ಸ ಮನ್ತ್ರಿಭಿರ್ಮ್ಮನ್ತ್ರಿಪುತ್ರೈಃ ಸಮೇತೋ ಜಗಾಮ ಕೃಷ್ಣಾವಜ್ಞಯಾsನ್ಧಂ ತಮಶ್ಚ ।
ತದಾವಿಷ್ಟೋ ವಾಯುರಗಾಚ್ಚ
ಕೃಷ್ಣಮನ್ತಃಪುರಂ ಪ್ರಾವಿಶತ್ ಸತ್ಯಯೇಶಃ ॥೨೦.೧೦೪॥
ಆ
ನರಕಾಸುರ ಶ್ರೀಕೃಷ್ಣನನ್ನು ಮಾಡಿದ್ದರಿಂದ ತಿರಸ್ಕಾರ,
ತನ್ನ
ಮಂತ್ರಿ, ಮಂತ್ರಿಪುತ್ರರ ಜೊತೆ ಅಂಧಂತಮಸ್ಸಿ ಗಾದ ಆಹಾರ.
ಅವನಲ್ಲಿ
ಆವಿಷ್ಟನಾಗಿದ್ದ ಮುಖ್ಯಪ್ರಾಣ ತಾನು,
ಜಗದೊಡೆಯ
ಶ್ರೀಕೃಷ್ಣನನ್ನು ಸೇರಿಕೊಂಡನು.
ಶ್ರೀಕೃಷ್ಣ
ಸತ್ಯಭಾಮೆಯ ಸಮೇತ,
ನರಕನ
ಅಂತಃಪುರ ಪ್ರವೇಶಿಸಿದನಾತ.
ತದಾ ಭೂಮಿಃ
ಪಞ್ಚಭೂತಾವರಾ ಯಾ ಯಸ್ಯಾಂ ಜಜ್ಞೇ ನರಕಃ ಶ್ರೀವರಾಹಾತ್ ।
ಮೂಲಪ್ರಕೃತ್ಯೈವ ಭೂಮ್ಯಾ
ನಿತಾನ್ತಮಾವಿಷ್ಟಾ ಯಾ ಸಾsಗಮತ್
ಕೃಷ್ಣಪಾದೌ ॥೨೦.೧೦೫॥
ಪಂಚಭೂತಗಳಲ್ಲಿ
ಕೊನೆಯವಳಾದ ಭೂಮಿದೇವಿ,
ಶ್ರೀವರಾಹನಿಂದ
ನರಕಾಸುರಗಾಗಿದ್ದಳವಳು ತಾಯಿ.
ಮೂಲಪ್ರಕೃತಿ
ಲಕ್ಷ್ಮಿದೇವಿಯಿಂದ ಆತ್ಯಂತಿಕವಾಗಿ ಪ್ರವಿಷ್ಟಳಾದವಳು,
ನರಕನ
ತಾಯಿಯಾದ ಭೂದೇವಿ ಶ್ರೀಕೃಷ್ಣನ ಪಾದಗಳಿಗೆ ನಮಿಸಿದಳು.
ಸಾsದಿತ್ಯಾಸ್ತೇ ಕುಣ್ಡಲೇ ಪಾದಯೋಶ್ಚ ನಿಧಾಯ ಪೌತ್ರಂ ಭಗದತ್ತಸಞ್ಜ್ಞಮ್ ।
ಸಮರ್ಪ್ಪಯಾಮಾಸ
ತಸ್ಯಾಭಿಷೇಕಂ ಪ್ರಾಗ್ಜ್ಯೋತಿಷೇ ಕಾರಯಾಮಾಸ ಕೃಷ್ಣಃ ॥೨೦.೧೦೬॥
ನರಕಾಸುರನು
ಅದಿತಿಯಿಂದ ಅಪಹರಿಸಿದ ಕುಂಡಲಗಳನ್ನು,
ಕೃಷ್ಣನ
ಪಾದಗಳಲ್ಲಿಟ್ಟು ಅರ್ಪಿಸಿದಳು ಭಗದತ್ತ ಎಂಬ ಮೊಮ್ಮೊಗನನ್ನು.
ಶ್ರೀಕೃಷ್ಣ
ಮಾಡಿದ ಪ್ರಗ್ಜ್ಯೋತಿಷದಲ್ಲಿ ಭಗದತ್ತನ ಅಭಿಷೇಕವನ್ನು.
ಸಂಸ್ಥಾಪ್ಯ ತಂ
ಸರ್ವಕಿರಾತರಾಜ್ಯೇ ಭೌಮಾಹೃತಂ ವೈಶ್ರವಣಾದ್ ಬಲೇನ ।
ಶಿವೇನ ದತ್ತಂ
ಧನದಾಯಾತಿಸತ್ತ್ವಂ ಭಗದತ್ತೇ ನ್ಯದಧಾತ್ ಸುಪ್ರತೀಕಮ್ ॥೨೦.೧೦೭॥
ಶ್ರೀಕೃಷ್ಣ
ಭಗದತ್ತಗಿತ್ತ ಪ್ರಗ್ಜ್ಯೋತಿಷದ ಪಟ್ಟ,
ಕುಬೇರನಿಗಾಗೇ
ಸದಾಶಿವನಿಂದ ಕೊಡಲ್ಪಟ್ಟ,
ನರಕ
ಕುಬೇರನಿಂದ ಬಲಾತ್ಕಾರವಾಗಿ ತರಲ್ಪಟ್ಟ,
ಅತಿಬಲದ
ಸುಪ್ರತೀಕ ಎಂಬಾನೆಯ ಭಗದತ್ತಗಿತ್ತ.
ಕರೀನ್ದ್ರಮೇಕಂ ತಂ
ನಿಧಾಯೈವ ತಸ್ಮಿನ್ ಕೃತ್ವಾ ಪ್ರಸಾದಂ ಚ ವಸುನ್ಧರಾಯಾಃ ।
ಚತುರ್ದ್ದನ್ತಾನ್ ಷಟ್
ಸಹಸ್ರಾನ್ ಕರೀನ್ದ್ರಾನ್ ಪಯೋಬ್ಧಿಜಾನ್ ಪ್ರಾಹಿಣೋದ್ ದ್ವಾರವತ್ಯೈ॥೨೦.೧೦೮॥
ಶ್ರೇಷ್ಠ
ಸುಪ್ರತೀಕವ ಭಗದತ್ತಗೆ ಕೊಟ್ಟ,
ಭೂದೇವಿಯಲ್ಲಿ
ತನ್ನ ಅನುಗ್ರಹ ಇಟ್ಟ.
ಕ್ಷೀರಸಾಗರದಿ
ಹುಟ್ಟಿದ ವಿಶೇಷ ನಾಕು ಕೋರೆಗಳುಳ್ಳ,
ಆರುಸಾವಿರ
ಆನೆಗಳ ದ್ವಾರಾವತಿಗೆ ಕಳಿಸಿದ ಹಿರಿಗೊಲ್ಲ.
No comments:
Post a Comment
ಗೋ-ಕುಲ Go-Kula