Friday 24 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 98 - 103

 ಶ್ರುತ್ವಾ ಭೌಮಃ ಕೃಷ್ಣಮಾಯಾತಮಾರಾದಕ್ಷೋಹಿಣೀತ್ರಿಂಶಕೇನಾಭ್ಯಯಾತ್ ತಮ್

ಜಘ್ನೇ ಸೇನಾಂ ಗರುಡಃ ಪಕ್ಷಪಾತೈಃ ಪಾದಂ ಶೇಷಾಂ ಕೇಶವಃ ಸಾಯಕೌಘೈಃ ೨೦.೯೮

 ಶ್ರೀಕೃಷ್ಣ ಬಂದಿರುವ ವಿಷಯವನ್ನು ನರಕಾಸುರ ಕೇಳಿ ತಿಳಿದುಕೊಂಡ,

ತನ್ನ ಮೂವತ್ಮೂರು ಅಕ್ಷೋಹಿಣಿ ಸೇನೆ ಜೊತೆ ಕೃಷ್ಣನ ಎದುರುಗೊಂಡ.

ಗರುಡನೇ ತನ್ನ ರೆಕ್ಕೆಯಿಂದ ಅವನ ಕಾಲುಭಾಗ ಸೈನ್ಯವ ಕೊಂದ,

ಕೃಷ್ಣ ತನ್ನ ಬಾಣಗಳಿಂದ ನರಕಾಸುರನ ಉಳಿದ ಸೈನ್ಯವ ತರಿದ.

 

ಅಥಾsಸಸಾದಾsಶು ಭೌಮೋsಚ್ಯುತಂ ತಂ ಮುಞ್ಚಛ್ಞರಾನಸ್ತ್ರಸಮ್ಮನ್ತ್ರಿತಾನ್ ದ್ರಾಕ್ ।

ವಿವ್ಯಾಧ ತಂ ಕೇಶವಃ ಸಾಯಕೌಘೈರ್ಭೌಮಃ ಶತಘ್ನೀಂ ಬ್ರಹ್ಮದತ್ತಾಮಮುಞ್ಚತ್ ॥೨೦.೯೯

ನರಕಾಸುರ ತನ್ನ ಸೈನ್ಯ ನಾಶವಾದ ಕೂಡಲೇ,

ಅಭಿಮಂತ್ರಿತ ಬಾಣಗಳನೆಸೆದ ಕೃಷ್ಣನ ಮೇಲೆ.

ಬಾಣಗಳ ಸಮೂಹದಿಂದ ಅವನನ್ನು ಗಾಯಗೊಳಿಸಿದ ಕೇಶವ,

ನರಕ ಬಳಸಿದನಾಗ ಶತಘ್ನೀ ಎಂಬ ಬ್ರಹ್ಮದತ್ತ ಆಯುಧವ.

 

ಅಚ್ಛೇದ್ಯೋsಭೇದ್ಯೋ ನಿತ್ಯಸಂವಿತ್ಸುಖಾತ್ಮಾ ನಿತ್ಯಾವ್ಯಯಃ ಪೂರ್ಣ್ಣಶಕ್ತಿಃ ಸ ಕೃಷ್ಣಃ ।

ನಿಗೀರ್ಯ್ಯ ತಾಂ ದೇವವರಃ ಶತಘ್ನೀಂ ನಿತ್ಯಾಶ್ರಾನ್ತೋsದರ್ಶಯಚ್ಛ್ರಾನ್ತವಚ್ಚ ॥೨೦.೧೦೦

ಪರಿಪೂರ್ಣಶಕ್ತಿ,ನಾಶವಿರದ , ನಿತ್ಯವಾದ, ಜ್ಞಾನ ಸುಖಗಳ ಗಡಣ,

ಭೇಧಿಸಲಾಗದ,ಛೇದಿಸಲಾಗದ,ದೇವೋತ್ತಮನಾದವ ಶ್ರೀಕೃಷ್ಣ,

ಕೊಂಚವೂ ಶ್ರಮವಿಲ್ಲದೇ ಆ ಶತಘ್ನಿಯ ನುಂಗಿದ,

ಲೋಕಮೋಹಕ್ಕಾಗಿ ಬಳಲಿದವನಂತೆ ತೋರಿಸಿಕೊಂಡ.

