ಅಙ್ಕೇ ನಿಧಾಯ ಸ ಕದಾಚಿದಮುಷ್ಯ ರಾಮಃ ಶಿಶ್ಯೇ ಶಿರೋ ವಿಗತನಿದ್ರ
ಉದಾರಬೋಧಃ ।
ಸಂಸುಪ್ತವತ್ ಸುರವರಃ ಸುರಕಾರ್ಯ್ಯಹೇತೋರ್ದ್ದಾತುಂ ಚ ವಾಲಿನಿಧನಸ್ಯ
ಫಲಂ ತದಸ್ಯ॥೧೫.೫೧॥
ಜ್ಞಾನಾನಂದಮಯ
ದೇಹಿಯಾದ ಪರಶುರಾಮ,
ತೋರಿದ ಕರ್ಣನ
ತೊಡೆಮೇಲೆ ಮಲಗಿದ ನೇಮ.
ದೇವತಾಕಾರ್ಯ ಹಾಗೂ
ಕರ್ಣಗೆ ಕೊಡಲು ವಾಲಿಯ ಕೊಂದ ಫಲ,
ಪರಶುರಾಮನಾಡಿದ
ನಿದ್ರಿಸಿದವನಂತೆ ಪೂರ್ವನಿಶ್ಚಿತ ನಾಟಕದ ಜಾಲ.
ತತ್ರಾsಸ
ರಾಕ್ಷಸವರಃ ಸ ತು ಹೇತಿನಾಮಾ ಕಾಲೇ ಮಹೇನ್ದ್ರಮನುಪಾಸ್ಯ ಹಿ ಶಾಪತೋsಸ್ಯ ।
ಕೀಟಸ್ತಮಿನ್ದ್ರ ಉತ ತತ್ರ ಸಮಾವಿವೇಶ ಕರ್ಣ್ಣಸ್ಯ ಶಾಪಮುಪಪಾದಯಿತುಂ
ಸುತಾರ್ತ್ಥೇ ॥೧೫.೫೨॥
ಆಗಲೇ ಸೇವಾಕಾಲದಿ
ಮಹೇಂದ್ರನ ಸೇವಿಸದಿರುವ ಆಟ,
ಹೇತಿ ಎಂಬ ಅಸುರ
ಇಂದ್ರಶಾಪದಿಂದಾಗಿದ್ದ ಒಂದು ಕೀಟ.
ಮಗನಿಗಾಗಿ ಕರ್ಣಗೆ
ಶಾಪಕೊಡಿಸಲು ಕೀಟಪ್ರವೇಶ ಒಂದಾಟ.
ಕರ್ಣ್ಣಃ ಸಕೀಟತನುಗೇನ ಕಿರೀಟಿನೈವ ಹ್ಯೂರೋರಧಸ್ತನತ ಓಪರಿಗಾತ್ವಚಶ್ಚ
।
ವಿದ್ಧಃ ಶರೇಣ ಸ ಯಥಾ ರುಧಿರಸ್ಯ ಧಾರಾಂ ಸುಸ್ರಾವ ತಂ ವಿಗತನಿದ್ರ ಇವಾsಹ ರಾಮಃ ॥೧೫.೫೩॥
ಕೀಟಶರೀರದಲ್ಲಿನ
ಹೇತಿಯೊಂದಿಗಿದ್ದ ಇಂದ್ರ,
ಕರ್ಣನ ತೊಡೆತಳ
ಕೊರೆದು ಮಾಡ್ತಿದ್ದ ರಂಧ್ರ.
ಆಗ ಹರಿಯತೊಡಗಿತು
ಧಾರಾಕಾರ ರಕ್ತದ ಕೋಡಿ,
ಎಚ್ಚತ್ತವನಂತೆ ರಾಮ
ಕೇಳಿದ ಅದನ್ನೆಲ್ಲ ನೋಡಿ.
ಕಿಂ ತ್ವಂ ನ ಚಾಲಯಸಿ ಮಾಂ ರುಧಿರಪ್ರಸೇಕೇ ಪ್ರಾಪ್ತೇsಪಿ ಪಾವನವಿರೋಧಿನಿ ಕೋsಸಿ ಚೇತಿ ।
ತಂ ಪ್ರಾಹ ಕರ್ಣ್ಣ ಇಹ ನೈವ ಮಯಾ ವಿಧೇಯೋ ನಿದ್ರಾವಿರೋಧ ಇತಿ ಕೀಟ
ಉಪೇಕ್ಷಿತೋ ಮೇ॥೧೫.೫೪ ॥
ಅಪವಿತ್ರ
ರಕ್ತಸ್ಪರ್ಶವಾದಾಗಲೂ ನೀನೆನ್ನ ಎಬ್ಬಿಸಲಿಲ್ಲ,
ಯಾರ್ಹೇಳು ನೀನು
ಎನಗೆ ಅನುಮಾನ ಆಗುತ್ತಿದೆಯಲ್ಲ.
ಕರ್ಣನೆಂದ
ಸಹಿಸಿದ್ದೆ ನಿಮ್ಮ ನಿದ್ದೆ ಭಂಗ ಆಗಬಾರದಲ್ಲ.
ಜಾತ್ಯಾsಸ್ಮಿ ಸೂತ
ಉತ ತೇ ತನಯೋsಸ್ಮಿ
ಸತ್ಯಂ ತೇನಾಸ್ಮಿ ವಿಪ್ರ ಇತಿ ಭಾರ್ಗ್ಗವವಂಶಜೋsಹಮ್ ।
ಅಗ್ರೇsಬ್ರವಂ
ಭವತ ಈಶ ನಹಿ ತ್ವದನ್ಯೋ ಮಾತಾ ಪಿತಾ ಗುರುತರೋ ಜಗತೋsಪಿ ಮುಖ್ಯಃ ॥೧೫.೫೫ ॥
ಲೋಕಜಾತಿಯಿಂದ ನಾನು
ಒಬ್ಬ ಸೂತ,
ಜಗದ್ಪಿತ ನಿನ್ನ
ಮಗನಾಗಿರುವುದೂ ಸತ್ಯ.
ಹಾಗಾಗೇ ಹೇಳಿದೆ
ನಾನು ಭೃಗುಕುಲದಿ ಹುಟ್ಟಿದ ಬ್ರಾಹ್ಮಣ,
ನೀನಲ್ಲವೇ ಮಾತಾ ಪಿತಾ ಗುರು ಸಕಲ ಜಗದ ಕಾರಣ.
No comments:
Post a Comment
ಗೋ-ಕುಲ Go-Kula