ಸ ತೇನ ವೃಕ್ಷೇಣ ಸಹೈವ ಕೇಶವಸ್ತಯಾ ಚ ದೇವ್ಯಾssರುಹದಗ್ರ್ಯಪೌರುಷಮ್ ।
ಖಗೇಶ್ವರಂ ತಚ್ಚ ನಿಶಮ್ಯ
ಶಚ್ಯಾ ಪ್ರಚೋದಿತೋ ವಾಸವ ಆಗಮತ್ ಸುರೈಃ ॥ ೨೦.೧೨೬ ॥
ನಾರಾಯಣ
ಪಾರಿಜಾತವೃಕ್ಷ ಮತ್ತು ಸತ್ಯಭಾಮೆಯಿಂದೊಡಗೂಡಿ ಗರುಡನನ್ನೇರಿದ,
ಅದನ್ನು
ಕೇಳಿ ಶಚಿಯಿಂದ ಪ್ರಚೋದಿಸಲ್ಪಟ್ಟು ಇಂದ್ರ ದೇವತೆಗಳೊಂದಿಗೆ ಯುದ್ಧಕೆ ಬಂದ.
ತಾನಾಸುರಾವೇಶಯುತಾನ್
ಹರೇಶ್ಚ ಬಲಪ್ರಕಾಶಾಯ ಸಮುದ್ಯತಾನ್ ಸುರಾನ್ ।
ನ್ಯವಾರಯಚ್ಛಾರ್ಙ್ಗಶರಾಸನಚ್ಯುತೈರ್ಹರಿಪ್ರಿಯಾ
ಬಾಣವರೈಃ ಸಮಸ್ತಶಃ ॥ ೨೦.೧೨೭ ॥
ಅಸುರಾವೇಶದಿಂದ
ಕೂಡಿದ ದೇವತೆಗಳು ಭಗವಂತನೆದುರು ಬಲ ತೋರಲು ಬಂದಾಗ , ಸತ್ಯಭಾಮೆ
ಶಾರ್ಙ್ಗವೆಂಬ ಬಿಲ್ಲಿನಿಂದ ಬಿಡಲ್ಪಟ್ಟ ಬಾಣಗಳಿಂದ ಅವರ ತಡೆದಳಾಗ.
ನಿರಾಯುಧಂ ವೈಶ್ರವಣಂ
ಚಕಾರ ಚಿಕ್ಷೇಪ ಚಾಬ್ಧೌ ಗರುಡೋ ಜಲೇಶ್ವರಮ್ ।
ಪ್ರಧಾನವಾಯೋಸ್ತನಯಂ ತು
ವಾಯುಂ ಕೋಣಾಧಿಪಂ ವಹ್ನಿಯಮಾದಿಕಾನಪಿ ॥ ೨೦.೧೨೮ ॥
ಸತ್ಯಭಾಮೆ
ಕುಬೇರನನ್ನು ಮಾಡಿದಳು ನಿರಾಯುಧ,
ಗರುಡದೇವ
ವರುಣನನ್ನು ಸಮುದ್ರದಲ್ಲಿ ಎಸೆದ. ಮುಖ್ಯಪ್ರಾಣನ ಮಗನಾದ (ಮರೀಚಿ)ಪ್ರವಹ ವಾಯುವನ್ನು ,
ದಿಕ್ಕುಗಳಧಿಪತಿಯಾದ ಅಗ್ನಿ, ಯಮ ಮೊದಲಾದವರನ್ನು,
ಸತ್ಯಭಾಮೆ
ಎದುರಿಸಿದಳು ಸಮರ್ಥವಾಗಿ ಅವರೆಲ್ಲರನ್ನು.
ವಿಬೋಧ್ಯ ಶಾರ್ಙ್ಗೋತ್ಥರವೈಃ
ಸ್ವಕಾಂ ತನುಮಾವೇಶಿತಾನಾಮಸುರೈರಗಾದ್ಧರಿಃ ।
ತೇ ಬೋಧಿತಾಸ್ತೇನ ರಣಂ
ವಿಸೃಜ್ಯ ಯಯುರ್ವಿದಿತ್ವಾ ತಮನಾದಿಪೂರುಷಮ್ ॥ ೨೦.೧೨೯ ॥
ಶಾರ್ಙ್ಗಧನಸ್ಸಿನ
ಠೇಂಕಾರದಿಂದಲೇ ತಾನಾರೆಂದು ಅಸುರಾವೇಶದ ದೇವತೆಗಳಿಗೆ ತೋರಿ ತೆರಳಿದ ಕೃಷ್ಣ,
ಕೃಷ್ಣನೇ
ಅನಾದಿಪುರುಷನೆಂದು ತಿಳಿದ ದೇವತೆಗಳು ತೆರಳಿದರು ಕಳಚಿಕೊಂಡು ಅಸುರಾವೇಶದ ಉಷ್ಣ.
ಶಿವಂ ಚ ಶಕ್ರಾರ್ತ್ಥಮುಪಾಗತಂ
ಹರಿರ್ವ್ಯದ್ರಾವಯಚ್ಛಾರ್ಙ್ಗವಿನಿಃಸೃತೈಃ ಶರೈಃ ।
ಸವಾಹನೋ ದೂರತರೇ
ನಿಪಾತಿತೋ ಗರುತ್ಮತಾ ಶಮ್ಭುರಗಾಚ್ಛರಾಹತಃ ॥ ೨೦.೧೩೦ ॥
ಇಂದ್ರನ
ಸಹಾಯಕ್ಕಾಗಿ ಬಂದಿದ್ದ ಸದಾಶಿವನನ್ನು, ಕೃಷ್ಣ ಶಾರ್ಙ್ಗದಿಂದ ಬಿಟ್ಟ ಬಾಣಗಳಿಂದ
ಓಡಿಸಿದನು.
ನಂದಿಯ
ಸಮೇತ ಶಿವ ಗರುಡನಿಂದ ದೂರದಲ್ಲಿ ಬಿದ್ದ,
ಆನಂತರ
ಸದಾಶಿವನು ಅಲ್ಲಿಂದ ಎದ್ದು ಹೊರಟುಹೋದ.
ವಿದ್ರಾವಿತೇ ಬಾಣಗಣೈಶ್ಚ ಶೌರಿಣಾ ಹರೇ ಹರೌ ವಜ್ರಮವಾಸೃಜದ್ ದ್ರುತಮ್
।
ಶಕ್ರೋsಗ್ರಹೀತ್ ತಂ ಪ್ರಹಸನ್ ಜನಾರ್ದ್ದನಃ ಕರೇಣ ವಾಮೇನ ಸ ಚಾಪಜಗ್ಮಿವಾನ್ ॥೨೦.೧೩೧ ॥
ಹೀಗೆ
ಬಾಣಗಳಿಗೆ ಸಿಲುಕಿ ಸದಾಶಿವ ಓಡುತ್ತಿರುವಾಗ,
ಇಂದ್ರ
ಕೃಷ್ಣನ ಮೇಲೆ ವಜ್ರಾಯುಧವ ಪ್ರಯೋಗಿಸಿದನಾಗ.
ಕೃಷ್ಣ
ನಗುತ್ತಾ, ತನ್ನ ಎಡಗೈಯಿಂದ
ವಜ್ರವನ್ನು ಹಿಡಿದ.
ಆಗ
ಇಂದ್ರ ತಾನು ಅಲ್ಲಿಂದ ಪಲಾಯನವ ಮಾಡಿದ.
No comments:
Post a Comment
ಗೋ-ಕುಲ Go-Kula