[ಯಾರು ಈ ಸುಭದ್ರೆ? ಆ ಕುರಿತು ವಿವರಿಸುತ್ತಾರೆ: ]
ಜಾತಾ ದೇವಕ್ಯಾಂ ಸಾ
ಸುಭದ್ರೇತಿ ನಾಮ್ನಾ ಭದ್ರಾ ರೂಪೇಣಾನಕದುನ್ದುಭೇಸ್ತಾಮ್ ।
ಕೃತ್ವಾ ಪುತ್ರೀಂ
ರೋಹಿಣೀ ಸ್ವಾಮರಕ್ಷತ್ ಪೂರ್ವಂ ತು ಯಾsಸೀತ್ ತ್ರಿಜಟೈವ ನಾಮ್ನಾ ॥೨೦.೩೭॥
ಹಿತವಾದಂಥ ರೂಪವುಳ್ಳ ಸುಭದ್ರೆಯದು ಆನಕದುಂದುಭಿ ದೇವಕಿಯಲ್ಲಿ ಜನನ,
ಇನ್ನೊಬ್ಬ ಹೆಂಡತಿ ರೋಹಿಣಿ ಸಾಕಿದಳವಳನ್ನು ಮಾಡಿಕೊಂಡು ತನ್ನ
ಮಗಳನ್ನ.
ಹೇಳುವರಿಲ್ಲಿ-ರಾಮಾಯಣದ ತ್ರಿಜಟೆಯೇ ಸುಭದ್ರೆಯಾಗಿ ಬಂದಂಥ ವಿಷಯವನ್ನ.
(ಆನಕದುಂದುಭಿ
ವಸುದೇವನ ಇನ್ನೊಂದು ಹೆಸರು)
ಸೀತಾಯಾಃ ಪ್ರಾಙ್
ನಿತ್ಯಶುಶ್ರೂಷಣಾತ್ ಸಾ ಬಭೂವ ವಿಷ್ಣೋರ್ಭಗಿನೀ ಪ್ರಿಯಾ ಚ ।
ಉಮಾವೇಶಾದ್
ರೂಪಗುಣೋಪಪನ್ನಾ ಪದ್ಮೇಕ್ಷಣಾ ಚಮ್ಪಕದಾಮಗೌರೀ ॥೨೦.೩೮॥
ಸೀತೆಯ ನಿತ್ಯಸೇವೆ ಮಾಡಿದಂಥ ಆ ಪುಣ್ಯ,
ತಂದಿತ್ತವಳಿಗೆ ನಾರಾಯಣನ ತಂಗಿ ಜನ್ಮವನ್ನ.
ಪಾರ್ವತೀ ಆವೇಶರೂಪ ಹಾಗೂ ಗುಣವಂತಳು,
ತಾವರೆಕಣ್ಗಳಿಂದ ಸಂಪಿಗೆ ವರ್ಣದವಳಾಗಿದ್ದಳು.
ಏತತ್ ಕೃತ್ವಾ
ಧೃತರಾಷ್ಟ್ರಾತ್ಮಜಃ ಸ ಯಯೌ ಕುರೂನ್ ನಿವಸತ್ಯತ್ರ ರಾಮೇ ।
ಕೃಷ್ಣೋsಕ್ರೂರಂ ವಿವಸನ್ತಂ ಭಯೇನ ಸಹಾರ್ದ್ದಿಕ್ಯಂ ಚಾsನಯಿತ್ವಾ ಜಗಾದ ॥೨೦.೩೯॥
ಪಡೆದು ಗುರು ಬಲರಾಮನಿಂದ ಗದಾಯುದ್ಧ ಶಿಕ್ಷಣ,
ಮತ್ತು ತಂಗಿ ಸುಭದ್ರೆಯ ತನಗೇ ಕೊಡುವ ವಾಗ್ದಾನ,
ತನ್ನ ರಾಜ್ಯಕ್ಕೆ ಹಿಂತಿರುಗಿ ಹೋದನವ ದುರ್ಯೋಧನ.
ಹಿಂದೆ ಬಲರಾಮ ಕೃಷ್ಣರು ಶತಧನ್ವನ ಬೆನ್ನಟ್ಟಿದಾಗ,
ಕೃತವರ್ಮ ಅಕ್ರೂರರು ದೇಶಾಂತರ ಓಡಿಹೋಗಿದ್ದರಾಗ.
ಐದು ವರ್ಷ ಕಾದಿದ್ದ ಕೃಷ್ಣ ಅವರನ್ನು ಕರೆಸಿಕೊಂಡನೀಗ.
ಆನೀಯ ರಾಮಂ ಚ
ಸಮಸ್ತಸಾತ್ತ್ವತಾಂ ಯದಾsವಾದೀತ್
ಕೇಶವಃ ಸನ್ನಿದಾನೇ ।
ಮಣಿಸ್ತ್ವಯ್ಯಾಸ್ತೇ
ದರ್ಶಯೇತ್ಯೇವ ಭೀತಸ್ತದಾsಕ್ರೂರೋsದರ್ಶಯದ್ ರತ್ನಮಸ್ಮೈ ॥೨೦.೪೦॥
ಕೇಶವ, ಬಲರಾಮನನ್ನೂ
ವಿದೇಹದೇಶದಿಂದ ಕರೆಸಿಕೊಂಡ,
ಎಲ್ಲರೆದುರು ಅಕ್ರೂರಾ,ನಿನ್ನಲ್ಲಿರುವ ಮಣಿಯ ತೋರಿಸೆಂದ.
ಕೃಷ್ಣನ ಮಾತಿಗೆ ಹೆದರಿ ಅಕ್ರೂರ ತನ್ನಲ್ಲಿದ್ದ ಮಣಿ ತೋರಿಸಿದ.
ಅವ್ಯಾಜತಾಮಾತ್ಮನೋ
ದರ್ಶಯಿತ್ವಾ ಹಲಾಯುಧೇ ಕೇಶವಸ್ತಸ್ಯ ಜಾನನ್ ।
ರತ್ನಾಕಾಙ್ಕ್ಷಾಮುಗ್ರಸೇನಸ್ಯ
ಚೈವ ಮಾತುಶ್ಚ ಸಾಮ್ಬಸ್ಯ ಪುನರ್ಬಭಾಷೇ ॥೨೦.೪೧॥
ಹೀಗೆ ಅಣ್ಣ ಬಲರಾಮನಲ್ಲಿ ತಾನು ಕಪಟಿಯಲ್ಲ ಎಂದು ತೋರಿಸಿಕೊಟ್ಟ,
ಬಲರಾಮ, ಉಗ್ರಸೇನ,ಜಾಂಬವತಿಯ ಮಣಿಯಾಸೆ ಅರಿತು ಹೇಳಿದ ಮಾತ.
ಆಸ್ತಾಮಕ್ರೂರೇ
ಮಣಿರನ್ಯೈರಧಾರ್ಯ್ಯಃ ಸದಾ ಯಜ್ಞಾದ್ ದಾನಪತೇಃ ಸ
ಧಾರ್ಯ್ಯಃ ।
ನ ಸತ್ಯಾ
ಕೃಷ್ಣಾವಾಞ್ಛಿತಂ ಕಿಞ್ಚಿದಿಚ್ಛೇತ್ ತಥಾsಪಿ ತಸ್ಯಾ ಯೋಗ್ಯ ಇತ್ಯಾಹ ಕೃಷ್ಣಃ ॥೨೦.೪೨॥
ಬೇರೊಬ್ಬರು ಧರಿಸಲಾಗದ ಸ್ಯಮಂತಕಕ್ಕೆ ಅಕ್ರೂರನೇ ಅರ್ಹ,
ಅನುಕೂಲ ಅವನಿಗೆ -ನಡೆಸುವುದರಿಂದ ಸದಾ ಯಜ್ಞ ಕಾರ್ಯ.
ಸತ್ಯಭಾಮೆಗೆ ಬೇಡ ಕೃಷ್ಣ ಬಯಸದ ಭಾಗ್ಯ,
ಹಾಗಿದ್ದರೂ ಆ ಮಣಿ ಸತ್ಯಭಾಮೆಗೆ ಯೋಗ್ಯ.
(ಸರ್ವಜ್ಞ
ಭಗವಂತನಿಂದ ಇಲ್ಲೊಂದು ನಾಟಕದಂಥ ಆಟ,
ಮಣಿ ಹೊಂದಲಾರು ಅರ್ಹ ಎಂದು ತೋರಿಸುವ ನೋಟ.
ಅದನ್ನ ಹೊಂದುವವ ಆಗಿರಬೇಕು ಶುದ್ಧ ಆಚಾರದ ಬ್ರಹ್ಮಚಾರಿ,
ನಾನೋ ಹದಿನಾರುಸಾವಿರ ಹೆಂಡಿರ ಹೊಂದುವ ಅನಂತ ಸಂಸಾರಿ.
ಇನ್ನು ಬಲರಾಮ ಮದಿರಾಪಾನಿ -ಅವನಾಗುವ ಅನರ್ಹ,
ನಾನೊಲ್ಲೆನೆಂದಮೇಲೆ ನನ್ನ ಹೆಂಡಂದಿರಿಗೂ ಬೇಡದ ಕಾರ್ಯ.
ಅಕ್ರೂರಾ, ನಮ್ಮೆಲ್ಲರ
ಇಚ್ಛೆಯಂತೆ ಅದಕ್ಕೆ ನೀನೇ ಸರಿ,
ನಿನ್ನದು ದೀಕ್ಷೆಯಲ್ಲಿದ್ದು ಯಜ್ಞ ಯಾಗ ನಡೆಸುವ ದಾರಿ.)
ಲಬ್ಧ್ವಾ ರತ್ನಂ
ದಾನಪತಿಃ ಸದೈವ ಸನ್ದೀಕ್ಷಿತೋsಭೂದ್
ಯಜ್ಞಕರ್ಮ್ಮಣ್ಯತನ್ದ್ರಃ ।
ಪ್ರದರ್ಶ್ಯ ಕೃಷ್ಣೋ
ಹಲಿನೇ ರತ್ನಮೇತಚ್ಛಕ್ರಪ್ರಸ್ಥಂ ಪಾಣ್ಡವಸ್ನೇಹತೋsಗಾತ್ ॥೨೦.೪೩॥
ದಾನಪತಿ ಅಕ್ರೂರ ತಾನು ಸ್ಯಮಂತಕಮಣಿಯನ್ನು ಹೊಂದಿ,
ಆದ ಸದಾ ಯಜ್ಞಕಾರ್ಯದಲ್ಲಿ ಉದಾಸೀನವಿರದ ಬಂಧಿ.
ಹೀಗೆ ಕೃಷ್ಣ ಬಲರಾಮನಿಗೆ ಮಣಿಯ ತೋರಿಸಿ,
ತನ್ನ ಮೇಲೆ ತೂಗುತ್ತಿದ್ದ ಅಪವಾದ ನಿವಾರಿಸಿ,
No comments:
Post a Comment
ಗೋ-ಕುಲ Go-Kula