Friday, 24 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 88 - 97

ನಿತ್ಯೈವ ಯಾ ಪ್ರಕೃತಿಃ ಸ್ವೇಚ್ಛಯೈವ ಜಗಚ್ಛಿಕ್ಷಾರ್ತ್ಥಂ ದ್ವಾದಶೀಂ ಭೀಮಸಞ್ಜ್ಞಾಮ್ ।

ಉಪೋಷ್ಯ ಬಭ್ರೇ ಕೋಟಿಧಾರಾಜಲಸ್ಯ ವಿಷ್ಣೋಃ ಪ್ರೀತ್ಯರ್ತ್ಥಂ ಸೈವ ಹಿ ಸತ್ಯಭಾಮಾ ॥೨೦.೮೮॥

ಸತ್ಯಭಾಮೆ ನಿತ್ಯಳಾಗಿರುವ ಮಹಾಲಕ್ಷ್ಮಿಯವಳು  ನಾಶರಹಿತ,

ಲೋಕಶಿಕ್ಷಣ ಹರಿಪ್ರಿತಿಗಾಗಿ ಕೈಗೊಂಡಳು ಭೀಮದ್ವಾದಶಿ ವ್ರತ.

ಮಾಡಿದಳು ಏಕಾದಶಿ ಉಪವಾಸದೊಂದಿಗೆ ಕೋಟಿಧಾರಾ ಜಲವ್ರತ.

 

ತಯಾ ಯುಕ್ತೋ ಗರುಡಸ್ಕನ್ಧಸಂಸ್ಥೋ ದೂರಾನುಯಾತೋ ವಜ್ರಭೃತಾsಪ್ಯನುಜ್ಞಾಮ್ ।

ದತ್ವಾsಮುಷ್ಮೈ ಪ್ರಯಯೌ ವಾಯುಜುಷ್ಟಾಮಾಶಾಂ ಕೃಷ್ಣೋ ಭೌಮವಧೇ ಧೃತಾತ್ಮಾ ॥೨೦.೮೯॥

ಸತ್ಯಭಾಮೆ ಸಮೇತ ಶ್ರೀಕೃಷ್ಣ ಗರುಡನ ಹೆಗಲೇರಿದ,

ಅನುಸರಿಸಿದ ವಜ್ರಧಾರಿಗೆ ತನ್ನ ಲೋಕ್ಕಕ್ಕೆ ಕಳುಹಿಸಿದ.

ನರಕನ ವಧೆಯ ಸಂಕಲ್ಪದಿ ವಾಯವ್ಯಕ್ಕೆ

ತಾ ತೆರಳಿದ.

 

ಭೌಮೋ ಹ್ಯಾಸೀದ್ ಬ್ರಹ್ಮವರಾದವದ್ಧ್ಯೋ ನ ಶಸ್ತ್ರಭೃಜ್ಜೀಯಸ ಇತ್ಯಮುಷ್ಮೈ ।

ದತ್ತೋ ವರೋ ಬ್ರಹ್ಮಣಾ ತದ್ವದೇವ ತಸ್ಯಾಮಾತ್ಯಾನಾಂ ತದ್ವದವದ್ಧ್ಯತಾ ಚ ॥೨೦.೯೦॥

ನರಕಾಸುರನಿಗಿತ್ತು ಅವಧ್ಯನಾಗಿರುವ ಬ್ರಹ್ಮ ವರಬಲ,

ಶಸ್ತ್ರಧಾರಿಯಾಗಿ ನಿಂತವಗೆ ಎದುರಾಳಿಗಳಿಂದ ಸೋಲಿಲ್ಲ.

ಅವನ ಮಂತ್ರಿಗಳಿಗೆ ಕೂಡಾ ಇತ್ತು ಅವಧ್ಯತ್ವದ ವರಬಲ.

 

ಭೌಮೇನ ಜಯ್ಯತ್ವಮಪಿ ಹ್ಯಮೀಷಾಂ ದತ್ತಂ ಭೌಮಾಯ ಬ್ರಹ್ಮಣಾ ಕ್ರೋಡರೂಪಾತ್ ।

ವಿಷ್ಣೋರ್ಜ್ಜಾತಾಯಾಸ್ಯ ದುರ್ಗ್ಗಂ ಚ ದತ್ತಂ ಪ್ರಾಗ್ಜ್ಯೋತಿಷಂ ನಾಮ ಪುರಂ ಸಮಸ್ತೈಃ ॥೨೦.೯೧ ॥

ಅವನ ಮಂತ್ರಿಗಳಿಗಿದ್ದರೂ ಇತರರಿಂದ ಸೋಲದ ಸಾಯದ ವರ,

ಅವನ ದಾಸರಾಗಿದ್ದರು-ನರಕ ಮಾಡಬಲ್ಲನಾಗಿದ್ದ

ಅವರ ಸಂಹಾರ.

