Thursday 5 May 2016

Sāra Saṅgama 26

ಸಾರ ಸಂಗಮ  by “ತ್ರಿವೇಣಿ ತನಯ

ತುಂಬಿದ ಕೊಡ

ಖಾಲಿ ಕೊಡ ಸದ್ದು ಮಾಡುವುದಿಲ್ಲ,
ತುಂಬಿದ ಕೊಡ ತುಳುಕುವುದಿಲ್ಲ,
ತೊಂದರೆ ಅರೆಬೆಂದ ಮಡಿಕೆಗಳಿಂದ,
ಅಂಥವರಿಂದ ದೂರ ಇರುವುದು ಚೆಂದ.

ನೆರಳು -ಬೆಳಕು

ಜೀವನವೊಂದು ನೆರಳು ಬೆಳಕಿನ ಆಟ,
ಎರಡೂ ಉಂಟು-ಬೇವು ಬೆಲ್ಲದ ಊಟ,
ಮುಳುಗಿ ಅಂಟಿಕೊಂಡರದೇ ಯಮಕಾಟ,
ಬಂದದ್ದು ಬರಲಿ ಇರಲಿ ನಿರ್ಲಿಪ್ತ ನೋಟ.

ಸರ್ವಾಂತರ್ಯಾಮಿ

ಯಾರ್ಯಾರಲ್ಲಿ ನಿಂತು ಏನೇನು ಕೊಡುತಿರುವೆ ಸ್ವಾಮಿ,
ಅಹುದಹುದು ನೀನೇ ಸರ್ವ-ಸರ್ವರಂತರ್ಯಾಮಿ,
ಹೀಗೆಯೇ ಅಲ್ಲಲ್ಲಿ ನಿಂತು ಹೊಲೆ ವಿಷಯಗಳ ಕೊಲ್ಲು,
ಜನ್ಮಾಂತರಕ್ಕಾದರೂ ಆಗಲಿ ಚೆಲುಮೂರ್ತಿ ಈ ಕಲ್ಲು.

ಆತ್ಮಬಂಧು

ಅಯ್ಯೋ ಅಮ್ಮಾ ಅನ್ನದೇ ರಾಮ ಕೃಷ್ಣ ಅನ್ನು,
ಜೊತೆಗೆ ಗುಣಾನುಸಂಧಾನವಿದ್ದರೆ ಬಲು ಚೆನ್ನು,
ಬೇರಾರಿಲ್ಲ ಕಾಯ್ವವವರು ಹಿಂದು ಮುಂದು,
ಜನ್ಮ ಜನ್ಮಕ್ಕವನೊಬ್ಬನೇ ಕೈಬಿಡದ ಆತ್ಮಬಂಧು.

ಜೀವನ ಯಜ್ಞ

ಕಲಿತವರು -ಯಾರಿಲ್ಲ,
ಕಲಿಯುವವರೇ-ಎಲ್ಲ,
ಕಲಿಯುತಲಿರುವುದೇ ಜೀವನ,
ಕಲಿಯುವುದಾಗಲಿ ಜೀವನ ಯಜ್ಞ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula