ಅಥಾsಹ ಚೇದಿಭೂಪತಿಃ ಸದನ್ತವಕ್ರಕೋ ವಚಃ ।
ಪುರಾ ಹರೇರ್ಹಿ ಪಾರ್ಷದಃ
ಪ್ರಸನ್ನಬುದ್ಧಿರೇಕದಾ ॥೧೭.೧೧॥
ಆ ನಂತರ ದಂತವಕ್ರನೊಂದಿಗಿದ್ದ ಚೇದಿರಾಜನಾದ ಶಿಶುಪಾಲ ಮಾತಾಡುತ್ತಾನೆ,
ಪರಮಾತ್ಮನ ದ್ವಾರಪಾಲಕರಾಗಿದ್ದ ಹಿನ್ನೆಲೆಯಿಂದ ಭಕ್ತಿಯುಕ್ತ ಹಿತ
ನುಡಿಯುತ್ತಾನೆ.
ಶೃಣುಷ್ವ ರಾಜಸತ್ತಮ
ಪ್ರಭುಂ ಶಿವಸ್ವಯುಮ್ಭುವೋಃ ।
ಹರಿಂ ವದನ್ತಿ
ಕೇಚಿದಪ್ಯದೋ ಭವೇನ್ನ ವೈ ಮೃಷಾ ॥೧೭.೧೨॥
ಕೇಳು ರಾಜರಲ್ಲಿ ಅಗ್ರಗಣ್ಯನಾದ ಓ ಜರಾಸಂಧ,
ಇದೆ ಬ್ರಹ್ಮರುದ್ರರಿಗೆ ನಾರಾಯಣ ರಾಜನೆಂಬ ವಾದ.
ಅದು ಸುಳ್ಳಲ್ಲ ಎಂಬುದು ನನ್ನ ಮನ ಮಿಡಿವ ನಾದ.
ತಥಾssವಯೋಶ್ಚ ದರ್ಶನೇ ಭವೇತ್ ಕದಾಚಿದೂರ್ಜ್ಜಿತಾ ।
ಅಮುಷ್ಯ ಭಕ್ತಿರನ್ಯಥಾ
ಪುನಶ್ಚ ಜಾಯತೇ ಕ್ರುಧಾ ॥೧೭.೧೩॥
ನನಗೂ ದಂತವಕ್ರನಿಗೂ ಕೃಷ್ಣನಮೇಲೆ ಒಮ್ಮೊಮ್ಮೆ ಉಕ್ಕುವ ಶ್ರೇಷ್ಠ
ಭಕ್ತಿ,
ಕೆಲವೊಮ್ಮೆ ತೂರಿಬರುವ ಉತ್ಕಟ ಕೋಪ ದ್ವೇಷ ಕ್ರೂರತ್ವ
ಅಭಿವ್ಯಕ್ತಿ.
ನ ಕಾರಣಂ ಚ ವಿದ್ಮಹೇ ನ
ಸಂಶಯಃ ಪರೋ ಹರಿಃ ।
ವ್ರಜಾಮ ತಂ
ಸುಖಾರ್ತ್ಥಿನೋ ವಯಂ ವಿಹಾಯ ಶತ್ರುತಾಮ್ ॥೧೭.೧೪॥
ಹೀಗೇಕೆ ಎಂಬ ಕಾರಣವದು ತಿಳಿದಿಲ್ಲ,
ಹರಿ ಉತ್ಕೃಷ್ಟ ಎಂಬುವಲ್ಲಿ ಸಂಶಯವಿಲ್ಲ.
ನಮಗೆ ಅವನೊಂದಿಗೆ ಶತ್ರುತ್ವವದು ಬೇಡ,
ಸುಖಕ್ಕಾಗಿ ಹಿಡಿಯೋಣ ಶರಣಾಗತಿ ಜಾಡ.
ಇದಂ ಹಿ ನಃ ಶುಭಪ್ರದಂ
ನಚಾನ್ಯಥಾ ಶುಭಂ ಕ್ವಚಿತ್ ।
ಇತೀರಿತೋ ಜರಾಸುತೋ
ದದರ್ಶ ತೌ ದಹನ್ನಿವ ॥೧೭.೧೫॥
ಹೀಗೆ ಮಾಡಿದರೆ ನಮಗೆ ಒಳ್ಳೆಯದು,
ಇಲ್ಲದಿರೆ ಒಳಿತಾಗುವುದಿಲ್ಲ ನಮಗೆಂದೂ.
ಕೇಳಿಸಿಕೊಂಡ ಜರಾಸಂಧ ಮೇಲಿನ ಮಾತ,
ಅವನತ್ತ ಬಿಟ್ಟನಾಗ ಸುಟ್ಟುಬಿಡುವ ನೋಟ.[Contributed by Shri Govind Magal]