ವರಾಹರೂಪಿಯಾದ ವಿಷ್ಣುವಿನಿಂದ ಹುಟ್ಟಿದ್ದ ಈ ನರಕಾಸುರ,

ಕೊಡಲ್ಪಟ್ಟಿತ್ತವಗೆ ಅನ್ಯರಿಗೆ ದುರ್ಗಮ, ಸಮೃದ್ಧ ಪ್ರಾಗ್ಜ್ಯೋತಿಷಪುರ.

 

ಆಸೀದ್ ಬಾಹ್ಯೇ ಗಿರಿದುರ್ಗ್ಗಂ ತದನ್ತಃ ಪಾನೀಯದುರ್ಗ್ಗಂ ಮೌರವಂ ಪಾಶದುರ್ಗ್ಗಮ್ ।

ತಸ್ಯಾಪ್ಯನ್ತಃ ಕ್ಷುರಧಾರೋಪಮಂ ತತ್ಪಾಶಾಶ್ಚ ತೇ ಷಟ್ಸಹಸ್ರಾಶ್ಚ ಘೋರಾಃ  ॥೨೦.೯೨॥

ಆ ಪಟ್ಟಣದ ಹೊರಭಾಗದಲ್ಲಿ ಬೆಟ್ಟಗಳ ಕೋಟೆ,

ಅದರ ಒಳಭಾಗದಲ್ಲಿ (ಜಲದುರ್ಗ )ನೀರಕೋಟೆ.

ತದನಂತರ ಮುರ ನಿರ್ಮಿತವಾದ ಪಾಶಕೋಟೆ,

ಅತಿ ಹರಿತವಾದ ಆರು ಸಾವಿರ ಅಲಗುಕೋಟೆ.

 

ಅಭೇದ್ಯತ್ವಮರಿಭಿರತಾರ್ಯ್ಯತಾ ಚ ದತ್ತಾ ದುರ್ಗ್ಗಾಣಾಂ ಬ್ರಹ್ಮಣಾssರಾಧಿತೇನ ।

ತಸ್ಯಾಮಾತ್ಯಾಃ ಪೀಠಮುರೌ ನಿಸುಮ್ಭಹಯಗ್ರೀವೌ ಪಞ್ಚಜನಶ್ಚ ಶೂರಾಃ ॥೨೦.೯೩॥

ನರಕಾಸುರ ಬ್ರಹ್ಮದೇವನ ಕುರಿತು ಮಾಡಿದ ತಪಸ್ಸಿಗೆ,

ದಾಟಲಸಾಧ್ಯವಾದ ಆ ಅಭೇದ್ಯಕೋಟೆ ಬ್ರಹ್ಮಕೊಡುಗೆ.

ಪೀಠ, ಮುರ, ನಿಸುಂಭ, ಹಯಗ್ರೀವ ಮತ್ತು ಪಂಚಜನ,

ನರಕಾಸುರನ ಮಂತ್ರಿಗಳಾಗಿದ್ದವರು ಇವರು ಐದುಜನ.

 

ಸಙ್ಕಲ್ಪ್ಯ ತಾನ್ ಲೋಕಪಾಲಾನಹಂ ಚ ಬ್ರಹ್ಮೇತ್ಯದ್ಧಾ ಭಾಷಮಾಣಃ ಸ ಆಸ್ತೇ ।

ಹನ್ತುಂ ಕೃಷ್ಣೋ ನರಕಂ ತತ್ರ ಗತ್ವಾ ಗಿರಿದುರ್ಗ್ಗಂ ಗದಯಾ ನಿರ್ಬಿಭೇದ ॥೨೦.೯೪॥

ಆ ಐದುಜನರನ್ನು ನರಕಾಸುರ ಲೋಕಪಾಲಕರು ಎನ್ನುತ್ತಿದ್ದ,

ತನ್ನನ್ನು ತಾನೇ ಬ್ರಹ್ಮನೆಂದು ದರ್ಪದಿಂದ ಹೇಳಿಕೊಳ್ಳುತ್ತಿದ್ದ.

