Saturday 7 March 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 16: 20 - 27


ಜರಾಸುತೋ ರೌಹಿಣೇಯೇನ ಯುದ್ಧಂ ಚಿರಂ ಕೃತ್ವಾ ತನ್ಮುಸಲೇನ ಪೋಥಿತಃ ।
ವಿಮೋಹಿತಃ ಪ್ರಾಪ್ತಸಂಜ್ಞಶ್ಚಿರೇಣ ಕ್ರುದ್ಧೋ ಗದಾಂ ತದುರಸ್ಯಭ್ಯಪಾತಯತ್ ॥೧೬.೨೦ ॥
ನಡೆಯಿತು ಜರಾಸಂಧ ಬಲರಾಮರ ದೀರ್ಘ ಸೆಣೆಸಾಟ,
ಒನಕೆ ಪೆಟ್ಟಿನಿಂದ ಜರಾಸಂಧನಾಗ ಪ್ರಜ್ಞಾಹೀನ ಆದನೋಟ.
ಬಹಳ ಹೊತ್ತಿನ ನಂತರ ಸುಧಾರಿಸಿಕೊಂಡ ಜರಾಸಂಧ,
ಕೋಪದಿಂದ ತನ್ನ ಗದೆಯ ಬಲರಾಮನ ಮೇಲೆಸೆದ.


ತೇನಾsಹತಃ ಸುಭೃಶಂ ರೌಹಿಣೇಯಃ ಪಪಾತ ಮೂರ್ಛಾಭಿಗತಃ ಕ್ಷಣೇನ ।
ಅಜೇಯತ್ವಂ ತಸ್ಯ ದತ್ತಂ ಹಿ ಧಾತ್ರಾ ಪೂರ್ವಂ ಗೃಹೀತೋ ವಿಷ್ಣುನಾ ರಾಮಗೇನ ॥೧೬.೨೧ ॥
ಅವನಿಂದ ಹೊಡೆತ ತಿಂದ ಬಲರಾಮ ಮೂರ್ಛೆಹೋದ,
ಬ್ರಹ್ಮನಿಂದ ಅಜೇಯತ್ವ ವರ ಪಡೆದಿದ್ದ ಜರಾಸಂಧ.
ಹಿಂದೆ ಜರಾಸಂಧನ ಹಿಡಿದದ್ದು ಬಲರಾಮನೊಳಗಿದ್ದ,
ಆ ಭಗವಂತನದೇ ಆದ ಸಂಕರ್ಷಣನ ಶಕ್ತಿಯಿಂದ.

ತಥಾಕೃತೇ ಬಲಭದ್ರೇ ತು ಕೃಷ್ಣೋ ಗದಾಮಾದಾಯ ಸ್ವಾಮಗಾನ್ಮಾಗಧೇಶಮ್ ।
ತತಾಡ ಜತ್ರೌ ಸ ತಯಾsಭಿತಾಡಿತೋ ಜಗಾಮ ಗಾಂ ಮೂರ್ಚ್ಛಯಾsಭಿಪ್ಲುತಾಙ್ಗಃ ॥೧೬.೨೨ ॥
ಬಲರಾಮಗೆ ಬಲವಾಗಿ ಹೊಡೆತ ಕೊಟ್ಟಾಗ  ಜರಾಸಂಧ,
ಕೃಷ್ಣ ಕೌಮೋದಕಿ ಹಿಡಿದು ಜರಾಸಂಧನ ಮೇಲೇರಿ ಹೋದ.
ಆ ಗದೆಯಿಂದ ಜರಾಸಂಧನ ಹೆಗಲಸಂದಿಗೆ ಹೊಡೆದ,
ಜರಾಸಂಧ ಒದ್ದಾಡಿ ಮೂರ್ಛೆಹೊಂದಿ ನೆಲಕ್ಕೆ ಒರಗಿದ.

ಅಥೋತ್ತಸ್ಥೌ ರೌಹಿಣೇಯಃ ಸಹೈವ ಸಮುತ್ತಸ್ಥೌ ಮಾಗಧೋsಪ್ಯಗ್ರ್ಯವೀರ್ಯ್ಯಃ ।
ಕ್ರುದ್ಧೋ ಗೃಹೀತ್ವಾ ಮೌಲಿಮಸ್ಯಾsಶು ರಾಮೋ ವಧಾಯೋದ್ಯಚ್ಚನ್ಮುಸಲಂ ಬಾಹುಷಾಳೀ ॥೧೬.೨೩ ॥
ತದನಂತರ ಬಲರಾಮ ಮೇಲೆದ್ದ,
ಪರಾಕ್ರಮಿ ಜರಾಸಂಧನೂ ಎದ್ದ.
ಕೋಪದಿಂದ ಬಲರಾಮ ಜರಾಸಂಧನ ತಲೆಗೂದಲ ಹಿಡಿದ,
ಬಲವಂತ ಬಲರಾಮ ಜರಾಸಂಧನ ಕೊಲ್ಲಲು ಒನಕೆ ಹಿಡಿದ.

ಅಥಾಬ್ರವೀದ್ ವಾಯುರೇನಂ ನ ರಾಮ ತ್ವಯಾ ಹನ್ತುಂ ಶಕ್ಯತೇ ಮಾಗಾಧೋsಯಮ್ ।
ವೃಥಾ ನ ತೇ ಬಾಹುಬಲಂ ಪ್ರಯೋಜ್ಯಮಮೋಘಂ ತೇ ಯದ್ ಬಲಂ ತದ್ವದಸ್ತ್ರಮ್ ॥೧೬.೨೪
ಆನಂತರ ಮುಖ್ಯಪ್ರಾಣನಿಂದ ಬಲರಾಮಗೆ ಅಶರೀರವಾಣಿ ಸಂದೇಶ,
ನೀನವನ ಕೊಲ್ಲಲಾರೆ ನಿನ್ನ ಬಲ ಅಸ್ತ್ರ ವ್ಯರ್ಥ ಮಾಡಬೇಡೆಂದು ಆದೇಶ.

ಅನ್ಯೋ ಹನ್ತಾ ಬಲವಾನಸ್ಯ ಚೇತಿ ಶ್ರುತ್ವಾ ಯಯೌ ಬಲಭದ್ರೋ ವಿಮುಚ್ಯ ।
ಜರಾಸುತಂ ಪುನರುದ್ಯಚ್ಛಮಾನಂ ಜಘಾನ ಕೃಷ್ಣೋ ಗದಯಾ ಸ್ವಯೈವ ॥೧೬. ೨೫ ॥
ಇನ್ನೊಬ್ಬ ಬಲಿಷ್ಠ ಇವನನ್ನು ಕೊಲ್ಲುತ್ತಾನೆ ಎಂಬ ಮಾತು,
ಜರಾಸಂಧನ ಅಲ್ಲೇ ಬಿಟ್ಟು ಬಲರಾಮನ ಆಚೆ ಕಳಿಸಿತು.
ಮತ್ತೆ ಅವನತ್ತ ಧಾವಿಸುತ್ತಿದ್ದ ಜರಾಸಂಧ,
ಕೃಷ್ಣ ಕೌಮೋದಕಿಯಿಂದ ಅವನ ಹೊಡೆದ.

ತೇನಾsಹತಃ ಸ್ತ್ರಸ್ತಸಮಸ್ತಗಾತ್ರಃ ಪಪಾತ ಮೂರ್ಚ್ಛಾಭಿಗತಃ ಸ ರಾಜಾ ।
ಚಿರಾತ್ ಸಙ್ಜ್ಞಾಂ ಪ್ರಾಪ್ಯ ಚಾನ್ತರ್ಹಿತೋsಸೌ ಸಮ್ಪ್ರಾದ್ರವದ್ ಭೀತಭೀತಃ ಸಲಜ್ಜಃ ॥೧೬.೨೬ ॥
ಕೃಷ್ಣನ ಏಟು ತಿಂದ ಜರಾಸಂಧಗೆ ಇಲ್ಲದಾಯ್ತು ತ್ರಾಣ,
ಅವನೆಲ್ಲಾ ಇಂದ್ರಿಯಗಳೂ ಕಳಕೊಂಡವು ನಿಯಂತ್ರಣ.
ಮೂರ್ಛೆಹೋಗಿ ಕೆಳಗೆ ಬಿದ್ದ ಜರಾಸಂಧ,
ಎದ್ದು ಭಯ ಲಜ್ಜೆಯಿಂದ ತಲೆಮರೆಸಿ ಓಡಿದ.

ಯಯೌ ಶಿಷ್ಟೈ ರಾಜಭಿಃ ಸಂಯುತಶ್ಚ ಪುರಂ ಜೀವೇತ್ಯೇವ ಕೃಷ್ಣೇನ ಮುಕ್ತಃ ।
ಪುನರ್ಯ್ಯುದ್ಧಂ ಬಹುಶಃ ಕೇಶವೇನ ಕೃತ್ವಾ ಜಿತೋ ರಾಜಗಣೈಃ ಸಮೇತಃ ॥೧೬.೨೭ ॥
ಕೃಷ್ಣ ಅವನನ್ನು 'ಬದುಕಿಕೋ ಹೋಗು' ಎಂದು ಬಿಟ್ಟಿದ್ದ,
ಉಳಿದವರ ಕೂಡಿಕೊಂಡು ಜರಾಸಂಧ ಪಟ್ಟಣಕೆ ಹೋದ.

No comments:

Post a Comment

ಗೋ-ಕುಲ Go-Kula