ಅಪಾಹಸತ್ ತಂ ಜಗದೇಕಸುನ್ದರೀ ಹರಿಪ್ರಿಯಾsಥೋ ಜಗದೇಕಮಾತರಮ್ ।
ಉವಾಚ ಶಕ್ರೋ ಜಗತಾಂ
ಜನಿತ್ರೇ ಪ್ರದರ್ಶಯಾಮೋ ವಯಮಾತ್ಮಶೈಶವಮ್ ॥ ೨೦.೧೩೨ ॥
ಇಂದ್ರ
ಓಡುತ್ತಿರಲು ಜಗದೇಕಸುಂದರಿ ಭಾಮೆ ಅವನನ್ನು ಕಾದಾಡು ಬಾ ಎಂದು ಮಾಡಿದಳು ಅಪಹಾಸ್ಯ,
ಇಂದ್ರನೆನ್ನುತ್ತಾನೆ
ಜಗದ್ಪಿತನೆದುರಿಗೆ ನಾವು ಬಾಲಚಾಪಲ್ಯ ತೋರಿಸುತ್ತಿರುವುದು ಕೇವಲ ಬಾಲಿಷ.
ಜಗಾಮ ಚಾಥೋ ಶರಣಂ
ಜನಾರ್ದ್ದನಂ ಸುರೈರ್ವೃತೋ ದೇವಪತಿಃ ಕ್ಷಮಾಪಯನ್ ।
ಶೃಙ್ಗಂ ಚ ದತ್ವಾ
ಮಣಿಪರ್ವತಸ್ಯ ಪ್ರಣಮ್ಯ ದೇವ್ಯಾ ಸಹಿತಂ ಜಗದ್ಗುರುಮ್ ॥೨೦.೧೩೩ ॥
ಸಮಸ್ತ
ದೇವತೆಗಳ ತಾತ್ಕಾಲಿಕ ಅಸುರಾವೇಶ ಕೊನೆಗೊಂಡ ನಂತರ,
ದೇವತೆಗಳೊಡಗೂಡಿ
ಕ್ಷಮೆ ಬೇಡುತ್ತಾ ಕೃಷ್ಣನಲ್ಲಿ ಶರಣು ಬಂದ ಇಂದ್ರ,
ಭಾಮೆಯೊಡಗೂಡಿದ
ಕೃಷ್ಣಗೆ ಮಣಿಶಿಖರವ ಕೊಟ್ಟು ಮಾಡಿದ ನಮಸ್ಕಾರ.
ಯಯಾಚ ಏನಂ ಪರಿರಕ್ಷಣಾಯ
ಶಚೀಪತಿಃ ಕೇಶವಮರ್ಜ್ಜುನಸ್ಯ ।
ಜಗಾದ ಕೃಷ್ಣೋsಪಿ ಧರಾತಳಸ್ಥಿತೇ ನ ಮಯ್ಯಮುಂ ಕಶ್ಚನ ಜೇಷ್ಯತೀತಿ ॥ ೨೦.೧೩೪ ॥
ಕೃಷ್ಣ
ತಾನು ಭುವಿಯಲ್ಲಿರುವವರೆಗೂ ಯಾರೂ ಅರ್ಜುನನ ಗೆಲ್ಲಲಾರರು ಎನ್ನುತ್ತಾನೆ.
ತಮರ್ಜ್ಜುನಾರ್ತ್ಥಂ
ವರಮಾಪ್ಯ ವಾಸವಃ ಪುನಃಪುನಶ್ಚಕ್ರಧರಂ ಪ್ರಣಮ್ಯ ।
ಪ್ರಸನ್ನದೃಷ್ಟ್ಯಾಹರಿಣಾsಭಿವೀಕ್ಷಿತೋ ಯಯೌ ಮಹಾಭಾಗವತಃ ಸ್ವಮಾಲಯಮ್ ॥ ೨೦.೧೩೫ ॥
ಅರ್ಜುನನಿಗಾಗಿ
ಆ ವರವ ಪಡೆದ ಮಹಾಭಾಗವತ ಇಂದ್ರ,
ಮಾಡುತ್ತಾನೆ
ಕೃಷ್ಣಪರಮಾತ್ಮನಿಗೆ ಮತ್ತೆ ಮತ್ತೆ ನಮಸ್ಕಾರ.
ಪ್ರಸನ್ನದೃಷ್ಟಿಯಿಂದ
ಕೃಷ್ಣ ಅವನ ನೋಡಿದ,
ಧನ್ಯನಾದ
ಇಂದ್ರ ತನ್ನ ಮನೆಯತ್ತ ತೆರಳಿದ.
ಕೃಷ್ಣೋsಪ್ಯನುಜ್ಞಾಪ್ಯ ಪುರನ್ದರಂ ಪುರೀಂ ನಿಜಾಂ ವ್ರಜನ್ನಭ್ಯಧಿಕಂ ವ್ಯರೋಚತ
।
ಕಿರೀಟಧಾರೀ
ವರಕುಣ್ಡಲೋಲ್ಲಸನ್ಮುಖಾಮ್ಬುಜಃ ಪೀತಪಟಃ ಸಕೌಸ್ತುಭಃ ॥೨೦.೧೩೬ ॥
ಉತ್ಕೃಷ್ಟವಾದ
ಕಿರೀಟವ ಧರಿಸಿದಾತ,
ಕುಂಡಲಶೋಭಿತ
ಮುಖಕಮಲವುಳ್ಳಾತ,
ಅಪೂರ್ವ
ಹಳದಿಬಣ್ಣದ ವಸ್ತ್ರಧಾರಿ,
ಕೌಸ್ತುಭಾಭರಣದಿ
ಶೋಭಿಸುವ ಶೌರಿ,
ಇಂದ್ರಗೆ
ಅನುಜ್ಞೆ ಕೊಟ್ಟು ಕಳುಹಿಸಿದ,
ತಾನೂ
ತನ್ನ ಪಟ್ಟಣದ ಕಡೆ ತೆರಳಿದ.
ವಿರೋಚಮಾನಸ್ಯ ಸದಾ
ಜಗದ್ಪ್ರಭೋರ್ನ್ನವೈ ವಿಶೇಷಃ ಕ್ವಚಿದಚ್ಯುತಸ್ಯ ।
ತಥಾsಪಿ ತತ್ ಸ್ಮಾರಯಿತುಂ ವಚೋ ಭವೇದಪೇಕ್ಷ್ಯ ಚಾಲ್ಪಜ್ಞಮತಿಂ ಪುರಾಣಗಮ್
॥೨೦.೧೩೭ ॥
ಭಗವಂತನದು
ಯಾವಾಗಲೂ ಅಮಿತವಾದ ಸೌಂದರ್ಯ,
ಹೊಳೆವ
ಜಗದೊಡೆಯಗೆ ವಿಶೇಷವೆಂಬುದಲ್ಲ ಆಶ್ಚರ್ಯ.
ಅವನು
ಎಲ್ಲೆಲ್ಲೂ ಸದಾಕಾಲ ಪರಮಶೋಭಿತ,
ಅಲ್ಪಜ್ಞರಿಗೆ
ಪುರಾಣಗಳು ಹೇಳಿವೆ ಅಂತಹ ಮಾತ.
ಅವನು
ಯಾವಾಗಲೋ ಒಮ್ಮೆ ಶೋಭಿಸುವುದಲ್ಲ,
ಸದಾಕಾಲ
ಶೋಭಿಸುವ ಜಗದೇಕೈಕ ಮಲ್ಲ.
No comments:
Post a Comment
ಗೋ-ಕುಲ Go-Kula