ಇಂತಹ ನರಕನ ಕೊಲ್ಲಲೆಂದೇ ಕೃಷ್ಣ ಅಲ್ಲಿಗೆ ಬಂದ,

ತನ್ನ ಗದೆಯಿಂದ ಬೆಟ್ಟದ ಕೋಟೆಯ ಒಡೆದು ಹಾಕಿದ.

 

ವಾಯವ್ಯಾಸ್ತ್ರೇಣೋದಕಂ ಶೋಷಯಿತ್ವಾ ಚಕರ್ತ್ತ ಖಡ್ಗೇನ ಮುರಸ್ಯ ಪಾಶಾನ್ ।

ಅಥಾಭಿಪೇತುರ್ಮ್ಮುರಪೀಠೌ ನಿಸುಮ್ಭಹಯಗ್ರೀವೌ ಪಞ್ಚಜನಶ್ಚ ದೈತ್ಯಾಃ ॥೨೦.೯೫ ॥

ಜಲಕೋಟೆಯ ಒಣಗಿಸಿತು ಕೃಷ್ಣನ ವಾಯವ್ಯಾಸ್ತ್ರ,

ಮುರನ ಪಾಶಕೋಟೆಯ ಕತ್ತರಿಸಿತು ಖಡ್ಗವೆಂಬ ಅಸ್ತ್ರ.

ಮುರ, ಪೀಠ,ನಿಸುಂಭ, ಹಯಗ್ರೀವ ಮತ್ತು ಪಂಚಜನ,

ಕೃಷ್ಣನ ಮೇಲೆ ಯುದ್ಧಕೆ ಬಂದರು ದೈತ್ಯರಾದ ಆ ಐದು ಜನ.

 

ತಾಞ್ಛೈಲಶಸ್ತ್ರಾಸ್ತ್ರಶಿಲಾಭಿವರ್ಷಿಣಶ್ಚಕ್ರೇ ವ್ಯಸೂಂಶ್ಚಕ್ರನಿಕೃತ್ತಕನ್ಧರಾನ್ ।

ತೇಷಾಂ ಸುತಾಃ ಸಪ್ತಸಪ್ತೋರುವೀರ್ಯ್ಯಾ ವರಾದವದ್ಧ್ಯಾ ಗಿರಿಶಸ್ಯಾಭಿಪೇತುಃ ॥೨೦.೯೬ ॥

ಬೆಟ್ಟ ಬಂಡೆ ಶಸ್ತ್ರಾಸ್ತ್ರಗಳ ಸುರಿಸುತ್ತಾ ಬರುತ್ತಿದ್ದವರ,

ಕತ್ತರಿಸಿ ಪ್ರಾಣ ತೆಗೆಯಿತವರೆಲ್ಲರ ಕೃಷ್ಣ ಬಿಟ್ಟಂಥ ಚಕ್ರ.

ಆ ಐದು ಜನರ ಮಕ್ಕಳಾಗಿದ್ದವರು ಏಳೇಳು ಜನ,

ರುದ್ರವರದಿ ಅವಧ್ಯರಾದವರಿಂದ ಯುದ್ಧಕೆ ಆಗಮನ.

 

ತಾನಸ್ತ್ರಶಸ್ತ್ರಾಭಿಮುಚಃ ಶರೋತ್ತಮೈಃ ಸಮರ್ಪ್ಪಯಾಮಾಸ ಸ ಮೃತ್ಯವೇsಚ್ಯುತಃ ।

ಹತ್ವಾ ಪಞ್ಚತ್ರಿಂಶತೋ ಮನ್ತ್ರಿಪುತ್ರಾನ್ ಜಗಾಮ ಭೌಮಸ್ಯ ಸಕಾಶಮಾಶು ॥೨೦.೯೭॥

ಅಸ್ತ್ರ ಶಸ್ತ್ರ ಎಸೆಯುತ್ತ ಬರುತ್ತಿದ್ದ ಮೂವತ್ತೈದು ಮಂತ್ರಿ ಮಕ್ಕಳನ್ನ,

ಕೊಂದು ಹಾಕಿದ ಕೃಷ್ಣ ಬಿಡುತ್ತಾ ತನ್ನ ಶ್ರೇಷ್ಠವಾದ  ಬಾಣಗಳನ್ನ.

ಅವರನ್ನೆಲ್ಲ ವಧಿಸಿ ನರಕಾಸುರನ ಬಳಿ ವೇಗದಿ ಸಾಗಿದ ಕೃಷ್ಣ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula