ನಾರಾಯಣೇ ಸರ್ವದೇವೈಃ
ಸಮೇತೇ ಬ್ರಹ್ಮಾದಿಭಿರ್ಹಾಸಮಾನೇ ಸುಪರ್ಣ್ಣಃ ।
ಗತ್ವಾ ಪಾತಾಳಂ ಯುಧಿ
ಜಿತ್ವಾ ಬಲಿಂ ಚ ಕಿರೀಟಮಾದಾಯಾಭ್ಯಯಾದ್ ಯತ್ರ ಕೃಷ್ಣಃ ॥೧೬.೦೭॥
ಬ್ರಹ್ಮಾದಿ ಸಕಲ ದೇವತೆಗಳೊಂದಿಗೆ ನಾರಾಯಣ ಕೂಡಾ ನಗುತ್ತಿದ್ದ,
ಗರುಡ ಪಾತಾಳಕ್ಕೆ ತೆರಳಿ ಬಲಿಯ ಗೆದ್ದು ಕಿರೀಟ ಕೃಷ್ಣನಲ್ಲಿಗೆ ತಂದ.
ತತ್ ತಸ್ಯ ಶೀರ್ಷ್ಣಿ
ಪ್ರತಿಮುಚ್ಯ ನತ್ವಾ ಖಗಃ ಸ್ತುತ್ವಾ ದೇವದೇವಂ ರಮೇಶಮ್ ।
ಸ್ಮೃತ ಆಗಚ್ಛೇತ್ಯೇವ
ವಿಸರ್ಜ್ಜಿತೋsಮುನಾ ಯಯೌ
ದುಗ್ಧಾಬ್ಧಿಂ ಯತ್ರ ನಾರಾಯಣೋsಸೌ
॥೧೬.೦೮ ॥
ಗರುಡ ಆ ಕಿರೀಟವ ಕೃಷ್ಣನ ತಲೆಮೇಲೆ ಇರಿಸಿದ,
ರಮೇಶನ ನೆನೆದು ವಂದಿಸುತ್ತಾ ಸ್ತೋತ್ರ ಮಾಡಿದ.
ನೆನೆದಾಗ ಬಾ ಎಂದು ಕೃಷ್ಣ ಅವನ ಕಳಿಸಿದ,
ಗರುಡ ತಾ ಮರಳಿ ಕ್ಷೀರಸಾಗರಕ್ಕೆ ತೆರಳಿದ.
ಕಿರೀಟಂ ತತ್
ಕೃಷ್ಣಮೂರ್ಧ್ನಿ ಪ್ರವಿಷ್ಟಂ ತತ್ತುಲ್ಯಮಾಸೀತ್ ತಸ್ಯ ರೂಪೇಷ್ವಭೇದಾತ್ ।
ತದಿಚ್ಛಯಾ ಚೈವ
ನಾರಾಯಣಸ್ಯ ಶೀರ್ಷ್ಣ್ಯಪ್ಯಾಸೀದ್ ಯುಗಪದ್ ದುಗ್ಧವಾರ್ದ್ಧೌ ॥೧೬.೦೯ ॥
ಭಗವಂತನ ರೂಪ ಅವತಾರಗಳಲ್ಲಿ ಭೇದವಿಲ್ಲೆಂಬುದು ಸಿದ್ಧಸೂತ್ರ,
ಹೊಂದಿ ಕೂತಿತು ಕಿರೀಟ ಕೃಷ್ಣಗೆ ನಾರಾಯಣಗೆ ಇರಲಿ ಯಾವುದೇ ಪಾತ್ರ.
ಇದು ಅವನ ರೂಪದಲ್ಲಿ ಅಭೇದ ತೋರಿದ ಸಂಕೇತ,
ಎಲ್ಲೇ ಇರಲಿ ಹೇಗೇ ಇರಲಿ ಅವನೊಬ್ಬನೇ ಭಗವಂತ.
ಪೂರ್ವಂ ಪ್ರಾಪ್ತಾನ್ಯೇವ
ದಿವ್ಯಾಯುಧಾನಿ ಪುನರ್ವೈಕುಣ್ಠಂ ಲೋಕಮಿತಾನಿ ಭೂಯಃ ।
ತದಾSವತೇರೂ ರೌಹಿಣೇಯಸ್ಯ ಚೈವಂ ಭಾರ್ಯ್ಯಾsಪ್ಯಾಯಾದ್ ವಾರುಣೀ ನಾಮ ಪೂರ್ವಾ ॥೧೬.೧೦ ॥
ಹಿಂದೆ ಜರಾಸಂಧನೊಡನೆ ನಡೆದಾಗ ಯುದ್ಧ,
ದೇವನ ದಿವ್ಯಾಯುಧಗಳು ಇದ್ದವವು ಸನ್ನದ್ಧ.
ಯುದ್ಧಾನಂತರ ಸೇರಿದ್ದವು ಮರಳಿ ವೈಕುಂಠಲೋಕ,
ಮತ್ತೆ ಈಗ ಇಳಿದುಬಂದವು ಕೃಷ್ಣ ಬಲರಾಮರ ಪಕ್ಕ.
ಹಿಂದೆ ಬಲರಾಮನ ಪತ್ನಿಯಾಗಿದ್ದ ವಾರುಣಿ,
ಮತ್ತೆ ಇಳಿದುಬಂದು ಸೇರಿದಳು ತಾನು ಧರಣಿ.
ಸೈವಾಪರಂ ರೂಪಮಾಸ್ಥಾಯ
ಚಾsಗಾಚ್ಛ್ರೀರಿತ್ಯಾಖ್ಯಂ
ಸೇನ್ದಿರಾವೇಶಮಗ್ರ್ಯಮ್ ।
ಕಾನ್ತಿಶ್ಚಾsಗಾತ್ ತಸ್ಯ ಸೋಮಸ್ಯ ಚಾನ್ಯಾ ಭಾರ್ಯ್ಯಾ ದ್ವಯೋಃ ಪೂರ್ವತನಾ ಸುರೂಪಾ
॥೧೬.೧೧ ॥
ಆ ವಾರುಣಿಗೆ ಶ್ರೀ ಎಂಬ ಹೆಸರು ಲಕ್ಷ್ಮಿಯ ಆವೇಶ,
ರಾಮಸತಿ ಕಾಂತಿಯೆಂಬುವಳಿಗೂ ಆಯಿತು ಭೂಸ್ಪರ್ಶ.
ಸೋಮನ ಹೆಂಡತಿಯ ಹೆಸರು ಕೂಡಾ ಕಾಂತಿ, ಇಬ್ಬರಲಿ ರಾಮಸತಿ ಜ್ಯೇಷ್ಠ ಮತ್ತು ಸೌಂದರ್ಯವತಿ.
ತಾಭಿ ರಾಮೋ ಮುಮುದೇ
ತತ್ರ ತಿಷ್ಠಞ್ಛಶಾಙ್ಕಪೂಗೋದ್ರಿಕ್ತಕಾನ್ತಿಃ ಸುಧಾಮಾ ।
ತಸ್ಯಾ ವಾರುಣ್ಯಾಃ
ಪ್ರತಿಮಾ ಪೇಯರೂಪಾ ಕಾದಮ್ಬರೀ ವಾರುಣೀ ತಾಂ ಪಪೌ ಸಃ ॥೧೬.೧೨ ॥
ವಾರುಣಿ ಶ್ರೀ ಕಾಂತಿಯರೊಡನೆ ಹುಣ್ಣಿಮೆಕಾಂತಿಗಿಂತ ಮಿಗಿಲಾದ ಕಾಂತಿಯ
ಬಲರಾಮ ಆನಂದಿಸಿದ,
ವಾರುಣಿಯ ಪ್ರತೀಕವಾದ ಪೇಯರೂಪದಲ್ಲಿದ್ದ ಕಾದಂಬರಿ ಎಂಬ ಮದ್ಯವ(ವಾರುಣಿಯ)ಸೇವಿಸಿದ.
No comments:
Post a Comment
ಗೋ-ಕುಲ Go-Kula