Sunday 13 December 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 48 - 51

 ಪಿತೃಷ್ವಸುರ್ಮ್ಮಿತ್ರವಿನ್ದಾ ಸುತಾ ಚ ಕೃಷ್ಣೇ ಮಾಲಾಮಾಸಜದ್ ರಾಜಮದ್ಧ್ಯೇ ।

ವಿನ್ದಾನುವಿನ್ದೌ ಭ್ರಾತರಾವೇವ ತಸ್ಯಾ ನ್ಯಷೇಧತಾಂ ಧಾರ್ತ್ತರಾಷ್ಟ್ರಾರ್ತ್ಥಮುಗ್ರೌ ॥೨೦.೪೮॥

ಮಿತ್ರವಿಂದೆ ಶ್ರೀಕೃಷ್ಣನ ಸೋದರತ್ತೆಯ ಮಗಳು,

ಎಲ್ಲಾ ರಾಜರ ಮಧ್ಯೆ ಕೃಷ್ಣಗೆ ಮಾಲೆ ಹಾಕಿದಳು.

ಅವಳ ಅಣ್ಣಂದಿರಾದ ವಿಂದ ಅನುವಿಂದರು ಕ್ರೂರರು,

ದುರ್ಯೋಧನನಿಗಾಗಿ ಅವಳನ್ನವರು ನಿಗ್ರಹ ಮಾಡಿದ್ದರು.

 

ಜಿತ್ವಾssವನ್ತ್ಯೌ ತೌ ನೃಪತೀಂಶ್ಚೈವ ಸರ್ವಾನಾದಾಯ ತಾಂ ಪ್ರಯಯೌ ವಾಸುದೇವಃ ।

ಪಿತೃಷ್ವಸುಸ್ತನಯಾಂ ಚ ದ್ವಿತೀಯಾಂ ಭದ್ರಾಂ ದತ್ತಾಮಗ್ರಹೀದ್ ಭ್ರಾತೃಭಿಃ ಸಃ ॥೨೦.೪೯ ॥

ಶ್ರೀಕೃಷ್ಣ ಆವಂತಿ ರಾಜಕುಮಾರರಾದ ವಿಂದಾನುವಿಂದರ ಗೆದ್ದ,

ಜೊತೆಗೆ ಉಳಿದ ಬೇರೆ ಬೇರೆ ರಾಜಾರೆಲ್ಲರನ್ನೂ ಕೃಷ್ಣ ಗೆದ್ದ.

ಮಿತ್ರವಿಂದೆಯೊಂದಿಗೆ ತಾನು ದ್ವಾರಕಾ ಪಟ್ಟಣಕ್ಕೆ  ತೆರಳಿದ.

ಭದ್ರೆ ಶ್ರೀಕೃಷ್ಣನ ಇನ್ನೊಬ್ಬ ಸೋದರತ್ತೆಯ ಮಗಳು,

ಅವಳ ಸಹೋದರರಿಂದ ಕೃಷ್ಣಗೆ ಒಪ್ಪಿಸಲ್ಪಟ್ಟವಳು.

ಕೃಷ್ಣ ಒಪ್ಪಿ ಮದುವೆಯಾಗಲು ಅವನ ಹೆಂಡತಿಯಾದಳು.

 

ವಿಶ್ವೇಷಾಂ ದೇವಾನಾಮವತಾರಾ ಹಿ ಪಞ್ಚ ತೇ ಕೈಕೇಯಾ ಭ್ರಾತರೋsಸ್ಯಾ ಹರೇಶ್ಚ ।

ಭಕ್ತಾ ನಿತ್ಯಂ ಪಾಣ್ಡವಾನಾಂ ಚ ತಾತೋsಪ್ಯೇಷಾಂ ವಶೇ ಶೈವ್ಯನಾಮರ್ಭುರಗ್ರೇ ॥೨೦.೫೦॥

ಐವರು ಕೈಕೇಯ ರಾಜಕುಮಾರರು,

ವಿಶ್ವೇದೇವತೆಗಳ ಅವತಾರಭೂತರು.

ಭದ್ರೆಯ ಅಣ್ಣಂದಿರು -ಭಗವಂತನ ಭಕ್ತರು,

ಪಾಂಡವ ಪಕ್ಷದವರು -ಪಾಂಡವ ಭಕ್ತರು.

ಇವರ ತಂದೆ ಶೈವ್ಯ ಹದಿನೆಂಟನೇ ಕಕ್ಷದ ಋಭು ದೇವತೆ ಎಂದು,

ಅವನ ಮಕ್ಕಳಾಗಿ ನಿಂತಿದ್ದರು ವಿಶ್ವೇದೇವತೆಗಳು ತಾವು ಬಂದು.

ಷಣ್ಮಹಿಷಿಯರಲ್ಲಿ ಒಬ್ಬಳಾದ ತಂಗಿ ಭದ್ರೆಯ ಕೃಷ್ಣಗೊಪ್ಪಿಸಿದರು ತಂದು.

 

ಸ್ವಯಮ್ಬರೋ ಲಕ್ಷಣಾಯಾಸ್ತಥಾssಸೀದ್ ಯಥಾ ದ್ರೌಪದ್ಯಾ ಲಕ್ಷವೇಧಾತ್ಮಕಃ ಸಃ ।

ಮದ್ರೇಷು ತಸ್ಯಾಶ್ಚ ಪಿತಾ ಪಿನಾಕಂ ಸ್ವಯಮ್ಬರಾರ್ಥಂ ಜಗೃಹೇ ಗಿರೀಶಾತ್ ॥೨೦.೫೧॥

ನಡೆಯಿತು ಮದ್ರದೇಶದಲ್ಲಿ ಕನ್ಯೆ ಲಕ್ಷಣಾದೇವಿಯ ಸ್ವಯಂವರ,

ಅಲ್ಲೂ ಗುರಿಭೇದಿಸುವ ಕಾರ್ಯ ಹೋಲುತ್ತಿತ್ತು ದ್ರೌಪದಿ ಸ್ವಯಂವರ.

ಲಕ್ಷಣೆಯ ತಂದೆ ಮದ್ರದೇಶದ ರಾಜ ಬೃಹತ್ಸೇನ,

ಸ್ವಯಂವರಕೆ ರುದ್ರನಿಂದ ಪಡೆದಿದ್ದ ಪಿನಾಕವನ್ನ.

 

[1] ಋಭು, ವಿಭ್ವಾ ಮತ್ತು ವಾಜಶ್ರೇತಿ  ಎನ್ನುವ ದೇವತೆಗಳು ತಾರತಮ್ಯದಲ್ಲಿ ಹದಿನೆಂಟನೇ ಕಕ್ಷೆಯಲ್ಲಿದ್ದಾರೆ.  

[2] ಶ್ಯೆವ್ಯ ಸರಿಯಾದ ಪ್ರಯೋಗ. ಕೆಲವರು ಶ್ಯಬ್ಯ ಎನ್ನುತ್ತಾರೆ

No comments:

Post a Comment

ಗೋ-ಕುಲ Go-Kula