ಪ್ರವಿಶ್ಯ ಚೇಶಃ ಸ್ವಪುರೀಂ ಸ ಯಾದವೈಃ ಸುಪೂಜಿತೋsನ್ತಃ ಪುರಮೇತ್ಯ ಚಾಙ್ಗಣೇ ।
ತರುಂ ಪ್ರಿಯಾಯಾ
ನ್ಯದಧಾದ್ ಗೃಹಸ್ಯ ಸಹೈವ ಶೃಙ್ಗೇಣ ಚ ರತ್ನಸದ್ಗಿರೇಃ ॥೨೦.೧೩೮ ॥
ಸರ್ವಸಮರ್ಥ
ಶ್ರೀಕೃಷ್ಣ ತನ್ನ ಪಟ್ಟಣ ದ್ವಾರಕೆಯ ಪ್ರವೇಶಿಸಿದ,
ಯಾದವರಿಂದ
ಪೂಜೆಗೊಂಡವನಾಗಿ ಅಂತಃಪುರ ಹೊಂದಿದ.
ಭಾಮೆಮನೆಯಂಗಳದಿ
ರತ್ನಶಿಖರ ಸಮೇತ,
ಕೃಷ್ಣ
ನೆಟ್ಟ ವೃಕ್ಷವಾಗಿತ್ತದು ದಿವ್ಯ ಪಾರಿಜಾತ.
ಪ್ರದಾಯ ರತ್ನಾನಿ ಚ ಸರ್ವಸಾತ್ತ್ವತಾಂ
ಯಥೇಷ್ಟತಸ್ತಾ ಅಪಿ ಕನ್ಯಕಾಃ ಪ್ರಭುಃ ।
ಉದ್ವಾಹ್ಯ ರೇಮೇ ಪೃಥಗೇವ
ರತ್ನಪ್ರಾಸಾದಸಂಸ್ಥಾಭಿರನನ್ತರೂಪಃ ॥೨೦.೧೩೯ ॥
ಯಾದವರೆಲ್ಲರಿಗೂ
ಅವರಿಚ್ಛೆಯಂತೆ ರತ್ನಗಳ ನೀಡಿದ,
ನರಕನಿಂದ
ಬಿಡಿಸಿತಂದ ೧೬೧೦೦ ಕನ್ಯೆಯರ ಮದುವೆಯಾದ.
ಅವರೆಲ್ಲರನ್ನೂ
ಪ್ರತ್ಯೇಕವಾದ ರತ್ನದುಪ್ಪರಿಗೆಗಳಲ್ಲಿ ಇರಿಸಿದ,
ಅನಂತರೂಪನಾಗಿ
ಅವರೆಲ್ಲರೊಂದಿಗೆ ಕ್ರೀಡಿಸುತ್ತ ರಮಿಸಿದ.
ಪೃಥಕ್ಪೃಥಕ್ ತಾಸು ದಶೈವ
ಪುತ್ರಕಾನಧತ್ತ ಕನ್ಯಾಮಪಿ ಸರ್ವಶಃ ಪ್ರಭುಃ ।
ಪ್ರದ್ಯುಮ್ನಸಾಮ್ಭಾವ॑ಪಿ
ಭಾನುಚಾರುದೇಷ್ಣೌ ಚ ತೇಷಾಂ ನಿತರಾಂ ಗುಣಾಧಿಕಾಃ ॥೨೦.೧೪೦॥
ಸರ್ವಸಮರ್ಥನಾದ
ಶ್ರೀಕೃಷ್ಣಪರಮಾತ್ಮ ತಾನು,
ತನ್ನ
ಪ್ರತಿ ಪತ್ನಿಯಲ್ಲಿ ಹತ್ತು ಗಂಡು ಮಕ್ಕಳನ್ನು,
ಕೊಟ್ಟ
ಎಲ್ಲರಿಗೂ ಒಂದೊಂದು ಹೆಣ್ಣುಮಗುವನ್ನು.
ಆ
ಅಷ್ಟೂ ಕೃಷ್ಣಪತ್ನಿಯರ ನೂರಾರು ಮಕ್ಕಳಲ್ಲಿ ವಿಶೇಷವಾಗಿ,
ಪ್ರದ್ಯುಮ್ನ,ಸಾಂಬ,ಭಾನು,ಚಾರುದೇಷ್ಣರಿದ್ದರು
ಗುಣಾಧಿಕರಾಗಿ.
[ಭಾನು
ಮತ್ತು ಚಾರುದೇಷ್ಣರ ಮೂಲ ಪರಿಚಯಿಸುತ್ತಾರೆ:]
ವಿವಸ್ವತೋ ಯೋsವರಜೋsದಿತೇಃ
ಸುತಃ ಖ್ಯಾತಶ್ಚ ನಾಮ್ನಾ ಸವಿತೇತಿ ಕೃಷ್ಣಾತ್ ।
ಜಾತಃ ಸ ಸತ್ಯಾಜಠರೇsತ್ರ ನಾಮ್ನಾ ಭಾನುಸ್ತು ಭೈಷ್ಮ್ಯಾ ಅಪಿ ಚಾರುದೇಷ್ಣಃ ॥ ೨೦.೧೪೧॥
ಭಾನು
ಅದಿತಿಯ ಮಗನಾಗಿ, ಸೂರ್ಯನ ತಮ್ಮನಾಗಿದ್ದ,
ಹನ್ನೆರಡು
ಮಂದಿ ಆದಿತ್ಯರಲ್ಲಿ ಸವಿತನೆಂದು ಖ್ಯಾತನಾಗಿದ್ದ.
ಅವನ
ಹುಟ್ಟು ಕೃಷ್ಣನಿಂದ ಭಾಮೆಯಲ್ಲಿ,
ಚಾರುದೇಷ್ಣನ
ಹುಟ್ಟಾಗಿತ್ತು ರುಗ್ಮಿಣಿಯಲ್ಲಿ.
ಸ ಚಾರುದೇಷ್ಣೋsಪಿ ಹಿ ವಿಘ್ನರಾಜೋ ಯೇsನ್ಯೇ ಚ ಕೃಷ್ಣಸ್ಯ ಸುತಾಃ ಸಮಸ್ತಾಃ ।
ತೇ ಚೈವ
ಗೀರ್ವಾಣಗಣಾಸ್ತಥಾsನ್ಯೇ ಯೇ ದ್ವಾರಕಾಯಾಂ
ನಿವಸನ್ತಿ ಸರ್ವೇ ॥ ೨೦.೧೪೨ ॥
ಚಾರುದೇಷ್ಣ
ಸಾಕ್ಷಾತ್ ಗಣಪತಿಯಾಗಿದ್ದ ದೇವತೆ, ಕೃಷ್ಣನೆಲ್ಲಾ ಮಕ್ಕಳೂ ದೇವತೆಗಳೆಂಬುದು
ವಿಶೇಷತೆ.
ಯಾರೆಲ್ಲಾ
ದ್ವಾರಕೆಯಲ್ಲಿ ಮಾಡುತ್ತಿದ್ದರೋ ವಾಸ,
ಅವರೆಲ್ಲಾ
ದೇವಗಣವೆಂಬುದು ದೇವತಾ ರಹಸ್ಯ.
No comments:
Post a Comment
ಗೋ-ಕುಲ Go-Kula