Saturday, 25 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 170 - 173

 ಸರ್ವಜ್ಞಂ ತಂ ವಾಗ್ಗ್ಮಿನಂ ವೀಕ್ಷ್ಯ ರಾಮಃ ಕನ್ಯಾಗಾರೇ ವರ್ಷಕಾಲೇ ನಿವಾಸಮ್ ।

ಸತ್ಕಾರಪೂರ್ವಂ ಕಾರಯೇತ್ಯಾಹ ಕೃಷ್ಣಂ ನೈವೇತ್ಯೂಚೇ ಕೇಶವೋ ದೋಷವಾದೀ ॥೨೦.೧೭೦॥

ಬಲರಾಮಗೆ ಮೆಚ್ಚುಗೆಯಾಯ್ತು ಸರ್ವಜ್ಞ, ಮಾತುಗಾರ,ಅರ್ಜುನನ ಯತಿವೇಷ,

ಕೃಷ್ಣಗೆ ಹೇಳಿದ -ಈತಗೆ ಸುಭದ್ರೆಯ ಮನೆಯಲ್ಲಾಗಲಿ ಆತಿಥ್ಯ,ಮಳೆಗಾಲವಾಸ.

ಶ್ರೀಕೃಷ್ಣ ಆಕ್ಷೇಪಿಸುತ್ತಾ ಅದು ಬೇಡವೆಂದ,

ಯುಕ್ತವಲ್ಲ-ದೋಷವದು ಎಂದವನ ವಾದ.

 

ಯುವಾ ಬಲೀ ದರ್ಶನೀಯೋsತಿವಾಗ್ಗ್ಮೀ ನಾಯಂ ಯೋಗ್ಯಃ ಕನ್ಯಾಕಾಗಾರವಾಸಮ್ ।

ಇತ್ಯುಕ್ತವನ್ತಂ ರಾಮ ಆಹಾsಪ್ತವಿದ್ಯೇ ನಾಸ್ಮಿಞ್ಛಙ್ಕೇತ್ಯೇವ ಲೋಕಾಧಿನಾಥಮ್ ॥೨೦.೧೭೧॥

ಇವನು ಕಟ್ಟುಮಸ್ತಾದ ನವಯುವಕ,

ಮಾತುಗಾರ-ನೋಡಲು ಮನಮೋಹಕ.

ಕೃಷ್ಣನ ಮಾತಲ್ಲಿ ಕನ್ಯಾಗಾರದ ವಸತಿಗೆ ಯೋಗ್ಯನಲ್ಲನೆಂಬ ಭಾವ,

ಬಲರಾಮನೆಂದ -ವಿದ್ಯೆ ಬಲ್ಲ ಇವನಲ್ಲಿ ಮಾಡಬಾರದು ಸಂದೇಹ.

 

ನಾಸ್ಮನ್ಮತೇ ರೋಚತೇ ತ್ವನ್ಮತಂ ತು ಸರ್ವೇಷಾಂ ನಃ ಪೂಜ್ಯಮೇವಾಸ್ತು ತೇನ ।

ಇತ್ಯುಕ್ತ್ವಾ ತಂ ಕೇಶವಃ ಸೋದರಾಯೈ ಶುಶ್ರೂಷಸ್ವೇತ್ಯಾಹ ಸನ್ತಂ ಯತೀನ್ದ್ರಮ್ ॥೨೦.೧೭೨॥

ನಮಗೇನೂ ಹಿಡಿಸುತ್ತಿಲ್ಲ ಅಣ್ಣ ನಿನ್ನ ಅಭಿಪ್ರಾಯ,

ಆದರೆ ನಿನ್ನ ಮಾತಿನಲ್ಲಿ ನಮಗೆಲ್ಲರಿಗೂ ಇದೆ ಗೌರವ.

ಹಾಗಾಗಿ ನಿನ್ನ ಮಾತು ಪೂಜ್ಯ ಅನುಕರಣನೀಯ,

ತಂಗಿಗೆ ಯತಿಶ್ರೇಷ್ಠನ ಸೇವೆ ಮಾಡೆಂದ ಕೇಶವ.

 

ನಿತ್ಯಾಪ್ರಮತ್ತಾ ಸಾಧು ಸನ್ತೋಷಯೇತಿ ಪ್ರೋಕ್ತಾ ತಥಾ ಸಾsಕರೋತ್ ಸೋsಪಿ ತತ್ರ ।

ಚಕ್ರೇ ಮಾಸಾನ್ ವಾರ್ಷಿಕಾನ್ ಸತ್ಕಥಾಭಿರ್ವಾಸಂ ವಾಕ್ಯಂ ಶ್ರದ್ಧಧಾನೋ ಹರೇಸ್ತತ್ ॥೨೦.೧೭೩॥

ಕೃಷ್ಣನೆಂದ-ಕರ್ತವ್ಯಗಳಲ್ಲಿ ಮೈಮರೆಯದೇ ಯತಿಸೇವೆ ಮಾಡು,

ಸಮ್ಮತಿಸಿ ಪಾಲಿಸಿದಳು ಸುಭದ್ರೆ ಅಣ್ಣ ಕೃಷ್ಣ ವಚನದ ಜಾಡು.

ಕೃಷ್ಣನ ಮಾತಿನಂತೆ ಅಲ್ಲಾಯಿತು ಅರ್ಜುನನ ಚಾತುರ್ಮಾಸ,

ಒಳ್ಳೊಳ್ಳೆ ಕಥೆಗಳ ಹೇಳುತ್ತಾ ಅರ್ಜುನ ಅಲ್ಲೇ ಮಾಡಿದ ವಾಸ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula