Tuesday 10 March 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 01 - 05

॥ ಓಂ ॥
ಗತೇsಥ ಚೇದಿಪೇ ಸ್ವಕಂ ಪುರಂ ಜಾನಾರ್ದ್ದನೋsಶೃಣೋತ್ ।
ಮೈವ ರುಗ್ಮಿಣೀತಿ ಯೋದ್ಯತಾಂ ಸ್ವಯಮ್ಬರಾಯ ತಾಮ್ ॥೧೭.೦೧॥
ಈ ರೀತಿಯಾಗಿ ಚೇದಿರಾಜನಾದ ದಮಘೋಷ ತನ್ನ ಪಟ್ಟಣಕ್ಕೆ ತೆರಳಿದ,
ರುಗ್ಮಿಣಿ ಹೆಸರಿಂದವತರಿಸಿದ ರಮೆಯ ಸ್ವಯಂಬರದ  ಸುದ್ದಿ ಜನಾರ್ದನ ತಿಳಿದ.

ಸ ರುಗ್ಮಿನಾಮಕೋsಗ್ರಜಃ ಶ್ರಿಯೋ ದ್ವಿಷನ್ ರಮಾಪತಿಮ್ ।
ಹರೇಃ ಪ್ರದಾತುಮುದ್ಯತಾಂ ನ್ಯವಾರಯದ್ಧರಿಪ್ರಿಯಾಮ್ ॥೧೭.೦೨॥
ರುಗ್ಮಿ ಎಂಬ ಹೆಸರಿಂದ ಕರೆಯಲ್ಪಡುತ್ತಿದ್ದ ರುಗ್ಮಿಣಿಯ ಅಣ್ಣ,
ಹರಿದ್ವೇಷದಿಂದ ಕೃಷ್ಣಗವಳ ಕೊಡದಿರಲು ತಾನಾದ ಕಾರಣ.

ಪ್ರಘೋಷಿತೇ ಸ್ವಯಮ್ಬರೇsಥ ತೇನ ಮಾಗಧಾದಯಃ  ।
ಸಮೀಯುರುಗ್ರಪೌರುಷಾಃ ಸಸಾಲ್ವಪೌಣ್ಡ್ರಚೇದಿಪಾಃ ॥೧೭.೦೩॥
ಅತ್ತ ಹೀಗೆ ಆಗುತ್ತಿರಲು ರುಗ್ಮಿಣಿದೇವಿಯ ಸ್ವಯಂಬರದ ಘೋಷಣೆ,
ನಿಮಿತ್ತವಾಯಿತು ಜರಾಸಂಧ ಸಾಲ್ವ ಪೌಂಡ್ರ ಶಿಶುಪಾಲರ ಜಮಾವಣೆ.

ತದಾ ಜಗಾಮ ಕೇಶವೋ ಜವೇನ ಕುಣ್ಡಿನಂ ಪುರಮ್ ।
ಸ್ಮೃತೋsಥ ತೇನ ಪಕ್ಷಿರಾಟ್ ಸಮಾಜಗಾಮ ಕೇಶವಮ್ ॥೧೭.೦೪॥

ಆಗ ಕೃಷ್ಣನಿಂದ ಸ್ಮರಿಸಲ್ಪಟ್ಟ ಗರುಡದೇವನ ಆಗಮನ.
ಗರುಡನೇರಿ ಕುಂಡಿನದೇಶದತ್ತ ಶ್ರೀಕೃಷ್ಣನ ಪ್ರಯಾಣ.

ಪತತ್ರವಾಯುನಾsಸ್ಯ ತೇ ನರೇಶ್ವರಾಃ ಪ್ರಪಾತಿತಾಃ ।
ಯದೇದೃಶಂ ಪತತ್ರಿಣೋ ಬಲಂ ಹರೇಃ ಕಿಮುಚ್ಯತೇ ॥೧೭.೦೫॥
ಗರುಡನ ರೆಕ್ಕೆಯ ಗಾಳಿಯ ಬಲ,
ಜರಾಸಂಧಾದಿಗಳು ಕಚ್ಚಿದರು ನೆಲ.
ಪಕ್ಷಿಯಾದ ಗರುಡನ ಬಲವೇ ಹೀಗೆ,
ಅದರೊಡೆಯ ಹರಿಯ ಬಲ ಇನ್ಹೇಗೆ. 

No comments:

Post a Comment

ಗೋ-ಕುಲ Go-Kula