Friday 24 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 159 - 164

 ಸತ್ಯಾತ್ಯಯಾನ್ನೈವ ದೋಷೋsರ್ಜ್ಜುನಸ್ಯ ತೇಜೀಯಸಶ್ಚಿನ್ತನೀಯಃ ಕಥಞ್ಚಿತ್ ।

ಶ್ರೇಷ್ಠಾಪರಾಧಾನ್ನಾನ್ಯದೋಷಸ್ಯ ಲೇಪಸ್ತೇಜೀಯಸಾಂ ನಿರ್ಣ್ಣಯೋsಯಂ ಹಿ ಶಾಸ್ತ್ರೇ ॥೨೦.೧೫೯॥

ಮೇಲ್ನೋಟಕ್ಕೆ ಒಪ್ಪಂದ ಮೀರಿ ನಡೆಯುತ್ತಾನೆ ಅರ್ಜುನ,

ಮಾಡಬಾರದಲ್ಲಿ ಅಂತಾರೆ ದೋಷ ಬಂದಿದೆ ಎಂಬ ಚಿಂತನ.

ತೇಜಸ್ವಿ ಶ್ರೇಷ್ಠರಾದವರಿಗೆ ಸ್ವೋತ್ತಮಾಪರಾಧ ಮಹಾಪಾಪ,

ಶಾಸ್ತ್ರವೇ ಹೇಳಿದಂತೆ ಬೇರಿನ್ಯಾವ ದೋಷಗಳದಿಲ್ಲ ಲೇಪ.

 

ಅತಿಸ್ನೇಹಾಚ್ಚಾಗ್ರಜಾಭ್ಯಾಂ ತದಸ್ಯ ಕ್ಷಾನ್ತಂ ಸುತಾ ಪಾಣ್ಡ್ಯರಾಜೇನ ದತ್ತಾ ।

ಸಂವತ್ಸರಾನ್ತೇ ಫಲ್ಗುನಸ್ಯಾಭಿರೂಪಾ ಚಿತ್ರಾಙ್ಗದಾ ವೀರಸೇನೇನ ತೋಷಾತ್ ॥೨೦.೧೬೦॥

ಸ್ನೇಹಮಯ ಪ್ರೀತಿಯ ಅಣ್ಣಂದಿರಿಂದ ಅರ್ಜುನಗೆ ಸಿಕ್ಕಿತ್ತು ಕ್ಷಮಾದಾನ,

ವರ್ಷಾನಂತರ ಪಾಂಡ್ಯರಾಜ ವೀರಸೇನನಿಂದ ಚಿತ್ರಾಂಗದೆಯ ಪ್ರದಾನ.

 

[ವೀರಸೇನ ಮತ್ತು ಚಿತ್ರಾಙ್ಗದೆಯ ಮೂಲವನ್ನು ಪರಿಚಯಿಸುತ್ತಾರೆ:]

ಸ ವೀರಸೇನಸ್ತ್ವಷ್ಟುರಂಶೋ ಯಮಸ್ಯಾಪ್ಯಾವೇಶಯುಕ್ ಸಾ ಚ ಕನ್ಯಾ ಶಚೀ ಹಿ

ತಾರಾದೇಹೇ ಸೂರ್ಯ್ಯಜಸ್ಯಾಙ್ಗಸಙ್ಗಾತ್ ಸ್ವರ್ಗ್ಗಂ ನಾಗಾದನ್ತರಿಕ್ಷಾದಿಹಾsಸೀತ್ ॥೨೦.೧೬೧ ॥

ಪಾಂಡ್ಯರಾಜನಾದ ವೀರಸೇನ ತ್ವಷ್ಟೃ ದೇವತಾಂಶ,

ಹೇಳುತ್ತಾರೆ ಹೊಂದಿದ್ದನಂತೆ ಯಮನದೂ ಆವೇಶ.

ಚಿತ್ರಾಂಗದೆ ಶಚೀದೇವಿ ರಾಮಾಯಣದಲ್ಲಿ ತಾರೆಯಾಗಿ ಸುಗ್ರೀವ ಸಂಗ ಮಾಡಿದವಳು,

ಸ್ವರ್ಗಕ್ಕೆ ಹೋಗದೇ ಅಂತರಿಕ್ಷದಿಂದ ಬಂದು ಪಾಂಡ್ಯದೇಶದಲ್ಲಿ ಹುಟ್ಟು ಪಡೆದಿದ್ದಳು.

