ಕೃಷ್ಣೋ ಜಿತ್ವಾ ಮಾಗಧಂ
ರೌಹಿಣೇಯಯುಕ್ತೋ ಯಯೌ ದಮಘೋಷೇಣ ಸಾರ್ದ್ಧಮ್ ।
ಪಿತೃಷ್ವಸಾಯಾಃ ಪತಿನಾ
ತೇನ ಚೋಕ್ತಃ ಪೂರ್ವಂ ಜಿತೇನಾಪಿ ಯುಧಿ ಸ್ಮ ಬಾನ್ಧವಾತ್ ॥೧೬.೨೮ ॥
ಕೃಷ್ಣ ಬಲರಾಮನೊಂದಿಗೆ ಮಾಗಧನನ್ನು ಗೆದ್ದ,
ಅತ್ತೆಯಗಂಡ ದಮಘೋಷನೊಡಗೂಡಿ ತೆರಳಿದ.
ಸೋತವನೊಂದಿಗೆ ಹೊರಟದ್ದು ಬಾಂಧವ್ಯದಿಂದ.
ಯಾಮಃ ಪುರಂ
ಕರಿವೀರಾಖ್ಯಮೇವ ಮಹಾಲಕ್ಷ್ಮ್ಯಾಃ ಕ್ಷೇತ್ರಸನ್ದರ್ಶನಾಯ ।
ಶ್ರುತ್ವಾ ವಾಕ್ಯಂ ತಸ್ಯ
ಯುದ್ಧೇ ಜಿತಸ್ಯ ಭೀತ್ಯಾ ಯುಕ್ತಸ್ಯಾsತ್ಮನಾ ತದ್ಯುತೋsಗಾತ್ ॥೧೬.೨೯ ॥
ಸೋತ ದಮಘೋಷ ಭಯದಿಂದ ಕರವೀರಪುರಕ್ಕೆ ಹೋಗೋಣವೆಂದ,
ಪರಾಜಿತನ ಮಾತಿನಂತೆ ಕೃಷ್ಣ
ಕರವೀರಪುರದೆಡೆ ಅವನ ಜೊತೆ ತೆರಳಿದ.
ಗನ್ಧರ್ವೋsಸೌ ದನುನಾಮಾ ನರೋsಭೂತ್ ತಸ್ಮಾತ್ ಕೃಷ್ಣೇ ಭಕ್ತಿಮಾಂಶ್ಚಾsಸ ರಾಜಾ ।
ಪುರಪ್ರಾಪ್ತಾಂಸ್ತಾನ್ ಸ
ವಿಜ್ಞಾಯ ಪಾಪಃ ಸೃಗಾಲಾಖ್ಯೋ ವಾಸುದೇವಃ ಕ್ರುಧಾssಗಾತ್ ॥೧೬.೩೦ ॥
ಈ ದಮಘೋಷ ಮೂಲತಃ ದನು ಎಂಬ ಗಂಧರ್ವ,
ಈಗ ಮನುಷ್ಯಲೋಕದಿ ಅವತರಿಸಿ ಬಂದಿರುವವ.
ಮೂಲಗಂಧರ್ವನಾದ್ದರಿಂದ ಕೃಷ್ಣಭಕ್ತಿಯುಳ್ಳವ,
ಸುದ್ದಿ ತಿಳಿದು ಅವರತ್ತ ಬಂದ ಸೃಗಾಲವಾಸುದೇವ.
ಸೂರ್ಯ್ಯಪ್ರದತ್ತಂ
ರಥಮಾರುಹ್ಯ ದಿವ್ಯಂ ವರಾದವದ್ಧ್ಯಸ್ತಿಗ್ಮರುಚೇಃ ಸ ಕೃಷ್ಣಮ್ ।
ಯೋದ್ಧುಂ
ಯಯಾವಮುಚಚ್ಚಾಸ್ತ್ರಙ್ಘಾಞ್ಛಿರಸ್ತಸ್ಯಾಥಾsಶು ಜಹಾರ ಕೃಷ್ಣಃ ॥ ೧೬.೩೧ ॥
ಆ ಸೃಗಾಲವಾಸುದೇವ ಸೂರ್ಯನಿತ್ತ ರಥವನ್ನು ಏರಿ,
ಅವಧ್ಯತ್ವ ಹೊಂದಿದವ ಯುದ್ಧಕ್ಕೆ ಬಂದ ಕೃಷ್ಣನ ಮೇಲೇರಿ.
ಕೃಷ್ಣನ ಮೇಲೆ ಸೃಗಾಲ ಅನೇಕ ಅಸ್ತ್ರಗಳ ಬಿಟ್ಟ,
ಶ್ರೀಕೃಷ್ಣ ನೋಡುತ್ತಲೇ ಅವನ ತಲೆ ತೆಗೆದುಬಿಟ್ಟ.
ದ್ವಿಧಾ ಕೃತ್ವಾ
ದೇಹಮಸ್ಯಾರಿಣಾ ಚ ಪುತ್ರಂ ಭಕ್ತಂ ತಸ್ಯ ರಾಜ್ಯೇsಭಿಷಿಚ್ಯ ।
ಸ ಶಕ್ರದೇವಂ ಮಾಣಿಭದ್ರಃ
ಪುರಾ ಯೋ ಯಯೌ ಪುರೀಂ ಸ್ವಾಂ ಸಹಿತೋsಗ್ರಜೇನ ॥೧೬.೩೨ ॥
ಶ್ರೀಕೃಷ್ಣ ಚಕ್ರದಿಂದ ಸೃಗಾಲನ ದೇಹವ ಎರಡಾಗಿ ಸೀಳಿದ,
ಅವನ ಮಗನಾದ ಭಕ್ತ ಶಕ್ರದೇವಗೆ ಅಭಿಷೇಕ ಮಾಡಿದ.
ರಾಜ್ಯಾಭಿಷೇಕದ ನಂತರ ಕೃಷ್ಣ ತನ್ನೂರಿಗೆ ತೆರಳಿದ,
ಮೂಲದಲ್ಲಿ ಈ ಶಕ್ರದೇವ ಮಣಿಭದ್ರನ (ಕುಬೇರನ) ಸೇವಕ,
ಅಣ್ಣನೊಡನೆ ಮಧುರೆಗೆ ಹೊರಟ ಕೃಷ್ಣ ಮುಗಿಸಿ ಅಭಿಷೇಕ.
ನೀತಿಂ ಬಲಿಷ್ಠಸ್ಯ
ವಿಹಾಯ ಸೇನಾಂ ದೂರಾದ್ ಯುದ್ಧಂ ದರ್ಶಯಿತ್ವೈವ ಗುಪ್ತ್ಯೈ ।
ಸ್ವಸೇನಾಯಾಃ
ಸರ್ವಪೂರ್ಣ್ಣಾತ್ಮಶಕ್ತಿಃ ಪುನಃ ಪುರೀಂ ಪ್ರಾಪ್ಯ ಸ ಪೂಜಿತೋsವಸತ್ ॥೧೬.೩೩ ॥
ಬಲಿಷ್ಠನೊಬ್ಬ ಸೇನೆಯನ್ನು ಬಿಟ್ಟು ದೂರದಿಂದ ತನ್ನ ದೇಶ ರಕ್ಷಿಸುವ
ರೀತಿ,
ಕೃಷ್ಣ ತೋರಿದ ತನ್ನ ದೇಶದ ರಕ್ಷಣೆಗಾಗಿ ಯುದ್ಧ ಕೌಶಲ್ಯದ ವಿಶೇಷ
ನೀತಿ.
ಮತ್ತೆ ಮಧುರೆಗೆ ತೆರಳಿ ಪೂಜಿತನಾದ ಕೃಷ್ಣನೆಂಬ ಸಾಟಿಯಿರದ
ಪೂರ್ಣಶಕ್ತಿ.
॥ ಇತಿ
ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಸೃಗಾಲವಧೋ ನಾಮ
ಷೋಡಶೋsದ್ಧ್ಯಾಯಃ ॥
ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ
ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯಾನುವಾದ,
ಸೃಗಾಲವಧ ಹೆಸರಿನ ಹದಿನಾರನೇ ಅಧ್ಯಾಯ,
ಸೂತ್ರಧಾರ
ಶ್ರೀಕೃಷ್ಣಗರ್ಪಿಸಿದ ಧನ್ಯತಾ ಭಾವ.
No comments:
Post a Comment
ಗೋ-ಕುಲ Go-Kula