ಸಾರ ಸಂಗಮ by “ತ್ರಿವೇಣಿ ತನಯ”
ಮಿತ -ಅಮಿತ
ಹುಟ್ಟು ಸಾವುಗಳ ಚಕ್ರ ಅಬಾಧಿತ,
ಎಲ್ಲವೂ ಇಲ್ಲಿ ಪೂರ್ವನಿಯೋಜಿತ,
ಮಿತಿ ಅರಿತು ನಡೆದರೆ ಸೊಗಸು ಸಂಸಾರ,
ತಿಳಿಯಬಲ್ಲವರ್ಯಾರು "ಅಮಿತ"ನ ವ್ಯಾಪಾರ.
ಆತ್ಮ -ಪರಮಾತ್ಮ
ಅನಾದಿಕಾಲದ ಋಣಾನುಬಂಧ,
ಜನ್ಮ ಜನ್ಮಾಂತರಗಳ ಬಿಡದ ಸಂಬಂಧ,
ಸಂಬಂಧದರಿವು ಸುಗಮ ಬದುಕಿಗೆ ದಾರಿ,
ಅರಿವಾಗದಿರೆ ಮೇಲೇರಲಾಗದ ದುರ್ಗಮ ಏರಿ .
ಹಾವು ಏಣಿಯಾಟ
ತಿಳಿದಿರು ಬಾಳೊಂದು ಹಾವು ಏಣಿಯಾಟ,
ಮೇಲೇರುತಿರುವಾಗ ಎಳೆವ ಹಾವಿನ ಕಾಟ,
ವಶಪಡಿಸಿಕೋ ಹಾವನ್ನು ಏರಿಸದನು ಮೇಲೆ,
ವಶಪಡಿಸಿಕೊಳ್ಳುವ ಕಲೆ ಕರುಣಿಸುವುದವನ ಲೀಲೆ.
ಅಸಮಾನ್ಯನ ಅನುಸಂಧಾನ
ಭಗವಂತ -ಜ್ಞಾನ ಸ್ವರೂಪ,
ಗ್ರಹಿಕೆ -ಸ್ವಭಾವ ಸ್ವರೂಪ,
ಕಲ್ಪನೆ -ನಮ್ಮ ನಮ್ಮ ಯೋಗ್ಯತೆ,
ಕುರುಡರು ಆನೆಯ ಕಂಡಂತೆ,
ಅವನಾಳ ವಿಸ್ತಾರ ಎಟುಕೀತೇ?
ತಾಯಿ ಲಕ್ಷ್ಮಿಗೇ ಸಿಕ್ಕಿಲ್ಲ ಅವನಳತೆ!!!.
ದಶಾವತಾರ ಮನನ -ಸದಾಚಾರದ ಜೀವನ
ಮತ್ಸ್ಯ -ನೆನೆದು ಭವಸಾಗರವ ಈಜು.
ಕೂರ್ಮ -ನೆನೆದು ಸಂಸಾರ ಭಾರ ಹೋರು.
ವರಾಹ -ನೆನೆದು ದುಷ್ಟರ ನಿಗ್ರಹಿಸು.
ನಾರಸಿಂಹ -ನೆನೆದು ಅರಿಗಳ ಗೆಲ್ಲು.
ವಾಮನ -ನೆನೆದು ಬೇಡುವುದನ್ನೇ ಬೇಡು.
ಪರಶುರಾಮ -ನೆನೆದು ದುಷ್ಟಶಕ್ತಿಗಳ ಗೆಲ್ಲು.
ದಾ .ರಾಮ -ಮರ್ಯಾದಾ ಗುಣಗಳ ಬೇಡು.
ಕೃಷ್ಣ -ನೆನೆದು ಸಮಯವರಿತು ಧರ್ಮ ಆಚರಿಸು.
ಬುದ್ಧ -ನೆನೆದು ಪ್ರಬುದ್ಧನಾಗು.
ಕಲ್ಕಿ -ನೆನೆದು ಕಲಿಬಾಧೆ ಗೆಲ್ಲು.
(Contributed by Shri Govind Magal)
No comments:
Post a Comment
ಗೋ-ಕುಲ Go-Kula