ತಯಾsಚ್ಯುತೋsಸೌ ಕನಕಾವದಾತಯಾ ಸುಕುಙ್ಕುಮಾದಿಗ್ಧಪಿಶಙ್ಗವಾಸಸಾ ।
ಪೂರ್ಣ್ಣೇನ್ದುಕೋಟ್ಯೋಘಜಯನ್ಮುಖಾಬ್ಜಯಾ
ರೇಮೇsಮಿತಾತ್ಮಾ ಜಗದೇಕಸುನ್ದರಃ ॥೨೦.೧೨೧ ॥
ಸಮಸ್ತ
ಜಗತ್ತಿನಲ್ಲಿಯೇ ಅತ್ಯಂತ ಸುಂದರ,
ಅನಂತರೂಪರಾಶಿ
ಅಚ್ಯುತವಾದ ಬಂಗಾರ,
ಕಾಂತಿಯುಕ್ತ
ಕುಂಕುಮಲೇಪಿತ ಪೀತಾಂಬರಧರ,
ಕೋಟಿ
ಚಂದ್ರರ ಗೆಲ್ಲಬಲ್ಲ ಕೃಷ್ಣನ ಮುಖಚರ್ಯ,
ಆ
ಕೃಷ್ಣ ಭಾಮೆಯೊಡಗೂಡಿ ಮಾಡಿದ ವಿಹಾರ.
ಸರ್ವರ್ತ್ತುನಿತ್ಯೋದಿತಸರ್ವವೈಭವೇ
ಸುರತ್ನಚಾಮೀಕರವೃಕ್ಷಸದ್ವನೇ ।
ಸದೈವ ಪೂರ್ಣ್ಣೇನ್ದುವಿರಾಜಿತೇ
ಹರಿಶ್ಚಚಾರ ದೇವ್ಯಾ ಪವನಾನುಸೇವಿತೇ ॥ ೨೦.೧೨೨ ॥
ಎಲ್ಲಾ
ಋತುಗಳ ಎಲ್ಲಾ ವೈಭವಗಳ ಆ ತಾಣ,
ರತ್ನ
ಸ್ವರ್ಣವೃಕ್ಷಗಳುಳ್ಳ ಚಂದ್ರಕಾಂತಿಯ ಉದ್ಯಾನ.
ತಂಗಾಳಿಯುಕ್ತ
ತೋಟವಾಗಿತ್ತು ಅತ್ಯಂತ ಮನೋಹರ,
ಆ
ಉದ್ಯಾನದಲ್ಲಿ ಭಾಮೆಯೊಂದಿಗೆ ಕೃಷ್ಣ ಮಾಡಿದ ವಿಹಾರ.
ವಿದೋಷಸಂವಿತ್ತನುರತ್ರ
ಸತ್ತರುಂ ದದರ್ಶ ಸತ್ಯಾsಮೃತಮನ್ಥನೋದ್ಭವಮ್
।
ಸ ಪಾರಿಜಾತಂ
ಮಣಿಕಾಞ್ಚನಾತ್ಮಕಂ ಸಮಸ್ತಕಾಮಪ್ರದಮಾರ್ತ್ತಿಹಾರಿಣಮ್ ॥ ೨೦.೧೨೩ ॥
ಯಾವುದೇ
ದೋಷವಿಲ್ಲದ ಆ ಉದ್ಯಾನ,
ಭಾಮೆಯಾದರೋ
ಮೈವೆತ್ತುಬಂದವಳು ಜ್ಞಾನ.
ಅಮೃತಮಥನದಲ್ಲಿ
ಹುಟ್ಟಿದ ಬಂಗಾರ ಹಾಗೂ ಮುತ್ತುಗಳು,
ಅಭೀಷ್ಟಗಳೀವ
ಸಂಕಟಮೋಚಕ ಪಾರಿಜಾತ ವೃಕ್ಷವ ಕಂಡಳು.
ದೃಷ್ಟ್ವೈವ ತಂ
ಸುಸ್ಮಿತಚನ್ದ್ರಿಕಾಸ್ಫುರನ್ಮುಖಾರವಿನ್ದಾsಸಿತಲೋಲಲೋಚನಾ
।
ಕಪೋಲನಿರ್ಭಾತಚಲತ್ಸುಕುಣ್ಡಲಾ
ಜಗಾದ ದೇವಾಧಿಪತಿಂ ಪತಿಂ ಸತೀ ॥ ೨೦.೧೨೪ ॥
ಮುಗುಳುನಗೆಯಿಂದ
ಬೆಳದಿಂಗಳಂತೆ ಕಾಣುವ ಚೆಲುಮುಖದವಳು,
ಕಪ್ಪಾದ
ಚಂಚಲ ಕಣ್ಣುಳ್ಳ ಕುಂಡಲಗಳ ಬಿಂಬ ತೋರುವ ಕೆನ್ನೆಯವಳು,
ಅಂತಹಾ
ಸತ್ಯಭಾಮೆ ಪಾರಿಜಾತ ವೃಕ್ಷವ ಕಂಡಳು,
ದೇವತೆಗಳ
ದೊರೆ ಶ್ರೀಕೃಷ್ಣಗೆ ಹೀಗೆ ಹೇಳಿದಳು.
ತರುರ್ಜ್ಜಗಜ್ಜೀವದ ಮೇ
ಗೃಹಾಙ್ಗಣೇ ಸಂಸ್ಥಾಪನೀಯೋsಯಮಚಿನ್ತ್ಯಪೌರುಷ
।
ಇತೀರಿತಸ್ತಾಂ
ಕಲಶೋಪಮಸ್ತನೀಮಾಲಿಙ್ಗ್ಯ ದೇವಸ್ತರುಮುದ್ಬಬರ್ಹ ॥ ೨೦.೧೨೫ ॥
ಜಗತ್ತಿಗೆ
ಜೀವನವನ್ನೀಯುವ ಆ ದಾತ,
ಚಿಂತಿಸಲಸಾಧ್ಯವಾದ
ಪೌರುಷದ ತಾತ.
ಕೃಷ್ಣಾ, ನನ್ನ
ಮನೆ ಮುಂದಿನ ಅಂಗಳದಲ್ಲಿ,
ಈ
ಪಾರಿಜಾತ ಮರ ಸ್ಥಾಪಿತವಾಗಬೇಕಲ್ಲಿ.
ತುಂಬಿದೆದೆಗಾತಿ
ಭಾಮೆ ಹೇಳಿದಳು ಮೇಲಿನ ಮಾತ,
ಅವಳನ್ನಾಲಿಂಗಿಸಿದ
ಶ್ರೀಕೃಷ್ಣ ಪಾರಿಜಾತ ವೃಕ್ಷವ ಕಿತ್ತ.
No comments:
Post a Comment
ಗೋ-ಕುಲ Go-Kula