 

ಬಹೂನ್ ವರಾನ್ ಬ್ರಹ್ಮಣೋsನ್ಯೇಷ್ವಮೋಘಾನ್ ಮೋಘೀಕೃತಾನ್ ವೀಕ್ಷ್ಯ ಪರಾತ್ಪರೇಶಃ ।

ಭವೇತ್ ಕಥಞ್ಚಿದ್ ಬಹುಮಾನೇನ ಯುಕ್ತ ಇತ್ಯೇವ ಕೃಷ್ಣೋsದರ್ಶಯಚ್ಛ್ರಾನ್ತವತ್ ಸ್ವಮ್ ॥೨೦.೧೦೧

ಇತರರ ವಿಷಯದಲ್ಲಿ ಎಂದೂ ವ್ಯರ್ಥವಾಗದ ವರವ ನೀಡುವ ಬ್ರಹ್ಮನಲ್ಲಿ,

ನರಕಾಸುರಗೆ ಕನಿಷ್ಠ ಭಾವನೆ ಬರಬಾರದೆನ್ನುವ ಕೃಷ್ಣನ ಯುಕ್ತಿ ಇತ್ತಲ್ಲಿ.

ಸರ್ವೋತ್ಕೃಷ್ಟ ಸರ್ವೋತ್ತಮ ಶ್ರೀಕೃಷ್ಣ,

ಬಳಲಿದವನಂತೆ ತೋರಿಕೊಂಡ ಆ ಕ್ಷಣ.

 

ತದಾ ದೃಪ್ತಂ ನರಕಂ ವೀಕ್ಷ್ಯ ದೇವೀ ಸತ್ಯಾssದದೇ ಕಾರ್ಮ್ಮುಕಂ ಶಾರ್ಙ್ಗಸಞ್ಜ್ಞಮ್ ।

ಚಕಾರ ತಂ ಯತಮಾನಂ ಚ ಭೌಮಂ ನಿರಾಯುಧಂ ವಿರಥಂ ಚ ಕ್ಷಣೇನ ॥೨೦.೧೦೨

ದರ್ಪ ಹೊಂದಿದ ನರಕನತ್ತ ಆಗ ಸತ್ಯಭಾಮೆಯ ನೋಟ,

ಶಾರ್ಙ್ಗ ಎನ್ನುವ ಹೆಸರಿನ ಬಿಲ್ಲನ್ನು ಎತ್ತಿಕೊಂಡ ಆ ಆಟ.

ಯುದ್ಧದಲ್ಲಿ ಆಕೆಯ ಸೋಲಿಸಲು ನರಕನಿಂದ ಬಹು ಪ್ರಯತ್ನ,

ಕೆಲಕ್ಷಣಗಳಲ್ಲೇ ಭಾಮೆಯಿಂದ ಅವನಾದ ನಿರಾಯುಧ ರಥಹೀನ.

 

ಆಲಿಙ್ಗ್ಯ ಕೃಷ್ಣಃ ಸತ್ಯಭಾಮಾಂ ಪುನಶ್ಚ ರಥಾನ್ತರೇ ಸಂಸ್ಥಿತಂ ಭೌಮಮುಗ್ರಮ್ ।

ಸೃಜನ್ತಮಸ್ತ್ರಾಣ್ಯರಿಣಾ ನಿಕೃತ್ತಕನ್ಧಂ ಮೃತ್ಯೋರರ್ಪ್ಪಯಾಮಾಸ ಶೀಘ್ರಮ್ ॥೨೦.೧೦೩

ಶ್ರೀಕೃಷ್ಣ ಸತ್ಯಭಾಮಾದೇವಿಗಿತ್ತ ಆಲಿಂಗನದ ಭಾಗ್ಯ,

ಬೇರೊಂದು ರಥದಲ್ಲಿ ಬಾಣ ಬಿಡುತ್ತಾ ಬರುತ್ತಿದ್ದ ನರಕನಾಗ.

ಶ್ರೀಕೃಷ್ಣ ತನ್ನ ಚಕ್ರದಿಂದ ಮಾಡಿದನವನ ಶಿರಚ್ಛೇದನ,

ಮೃತ್ಯುಕೂಪಕ್ಕೆ ದೂಡಿದನವನ ದೇವ ಮಧುಸೂದನ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula