ಏವಂ ತಯೋಃ ಕ್ರೀಡತೋಃ
ಸ್ವೈರಮತ್ರ ರಾಜನ್ಯವೃನ್ದಾನುಗತೋ ಜರಾಸುತಃ ।
ಗಿರಿಂ ಗೋಮನ್ತಂ
ಪರಿವಾರ್ಯ್ಯಾದಹತ್ ತಂ ದೃಷ್ಟ್ವಾ ದೇವೌ ಪುಪ್ಲುವತುರ್ಬಲಾಬ್ಧೌ ॥೧೬.೧೩॥
ಹೀಗೆ ರಾಮಕೃಷ್ಣರು ಸ್ವೇಚ್ಛೆಯಾಗಿ ಗೋಮಂತಕ ಶಿಖರದಲ್ಲಿ ನಡೆಸಿರಲು
ವಿಹಾರ,
ರಾಜರಗುಂಪಿನೊಂದಿಗೆ ಬೆನ್ನತ್ತಿದ್ದ ಜರಾಸಂಧ ಶಿಖರಬುಡವ ಮಾಡಿದ
ಬೆಂಕಿಗಾಹಾರ.
ಇದನ್ನೆಲ್ಲಾ ನೋಡಿದ ಕೃಷ್ಣರಾಮರು ಕೆಳಗಿದ್ದ ಸೈನ್ಯಸಾಗರಕ್ಕೆ
ಧುಮುಕಿದ ವ್ಯಾಪಾರ.
ಗಿರಿಸ್ತಾಭ್ಯಾಂ ಪೀಡಿತಃ
ಸನ್ ನಿಮಗ್ನೋ ಭೂಮೌ ಪದ್ಭ್ಯಾಂ ಯೋಜನೈಕಾದಶಂ ಸಃ ।
ನಿಷ್ಪೀಡಿತಾಜ್ಜಲಧಾರೋದ್ಗತಾsಸ್ಮಾದ್ ವಹ್ನಿಂ ವ್ಯಾಪ್ತಂ ಶಮಯಾಮಾಸ ಸರ್ವಮ್ ॥೧೬.೧೪ ॥
ರಾಮಕೃಷ್ಣರು ಕೆಳಹಾರುವಾಗ ಆದ ಪಾದಗಳ ಒತ್ತಡದ ಕಾರಣ,
ಗೋಮಂತಕಬೆಟ್ಟ ಕೆಳಕುಸಿದು ಹೋದದ್ದು ಹನ್ನೊಂದು ಯೋಜನ.
ಆಗ ನೀರಧಾರೆ ಮೇಲೆದ್ದು ಬಂತು,
ಹಬ್ಬಿದ್ದ ಬೆಂಕಿಯನ್ನೆಲ್ಲ ಆರಿಸಿತು.
ಸೇನಾಂ ಪ್ರವಿಷ್ಟೌ
ಸರ್ವರಾಜನ್ಯವೃನ್ದಂ ವ್ಯಮತ್ಥ್ನಾತಾಂ ದೇವವರೌ ಸ್ವಶಸ್ತ್ರೈಃ ।
ತತ್ರ ಹಂಸೋ
ಡಿಭಕಶ್ಚೈಕಲವ್ಯಃ ಸ ಕೀಚಕಸ್ತೌ ಶಿಶುಪಾಲಪೌಣ್ಡ್ರಕೌ ॥೧೬.೧೫ ॥
ಭೌಮಾತ್ಮಜೌ
ದನ್ತವಕ್ರಶ್ಚ ರುಗ್ಮೀ ಸೌಭಾಧಿಪೋ ಮೈನ್ದಮೈನ್ದಾನುಜೌ ಚ l
ಅನ್ಯೇ ಚ ಯೇ
ಪಾರ್ತ್ಥಿವಾಃ ಸರ್ವ ಏವ ಕ್ರೋಧಾತ್ ಕೃಷ್ಣಂ ಪರಿವಾರ್ಯ್ಯಾಭ್ಯವರ್ಷನ್ ॥೧೬.೧೬ ॥
ಸೇನೆಯ ಪ್ರವೇಶಿಸಿದ ದೇವಶ್ರೇಷ್ಠ ರಾಮಕೃಷ್ಣರು,
ಸರ್ವರಾಜ ಸೈನ್ಯಸಮೂಹವ ಚೆನ್ನಾಗಿ ನಿಗ್ರಹಿಸಿದರು.
ಹಂಸ, ಡಿಭಿಕ, ಏಕಲವ್ಯ,ಕೀಚಕ,ಶಿಶುಪಾಲ, ಪೌಂಡ್ರಕ, ಭಗದತ್ತ,
ರುಗ್ಮಿ, ಸಾಲ್ವ, ಮೈಂದ, ವಿವಿದ ಮತ್ತಿತರರು
ಬಾಣ ಬಿಟ್ಟರು ಕೃಷ್ಣನತ್ತ.
ಶಸ್ತ್ರೈರಸ್ತ್ರೈರ್ದ್ದ್ರುಮಪೂಗೈಃ
ಶಿಲಾಭಿರ್ಭಕ್ತಾಶ್ಚ ಯೇ ಶಲ್ಯಬಾಹ್ಲೀಕಮುಖ್ಯಾಃ ।
ಸಸೋಮದತ್ತಾಃ
ಸೌಮದತ್ತಿರ್ವಿರಾಟಃ ಪಾಞ್ಚಾಲರಾಜಶ್ಚ ಜರಾಸುತಸ್ಯ
।
ಭಯಾತ್ ಕೃಷ್ಣಂ
ಶಸ್ತ್ರವರ್ಷೈರವರ್ಷನ್ ಕಾರಾಗೃಹೇ ವಾಸಿತಾ ಮಾಗಧೇನ ॥೧೬.೧೭ ॥
ಕೃಷ್ಣಭಕ್ತರಾಗಿದ್ದ ಶಲ್ಯ,ಬಾಹ್ಲೀಕ, ಭೂರಿಶ್ರವಸ್ಸು, ಭಗದತ್ತ,
ವಿರಾಟ, ದ್ರುಪದ, ಅನೇಕ ಅಸ್ತ್ರಗಳ ಬಿಟ್ಟರು ಶ್ರೀಕೃಷ್ಣನತ್ತ.
ಹಿಂದೆ ಅವರೆಲ್ಲರೂ ಸೇರಿದ್ದರು ಜರಾಸಂಧನ ಕಾರಾಗೃಹ,
ಕೃಷ್ಣಭಕ್ತರಾಗಿದ್ದರೂ ಅವರನ್ಹಾಗೆ ನಡೆಸಿದ್ದು ಜರಾಸಂಧಭಯ.
ಸರ್ವಾನೇತಾಞ್ಛರವರ್ಷೇಣ
ಕೃಷ್ಣೋ ವಿಸೂತವಾಜಿಧ್ವಜಶಸ್ತ್ರವರ್ಮ್ಮಣಃ ।
ಕೃತ್ವಾ
ವಮಚ್ಛೋಣಿತಾನಾರ್ತ್ತರೂಪಾನ್ ವಿದ್ರಾವಯಾಮಾಸ ಹರಿರ್ಯ್ಯಥಾ ಮೃಗಾನ್ ॥೧೬.೧೮ ॥
ಶ್ರೀಕೃಷ್ಣ ಎಲ್ಲಾ ರಾಜರಮೇಲೆ ಮಳೆಸುರಿಸುತ್ತಾ,
ಮಾಡಿದನವರ ಕುದುರೆ,ಧ್ವಜ, ಶಸ್ತ್ರ, ಕವಚರಹಿತ.
ರಕ್ತಕಾರಿಕೊಂಡು ಭಯಂಕರ ದೇಹವುಳ್ಳವರನ್ನಾಗಿ ಮಾಡಿ,
ತೋರಿದ ಕೃಷ್ಣ ಹೇಗೆ ಸಿಂಹ ಜಿಂಕೆಗಳ ಓಡಿಸುವ ಆ ಮೋಡಿ.
ಹತ್ವಾ ಸೇನಾಂ
ವಿಂಶದೋಕ್ಷೋಹಿಣೀಂ ತಾಂ ತ್ರಿಭಿರ್ಯ್ಯುಕ್ತಾಂ ರುಗ್ಮಿಣಂ ನೈವ ಕೃಷ್ಣಃ ।
ರುಗ್ಮಿಣ್ಯರ್ತ್ಥೇ
ಪೀಡಯಾಮಾಸ ಶಸ್ತ್ರಾಣ್ಯಸ್ಯ ಚ್ಛಿತ್ವಾ ವಿರಥಂ ದ್ರಾವಯಾನಃ ॥೧೬.೧೯ ॥
ಕೃಷ್ಣ ಮಾಡಿದ ೨೩ ಅಕ್ಷೋಹಿಣಿ ಸೈನ್ಯ ಸಂಹಾರ,
ರುಗ್ಮಿಣಿಗಾಗಿ ರುಗ್ಮಿಗೆ ಕೊಟ್ಟ ರಿಯಾಯತಿ ಅಪಾರ.
ರುಗ್ಮಿಯನ್ನು ಆಯುಧ ರಥಹೀನನ ಮಾಡಿ ಸ್ವಾಮಿ,
ಹಿಂಸಿಸದೆ ಅವನ ಓಡಿಸಿಬಿಟ್ಟ ಆ ರುಗ್ಮಿಣೀಪ್ರೇಮಿ.
No comments:
Post a Comment
ಗೋ-ಕುಲ Go-Kula