 

ತೇನೈವ ಹೇತೋರ್ನ್ನಾತಿಸಾಮೀಪ್ಯಮಾಸೀತ್ ತಸ್ಯಾಃ ಪಾರ್ತ್ಥೇ ಪುತ್ರಿಕಾಪುತ್ರಧರ್ಮ್ಮಾ ।

ತಸ್ಯಾಂ ಜಾತೋ ಬಭ್ರುವಾಹೋsರ್ಜ್ಜುನೇನ ಪೂರ್ವಂ ಜಯನ್ತಃ ಕಾಮದೇವಾಂಶಯುಕ್ತಃ ॥೨೦.೧೬೨॥

ಹಿಂದವಳು ಮಾಡಿದ್ದರಿಂದ ಬೇರೊಬ್ಬರ ಸಂಗ,

ಈ ಜನ್ಮದಿ ಹೆಚ್ಚು ಸಿಗಲಿಲ್ಲ ಅರ್ಜುನನ ಸಂಸರ್ಗ.

ಅರ್ಜುನನಿಂದ ಪುತ್ರಿಕಾಪುತ್ರ ಧರ್ಮದಂತೆ,

ಬಭ್ರುವಾಹನನ ಮಗನಾಗಿ ಪಡೆದಳಂತೆ.

ಬಭ್ರುವಾಹನ ಪೂರ್ವದಲ್ಲಾಗಿದ್ದ ಜಯಂತ,

ಕಾಮದೇವನ ಅಂಶದಿಂದ ಕೂಡಿದವನಾತ.

 

ಪುತ್ರಂ ವೀರಂ ಜನಯಿತ್ವಾsರ್ಜ್ಜುನೋsತೋ ಗಚ್ಛನ್ ಪ್ರಭಾಸಂ ಶಾಪತೋ ಗ್ರಾಹದೇಹಾಃ ।

ಅಮೂಮುಚಚ್ಚಾಪ್ಸರಸಃ ಸ ಪಞ್ಚ ತಾಭಿರ್ಗ್ಗೃಹೀತಃ ಪ್ರವಿಕೃಷ್ಯ ತೀರಮ್ ॥೨೦.೧೬೩॥

ಹೀಗೆ ವೀರಪುತ್ರನ ಹುಟ್ಟಿಸಿದ ಅರ್ಜುನ ಹೊರಟ ಪ್ರಭಾಸದತ್ತ,

ದಾರಿಯಲ್ಲಿ ಮುನಿಯಿಂದ ಐದಪ್ಸರೆಯರಾಗಿದ್ದರು ಶಾಪಗ್ರಸ್ತ.

ಮೊಸಳೆಗಳಾಗಿದ್ದವರು ಅರ್ಜುನನ ಹಿಡಿದಿದ್ದರು ನೀರಿನಲ್ಲಿ,

ಅವರನ್ನೆಲ್ಲಾ ದಡಕ್ಕೆಳೆದು ಶಾಪಮುಕ್ತರನ್ನಾಗಿ ಮಾಡಿದನಲ್ಲಿ.

 

ಏವಂ ಹಿ ತಾಸಾಂ ಶಾಪಮೋಕ್ಷಃ ಪ್ರದತ್ತೋ ಯದಾsಖಿಲಾ ವೋ ಯುಗಪತ್ ಸಮ್ಪ್ರಕರ್ಷೇತ್

ಏಕಸ್ತದಾ ನಿಜರೂಪಾಪ್ತಿರೇವೇತ್ಯಲಂ ತುಷ್ಟೇನ ಬ್ರಾಹ್ಮಣೇನಾsನತಾನಾಮ್ ॥೨೦.೧೬೪॥

ಆ ಐದಪ್ಸರೆಯರು ಹಿಂದೆ ಒಬ್ಬ ಮುನಿಗೆ ಮಾಡಿದ್ದರು ಅಪಹಾಸ್ಯ,

ಆ ಮುನಿ ಅವರಿಗೆ ಹಾಕಿದ್ದ ಮೊಸಳೆಗಳಾಗಿ ಎಂಬ ಶಾಪದ ಪಾಶ.

ಅಪ್ಸರೆಯರು ತಪ್ಪಿನರಿವಾಗಿ ನಮಸ್ಕರಿಸುತ್ತಾ ಕೇಳಿದ್ದರು ಪರಿಹಾರ,

ಮುನಿ ಹೇಳಿದ್ದ ನಿಮ್ಮ ವಿಮೋಚನೆ ನಿಮ್ಮನ್ನೆಳೆದು ಹಾಕುವವನ ದ್ವಾರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula