ವಿಪ್ರಾಪಹಾಸಾತ್ ಕುತ್ಸಿತಯೋನಿತಸ್ತಾಃ ಕನ್ಯಾತೀರ್ತ್ಥೇ ಪಾಣ್ಡವಃ ಸಮ್ಪ್ರಮುಚ್ಯ ।
ಪ್ರಾಪ್ತಃ ಪ್ರಭಾಸಂ
ವಾಸುದೇವಾನುಜಾತಾಂ ಶುಶ್ರಾವ ರಾಮೇಣ ಸುಯೋಧನೋದ್ಯತಾಮ್ ॥೨೦.೧೬೫॥
ವಿಪ್ರ
ಅಪಹಾಸ್ಯದಿಂದ ಕನ್ಯಾತೀರ್ಥದಲ್ಲಿ ಕೆಟ್ಟ ಜನ್ಮ ಹೊಂದಿದ ಅಪ್ಸರೆಯರನ್ನ,
ಶಾಪವಿಮೋಚನೆಗೊಳಿಸಿ
ನಂತರ ಪ್ರಭಾಸ ಕ್ಷೇತ್ರಕ್ಕೆ ಬಂದುಸೇರುತ್ತಾನೆ ಅರ್ಜುನ.
ಅಲ್ಲಿ
ಕೃಷ್ಣ-ಬಲರಾಮರ ತಂಗಿಯಾದ ಸುಭದ್ರೆಯನ್ನು,
ತಿಳಿದ-ಬಲರಾಮ
ದುರ್ಯೋಧನಗೆ ಕೊಡುವ ಸುದ್ದಿಯನ್ನು.
ವಿಚಿನ್ತ್ಯ ಕಾರ್ಯ್ಯಂ
ಯತಿರೂಪಂ ಗೃಹೀತ್ವಾ ಕುಶಸ್ಥಲೀಂ ಪ್ರಯಯೌ ತಂ ಸಮೀಪೇ ।
ಪ್ರಾಪ್ತಂ ಕೃಷ್ಣಃ
ಪ್ರಾಹಸತ್ ಸಂವಿಜಾನನ್ ಸತ್ಯಾಸಹಾಯಃ ಶಯನೀಯಾಧಿರೂಢಃ ॥೨೦.೧೬೬॥
ಅರ್ಜುನ
ತಾನು ಮಾಡಬೇಕಾದದ್ದನ್ನು ಚೆನ್ನಾಗಿ ಯೋಚಿಸಿ,
ದ್ವಾರಕಾಪಟ್ಟಣಕೆ
ತೆರಳಿದ ಸನ್ಯಾಸಿ ವೇಷವನ್ನು ಧರಿಸಿ.
ಪರ್ಯಂಕದಿ
ಕುಳಿತ ಕೃಷ್ಣ ಸತ್ಯಭಾಮೆಯೊಂದಿಗೆ,
ಅರ್ಜುನ
ಬರುತ್ತಿರುವದ ತಿಳಿದು ಸೂಸಿದ ನಗೆ.
ಸರ್ವಜ್ಞಾ ಸಾ ಲೀಲಯಾ
ಹಾಸಹೇತುಮಪೃಚ್ಛತ್ ತಂ ಸೋsಪಿ ತಸ್ಯೈ
ಬಭಾಷೇ ।
ಲೀಲಾಭಾಜೌ ದರ್ಶನಾರ್ತ್ಥಂ
ಪುನಸ್ತಾವಗಚ್ಛತಾಂ ರೈವತಂ ಶೈಲರಾಜಮ್ ॥೨೦.೧೬೭॥
ಸರ್ವಜ್ಞಳಾದ
ಭಾಮೆ ಕೃಷ್ಣನ ಕೇಳಿದಳು ನಕ್ಕ ಕಾರಣ,
ತಿಳಿದ
ಕೃಷ್ಣನೂ ಮಾಡಿದನೊಮ್ಮೆ ವಿಷಯದ ಅನಾವರಣ.
ಇದೊಂದು
ಜಗದ್ಮಾತಾಪಿತರ ಲೀಲೆಯ ಭಾಗ,
ಯತಿದರ್ಶನಕ್ಕೆ
ಇಬ್ಬರೂ ರೈವತಕ್ಕೆ ಬಂದರಾಗ.
ಆಕ್ರೀಡೋsಸೌ ವೃಷ್ಣಿಭೋಜಾನ್ಧಕಾನಾಂ ತತ್ರಾಪಶ್ಯತ್ ಕೇಶವಃ ಫಲ್ಗುನಂ ತಮ್ ।
ಸ್ವಸುರ್ದ್ದಾನೇ ಸಃ
ಪ್ರತಿಜ್ಞಾಂ ರಹೋsಸ್ಮೈ ಚಕ್ರೇ ಕೃಷ್ಣೋsಥಾsಸದತ್
ಸರ್ವವೃಷ್ಣೀನ್ ॥೨೦.೧೬೮॥
ಆ
ಪರ್ವತವು ವೃಷ್ಣಿ-ಭೋಜ-ಅಂಧಕರ ವಿಹಾರಸ್ಥಾನ,
ಅಲ್ಲಿ
ನಡೆಯುತ್ತದೆ ಕೃಷ್ಣ ಅರ್ಜುನರ ರಹಸ್ಯ ಸಂಧಾನ.
ಅರ್ಜುನಗೆ
ತನ್ನ ತಂಗಿಯ ಕೊಡುವುದಾಗಿ ಕೃಷ್ಣ ಮಾತು ಕೊಟ್ಟ,
ಆನಂತರ
ಸಮಸ್ತ ಯಾದವರನ್ನು ಸೇರಿಕೊಂಡ ಯದುಶ್ರೇಷ್ಠ.
ದೃಷ್ಟ್ವಾ ಗಿರೌ
ರೌಹಿಣೇಯೋ ಯತೀನ್ದ್ರವೇಷಂ ಪಾರ್ತ್ಥಂ ಜ್ಞಾತಿಯುಕ್ತಃ ಪ್ರಣಮ್ಯ ।
ಚಕ್ರೇ ಪೂಜಾಂ ಫಲ್ಗುನೋsಪಿ ಪ್ರಣಾಮಂ ಗುಣಜ್ಯೇಷ್ಠೋsಸೀತಿ ಚಕ್ರೇ ಬಲಾಯ ॥೨೦.೧೬೯॥
ರೈವತಪರ್ವತದಲ್ಲಿ
ಯತಿವೇಷಧಾರಿ ಅರ್ಜುನನ ಕಂಡ ಬಲರಾಮ,
ಬಾಂಧವರಿಂದ
ಕೂಡಿ ಯತಿಯ ಸತ್ಕರಿಸಿ ಅವನಿಗೆ ಮಾಡಿದ ಪ್ರಣಾಮ,
'ನೀನು ಗುಣದಲ್ಲಿ ನನಗಿಂತ ಶ್ರೇಷ್ಠ' ಎಂದ
ಅರ್ಜುನ,
ಹಿರಿಯ
ಬಲರಾಮಗೆ ಸಲ್ಲಿಸಿದ ಗೌರವದ ನಮನ.
No comments:
Post a Comment
ಗೋ-ಕುಲ Go-Kula