Friday 4 December 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 20 - 28

 ಪೂರ್ವಂ ಹಿ ಗಙ್ಗಾ ಮಮ ವಿಷ್ಣುಪೂಜಾವಿಘ್ನಾರ್ತ್ಥಮಾಯಾದ್ ವಾಮಕರೇಣ ಸಾ ಮೇ ।

ನುನ್ನಾ ಪರಸ್ತಾದ್ ಬಹುಯೋಜನಂ ಗತಾ ಪುರೇ ಕುರೂಣಾಂ ಶಿವ ಆಗತಸ್ತದಾ ॥೨೦.೨೦॥

ಹಿಂದೆ ಕೌರವರ ಪಟ್ಟಣವಾದ ಹಸ್ತಿನಾವತಿಯಲ್ಲಿ,

ನನ್ನ ವಿಷ್ಣುಪೂಜೆಯ ಅಡ್ಡಿಗೆ ಗಂಗೆ ಬಂದಳಲ್ಲಿ.

ನನ್ನ ಎಡಗೈಯಿಂದ ತಳ್ಳಲ್ಪಟ್ಟು ಬಹಳ ಯೋಜನ,

ಸರಿಯಲವಳು--ಆಗಾಯಿತು ಶಿವನ ಆಗಮನ.

 

ಸ ವ್ಯಾಘ್ರರೂಪೀ ಕಪಿಲಾತ್ಮಕಾಮುಮಾಂ ಪರೀಕ್ಷಯನ್ ಮಾಂ ಹನ್ತುಮಿವಾsದ್ರವದ್ ದ್ರುತಮ್ ।

ಸ ಮೇ ಯುದ್ಧೇ ವಿಜಿತೋ ಮೂರ್ಚ್ಛಿತಶ್ಚ ಗದಾಪ್ರಹಾರಾದಾಸ ಲಿಙ್ಗಾನ್ತರಸ್ಥಃ ॥೨0.೨೧॥

ನನ್ನನ್ನು ಪರೀಕ್ಷೆ ಮಾಡಲೆಂದೇ ಬಂದಿದ್ದನವ  ಸದಾಶಿವ,

ಹುಲಿಯಾಗಿ ಗೋರೂಪದ ಉಮೆಯ ಕೊಲ್ಲಲು ಬಂದನವ.

ಆಗ ನಾನವನಿಗೆ ಕೊಟ್ಟೆ ಗದೆಯ ಹೊಡೆತ,

ಆ ಯುದ್ಧದಲ್ಲಿ ಸದಾಶಿವ ತಾನು ಸೋತ.

ಲಿಂಗವೊಂದ ಸೇರಿದ ಭಯದಿಂದಾಗಿ ಮೂರ್ಛಿತ.

 

ವ್ಯಾಘ್ರೇಶ್ವರಂ ನಾಮ ಲಿಙ್ಗಂ ಪೃಥಿವ್ಯಾಂ ಖ್ಯಾತಂ ತದಾಸ್ತೇ ತದ್ವದನ್ಯತ್ರ ಯುದ್ಧೇ ।

ತೀರೇ ಗೋಮತ್ಯಾ ಹೈಮವತೇ ಗಿರೌ ಹಿ ಜಿತಸ್ತತ್ರಾಪ್ಯಾಸ ಶಾರ್ದ್ದೂಲಲಿಙ್ಗಮ್ ॥೨೦.೨೨॥

ಅದು ಇಂದಾಗಿದೆ ವ್ಯಾಘ್ರೇಶ್ವರ ಎಂಬ ಲಿಂಗವಾಗಿ ಲೋಕದಿ ಪ್ರಖ್ಯಾತ,

ಹಿಮಾಲಯದ ಗೋಮತೀ ತೀರದಿ ಶಿವ ನನ್ನಿಂದ  ಇನ್ನೊಮ್ಮೆ ಸೋತ,

ಅಲ್ಲಿ ಶಾರ್ದೂಲಲಿಂಗ ಎಂಬ ಹೆಸರು ಪಡೆದು ಕೊಂಡು ತಾ ನಿಂತ.

 

ಏವಂ ಪ್ರತ್ಯಕ್ಷೇ ವಿಷ್ಣುಪದಾಶ್ರಯಸ್ಯ ಬಲಾಧಿಕ್ಯೇ ಕಿಮು ವಕ್ತವ್ಯಮತ್ರ ।

ವಿಷ್ಣೋರಾಧಿಕ್ಯೇ ಕ್ಷತ್ರಿಯಾಣಾಂ ಪ್ರಮಾಣಂ ಬಲಂ ವಿಪ್ರೇ ಜ್ಞಾನಮೇವೇತಿ ಚಾsಹುಃ ॥೨೦.೨೩ ॥

ಹೀಗೆ ನಾರಾಯಣನನ್ನು ಆಶ್ರಯಿಸಿದ ನನ್ನ ಬಲದ ಆಧಿಕ್ಯ,

ಇಷ್ಟೊಂದು ಸ್ಪಷ್ಟವಾಗಿ ಕಾಣುತಿರಲು ಹೇಳಲೇನಿದೆ ಶಕ್ಯ.

ಹೇಳುವರು ಹೀಗೆ-ವಿಷ್ಣು ಸರ್ವೋತ್ತಮನೆಂಬ ಕ್ಷತ್ರಿಯರಿಗೆ ಬಲ ಪ್ರಮಾಣ,

ವಿಷ್ಣುವೇ ಸರ್ವೋತ್ತಮನೆಂಬ ಬ್ರಾಹ್ಮಣನಲ್ಲಿ ಮಾನದಂಡವದು ಜ್ಞಾನ.

 

ಮಯಾ ಕೇದಾರೇ ವಿಪ್ರರೂಪೀ ಜಿತಶ್ಚ  ರುದ್ರೋsವಿಶಲ್ಲಿಙ್ಗಮೇವಾsಶು ಭೀತಃ ।

ತತಃ ಪರಂ ವೇದವಿದಾಮಗಮ್ಯತಾಶಾಪಂ ಪ್ರಾದಾಚ್ಛಙ್ಕರೋ ಬ್ರೀಳಿತೋsತ್ರ ॥೨೦.೨೪ ॥

ಕೇದಾರದಲ್ಲಿ ವಿಪ್ರರೂಪಿ ರುದ್ರ ವಾಗ್ಯುದ್ಧದಿ ನನ್ನಿಂದ ಸೋತ,

ಲಜ್ಜಿತನಾಗಿ ಲಿಂಗ ಹೊಕ್ಕವ-ವೇದಜ್ಞರು ಬರದಂತೆ ಶಾಪವಿತ್ತ.

 

ಏವಂ ಪ್ರತ್ಯಕ್ಷೇ ವಿಷ್ಣು ಬಲೇ ಪ್ರತೀಪಂ ಮನೋ ಯಸ್ಯ ಹ್ಯುತ್ತರಂ ಸ ಬ್ರವೀತು ।

ಕ್ರೋಧೋsಧಿಕಶ್ಚೇತ್ ಕ್ಷಿಪ್ರಮಾಯಾತು ಯೋದ್ಧುಮಿತ್ಯುಕ್ತಾಸ್ತೇsಭ್ಯಾಯಯುರಾತ್ತಶಸ್ತ್ರಾಃ ॥೨೦.೨೫॥

ಹೀಗೆ ನಾರಾಯಣ ಬಲ ಪ್ರತ್ಯಕ್ಷವಾಗುತಿದೆ ಸಿದ್ಧ,

ಉತ್ತರಿಸಿ ನೀವಿಲ್ಲಿ ಯಾರಿದ್ದೀರಿ ಇದರ ವಿರುದ್ಧ.

ಕೋಪಗೊಂಡವರು ಮಾಡಬನ್ನಿರಿ ನನ್ನೊಡನೆ ಯುದ್ಧ,

ಹೀಗೆಂದ ಭೀಮಗೆದುರಾದ ಜರಾಸಂಧಾದಿಗಳು ಶಸ್ತ್ರಬದ್ಧ.

 

ವಿದ್ರಾಪ್ಯ ತಾನ್ ಬಾಣಸಙ್ಘೈಃ ಸಮಸ್ತಾನ್ ಜರಾಸುತಂ ಗದಯಾ ಯೋಧಯಿತ್ವಾ ।

ಬಾಹುಭ್ಯಾಂ ಚೈನಂ ಪರಿಗೃಹ್ಯಾsಶು ವಿಷ್ಣೋಃ ಪಾದೋತ್ಥಾಯಾಂ ಪ್ರಾಕ್ಷಿಪದ್ ದೇವನದ್ಯಾಮ್ ॥೨೦.೨೬॥

ಎಲ್ಲಾ ರಾಜರುಗಳನ್ನು ಬಾಣಗಳ ಮಳೆಗರೆದು ಓಡಿಸಿದ,

ಜರಾಸಂಧನನ್ನು ಭೀಮಸೇನ ಗದಾಯುದ್ಧದಲಿ ಸೆದೆಬಡಿದ.

ತನ್ನೆರಡು ಕೈಗಳಿಂದ ಜರಾಸಂಧನ ಭೀಮಸೇನ ಹಿಡಿದ,

ಹರಿಪಾದದಲ್ಲಿ ಜನಿಸಿದ ಗಂಗೆಯಲ್ಲಿ ಅವನನ್ನು ಹಾಕಿದ.

(ಜರಾಸಂಧನಾಗಿದ್ದ ಮಹಾ ವಿಷ್ಣುದ್ವೇಷಿ,

ಗಂಗೆ ವಿಷ್ಣುಪಾದದಿ ಹುಟ್ಟಿದ ವಿಷ್ಣುದಾಸಿ.

ಹಾಗಾಗಿ ಜರಾಸಂಧ ಗಂಗೆಯಲಿ ಮಾಡುತ್ತಿರಲಿಲ್ಲ ಸ್ನಾನ,

ಅದಕೆಂದೇ ಅವನನ್ನು ಅಲ್ಲೇ ಮುಳುಗಿಸಿದ ಭೀಮಸೇನ.)

 

ಸ ಬ್ರೀಳಿತಃ ಪ್ರಯಯೌ ಮಾಗಧಾಂಶ್ಚ ಭೂಪೈಃ ಸಮೇತೋ ಭೀಮಸೇನೋ ರಥಂ ಸ್ವಮ್ ।

ಆರುಹ್ಯ ಕಾಶೀಶ್ವರಪೂಜಿತಶ್ಚ ಯಯೌ ಕಾಳ್ಯಾ ಶಕ್ರಸನಾಮಕಂ ಪುರಮ್ ॥೨೦.೨೭॥

ನಾಚಿದ ಜರಾಸಂಧ ತನ್ನವರಾದ ರಾಜರೊಂದಿಗೆ ಮಗಧಕ್ಕೆ ನಡೆದ,

ಭೀಮ ಕಾಶೀರಾಜನಿಂದಾಗಿ ಪೂಜಿತ, ಕಾಳಿ ಜೊತೆ ಇಂದ್ರಪ್ರಸ್ಥಕ್ಹೋದ.

 

ತಸ್ಯಾಂ ತ್ರಿಲೋಕಾಧಿಕರೂಪಸದ್ಗುಣೈರಾ ಸಮ್ಮತಾಯಾಂ ರಮಮಾಣಃ ಸುತಂ ಚ ।

ಶರ್ವತ್ರಾತಂ ನಾಮಾಜನಯತ್ ಪುರಾ ಯಃ ಸಮಾನವಾಯುರ್ಬಲವೀರ್ಯ್ಯಯುಕ್ತಃ ॥೨೦.೨೮॥

ಮೂರ್ಲೋಕದಿ ಮಿಗಿಲಾದ ರೂಪ ಗುಣವಂತಳು ಕಾಳಿ,

ಶರ್ವತ್ರಾತನ ಹುಟ್ಟಿಸಿತು ಭೀಮ ಕಾಳಿಯರ ಪ್ರೇಮಕೇಳಿ.

ಬಲ ವೀರ್ಯವಂತ ಸಮಾನ ಬಂದ ಶರ್ವತ್ರಾತ ರೂಪತಾಳಿ.

No comments:

Post a Comment

ಗೋ-ಕುಲ Go-Kula