತತೋ ಯೋಜನಾನಾಂ ಶತೇ ದ್ವೇ ಪ್ರವೃದ್ಧಮಿನ್ದ್ರಸ್ಯ ಸ ರತ್ನಪರ್ವತಮ್ ।

ನಿತ್ಯಾಮೃತಸ್ರಾವಿ ಜಲೇಶ್ವರಸ್ಯ ಚ್ಛತ್ರಂ ಚ ದೋರ್ಭ್ಯಾಂ ಗರುಡೇ ನ್ಯಧಾದ್ಧರಿಃ ॥೨೦.೧೧೬

ಇನ್ನೂರು ಯೋಜನಗಳಷ್ಟು ಪರ್ಯಂತ ಬೆಳೆದಿದ್ದ ಇಂದ್ರನ ಆ ರತ್ನಪರ್ವತ,

ಅಮೃತ ಸುರಿಸುವ ವರುಣನ ಛತ್ರವನ್ನು ಹರಿ ತನ್ನ ಕೈಗಳಿಂದೆತ್ತಿ ಗರುಡನಲ್ಲಿಟ್ಟ.

 

ಸ್ವಯಂ ಚ ಸತ್ಯಾಸಹಿತಃ ಸಮಾರುಹತ್ ಸ ಚಾಶ್ರಮೇಣೈವ ಯಯೌ ತ್ರಿವಿಷ್ಟಪಮ್ ।

ಅಭಿಪ್ರಯಾತೋsಖಿಲಲೋಕಪಾಲೈರ್ಜ್ಜನಾರ್ದ್ದನಃ ಶಕ್ರಗೃಹಂ ವಿವೇಶ ॥೨೦.೧೧೭

ಸತ್ಯಭಾಮಾ ಸಮೇತ ಶ್ರೀಕೃಷ್ಣ ಗರುಡನ ಹೆಗಲನ್ನು ಏರಿದ,

ಶ್ರಮವಿಲ್ಲದೇ ಗರುಡ ಎಲ್ಲ ಹೊತ್ತು ಸ್ವರ್ಗಲೋಕಕ್ಕೆ ತೆರಳಿದ,

ಲೋಕಪಾಲಕರಿಂದ ಅನುಸೃತನಾದ ಜನಾರ್ದನ ಇಂದ್ರಗೃಹ ಸೇರಿದ.

 

ಸಮ್ಪೂಜಿತಃ ಸತ್ಯಭಾಮಾಸಹಾಯಃ ಶಕ್ರೇಣ ಶಚ್ಯಾ ಸಹಿತೇನ ಸಾದರಮ್ ।

ದದಾವದಿತ್ಯಾ ಅಪಿ ಕುಣ್ಡಲೇ ಶುಭೇ ಸಮಸ್ತದೇವೈರ್ಮ್ಮುನಿಭಿಶ್ಚ ವನ್ದಿತಃ ॥೨೦.೧೧೮

ಸತ್ಯಭಾಮೆಯಿಂದೊಡಗೂಡಿದ ಭಗವಂತ ಮುಕುಂದ,

ಇಂದ್ರ ಶಚಿಯರಿಂದ ಆದರಪೂರ್ವಕವಾಗಿ ಪೂಜಿತನಾದ.

ಸಮಸ್ತ ದೇವತೆಗಳು ಮುನಿಗಳಿಂದಲೂ ವಂದಿಸಲ್ಪಟ್ಟ,

ಮಂಗಳವಾದ ಆ ಎರಡು ಕುಂಡಲಗಳ ಅದಿತಿಗೆ ಕೊಟ್ಟ.

 

ತಮಾಸುರಾವೇಶವಶಾದಜಾನತೀ ಸತ್ಯಾಂ ಚ ಸರ್ವಪ್ರಭವೌ ಜಗತ್ಪ್ರಭೂ ।

ನಿರ್ದ್ದೋಷಸೌಖ್ಯೈಕತನೂ ಶುಭಾಶಿಷಸ್ತಾಭ್ಯಾಂ ದದೌ ಸಾsದಿತಿರಾತ್ಮಪುತ್ರವತ್ ॥೨೦.೧೧೯

ಅದಿತಿಯಾದರೋ ಸಹಜ ಅಸುರಾವೇಶದಿಂದ,

ತನ್ನ ಮಕ್ಕಳೆಂಬಂತೆ ಮಾಡಿದಳು ಆಶೀರ್ವಾದ.

ಆನಂದಪೂರ್ಣರಾದ ಶ್ರೀಕೃಷ್ಣ ಸತ್ಯಭಾಮೆಯರಿಗೆ,

ಮೋಹಮಾಯದಿ ಹರಸಿದಳು ಜಗತ್ ಮಾತಾ ಪಿತರಿಗೆ.

 

ಅಥೋ ಸದಾನನ್ದಚಿದಾತ್ಮದೇಹಃ ಸ ನನ್ದನೋದ್ಯಾನಮಜೋsನುರೂಪಯಾ ।

ಅನನ್ತಶಕ್ತಿಃ  ಸಹ ಸತ್ಯಭಾಮಯಾ ವಿವೇಶ ರನ್ತುಂ ಪ್ರಿಯಯಾsಖಿಲೇಶ್ವರಃ ॥೨೦.೧೨೦    

ಸರ್ವಸಮರ್ಥ ದೋಷದೂರ ಜ್ಞಾನಾನಂದಗಳ ಸ್ವರೂಪ,

ಎಲ್ಲರೊಡೆಯ ಅಮಿತಶಕ್ತ ತನ್ನ ಅನುರೂಪ ಭಾಮೆಯ ಕೂಡಿದ ಭೂಪ,

ಕ್ರೀಡಿಸಲೆಂದು ನಂದನೋದ್ಯಾನ ಪ್ರವೇಶಿಸಿದ ಬ್ರಹ್ಮಾಂಡದ ಏಕೈಕ ನೃಪ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula