Saturday 25 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 174 - 177

 ಸಂಯಾಚಿತಃ ಫಲ್ಗುನೇನಾsಹ ವಾಕ್ಯಂ ಯದ್ ವಾಸುದೇವಸ್ತನ್ನ ಜಾನಾತಿ ಕಶ್ಚಿತ್ ।

ಋತೇ ಪಿತ್ರೋರ್ವಿಪೃಥೋಃ ಸಾತ್ಯಕೇರ್ವಾಸುಭದ್ರಾಂ ತೇ ಪ್ರದದಾನೀತಿ ಸತ್ಯಮ್ ॥೨೦.೧೭೪॥

ಬೇಡಲ್ಪಟ್ಟ ಅರ್ಜುನನಿಗೆ ವಾಸುದೇವನು ಕೊಟ್ಟ ಮಾತು,

ಖಂಡಿತ ಸುಭದ್ರೆ ನಿನಗೆ ಕೊಡಲ್ಪಟ್ಟಾಗುತ್ತಾಳೆ ನಿನ್ನ ಸ್ವತ್ತು.

ಈ ವಿಷಯ ತಿಳಿದದ್ದು ವಸುದೇವ-ದೇವಕಿ, ವಿಪೃಥ ಮತ್ತು ಸಾತ್ಯಕಿಯರಿಗೆ ಮಾತ್ರ,

ಮೇಲಿನವರ ಬಿಟ್ಟು ಪರಸ್ಪರ ಮಾತಾಡಿಕೊಂಡ ಕೃಷ್ಣಾರ್ಜುನರದಷ್ಟೇ ಅದರಲ್ಲಿ ಪಾತ್ರ.

 

ಅಸ್ತ್ರೇ ಶಸ್ತ್ರೇ ತತ್ವವಿದ್ಯಾಸು ಚೈವ ಶಿಷ್ಯಃ ಶೈನೇಯೋ ವಾಸುದೇವೇನ್ದ್ರಸೂನ್ವೋಃ ।

ತಸ್ಮಾದಸ್ಮೈ ಕಥಯಾಮಾಸ ಕೃಷ್ಣಃ ಸ್ವಶಿಷ್ಯತ್ವಾದ್ ವಿಪೃಥೋಶ್ಚಾಪಿ ಸರ್ವಮ್ ॥೨೦.೧೭೫॥

ಅಸ್ತ್ರ,ಶಸ್ತ್ರ,ತತ್ವಶಾಸ್ತ್ರದಲ್ಲಿ ಸಾತ್ಯಕಿ ಕೃಷ್ಣಾರ್ಜುನರ ಶಿಷ್ಯ,

ಆ ಕಾರಣದಿಂದ ಕೃಷ್ಣ ಅವನಿಗೆ ಸುದ್ದಿ ತಿಳಿಸಿದ್ದು ವಿಶೇಷ.

ವಿಪ್ರಥುವೂ ಕೂಡಾ ಕೃಷ್ಣನ ಶಿಷ್ಯನಾಗಿದ್ದ,

ಹಾಗಾಗಿ ಅವನಿಗೂ ವಿಷಯ ತಿಳಿಸಿದ್ದ.

 

ಅನ್ಯೇ ಸರ್ವೇ ವಾಸುದೇವಸ್ಯ ಪಾರ್ತ್ಥಾನ್ ಪ್ರಿಯಾನ್ ನಿತ್ಯಂ ಜಾನಮಾನಾ ಅಪಿ ಸ್ಮ ।

ರಾಮೇಣಾsದಿಷ್ಟಾ ಉದ್ಧವೋsಥಾsಹುಕಾದ್ಯಾ ಹಾರ್ದ್ದಿಕ್ಯಾದ್ಯಾ ನೈವ ದಿತ್ಸನ್ತಿ ಜಿಷ್ಣೋಃ ॥೨೦.೧೭೬॥

ಉದ್ಧವ, ಆಹುಕ, ಕೃತವರ್ಮ ಮೊದಲಾದವರು,

ತಿಳಿದಿದ್ದರು ಕೃಷ್ಣಗೆ ಪಾಂಡವರು ಬಲು ಪ್ರಿಯರು.

ಅವರೆಲ್ಲರ ಮೇಲಿತ್ತು ಬಲರಾಮನ ಆದೇಶದ ಪ್ರಭಾವ,

ಸುಭದ್ರೆಯ ಅರ್ಜುನಗೆ ಕೊಡಬಾರದೆಂಬುದೇ ಅವರ ಭಾವ.

 

[ಕೃಷ್ಣ ಏಕೆ ಈ ಲೀಲೆಯನ್ನು ತೋರಿದ ಎನ್ನುವುದನ್ನು ವಿವರಿಸುತ್ತಾರೆ:]

ದುರ್ಯ್ಯೋಧನೇ ದಾತುಮಿಚ್ಛನ್ತಿ ಸರ್ವೇ ರಾಮಪ್ರಿಯಾರ್ತ್ಥಂ ಜಾನಮಾನಾ ಹರೇಸ್ತತ್ ।

ಅಪ್ಯಪ್ರಿಯಂ ರಾಕ್ಷಸಾವೇಶಯುಕ್ತಾಸ್ತಸ್ಮಾತ್ ಸರ್ವಾನ್ ವಞ್ಚಯಾಮಾಸ ಕೃಷ್ಣಃ ॥೨೦.೧೭೭॥

ಎಲ್ಲರ ಮನದಲ್ಲಿದ್ದದ್ದು ಬಲರಾಮನ ಸಂತೋಷ,

ಶ್ರೀಕೃಷ್ಣಪ್ರಿಯರಿಗೂ ಆವರಿಸಿತ್ತು ಅಸುರಾವೇಶ.

ರಾಕ್ಷಸನಾದ ದುರ್ಯೋಧನನಿಗೆ ಸುಭದ್ರೆಯ ಕೊಡಲೆಲ್ಲರ ಬಯಕೆ,

ಆ ಕಾರಣಕ್ಕಾಗಿಯೇ ಶ್ರೀಕೃಷ್ಣ ಹೆಣೆದ ವಂಚನೆಯ ಜಾಲದ ಕುಣಿಕೆ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula