Tuesday 10 March 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 06 - 10

ಕಿಮತ್ರ ನಃ ಕೃತಂ ಭವೇತ್ ಸುಖಾಯ ಹೀತಿ ತೇsಭ್ರುವನ್ ।
ಅಥಾಬ್ರವೀಜ್ಜರಾಸುತೋ ಜಯೀ ಪಯೋಬ್ಧಿಮನ್ದಿರಃ ।
ಕಿಲೈಷ ಪಕ್ಷಿವಾಹನೋ ಯತಶ್ಚ ನಾನ್ಯಥಾ ಭವೇತ್ ॥೧೭.೦೬॥
ಶ್ರೀಕೃಷ್ಣ ಗರುಡವಾಹನನಾಗಿ ಬಂದ ಸುದ್ದಿ ತಿಳಿದ ಆ  ರಾಜವೃಂದ,
ಚರ್ಚಿಸುತ್ತ ಕೇಳುತ್ತಾರೆ ಏನುಮಾಡಿದರೆ ನಮಗೆ ಹಿತ ಜರಾಸಂಧ.
ಜರಾಸಂಧ ನುಡಿದ -ಕ್ಷೀರಸಾಗರಶಾಯಿ ಉತ್ಕೃಷ್ಟ ಉನ್ನತ,
ಅವನು ಪಕ್ಷಿವಾಹನನಾಗಿ ಹೀಗೆ ಬಂದಿರುವುದೇ ಸಂಕೇತ.
ಆ ಹಾಲುಗಡಲವಾಸಿ ಗರುಡವಾಹನ,
ಅವನೇ ಇವನು- ಶ್ರೀಮನ್ನಾರಾಯಣ.

ಜಿತಾ ವಯಂ ಚ ಸರ್ವಶೋsಮುನೈಕಲೇನ ಸಂಯುಗೇ ।
ಅನೇಕಶೋ ನ ಸಙ್ಗತೈರ್ಜ್ಜಿತಃ ಕದಾಚಿದೇಷಹಿ ॥೧೭.೦೭॥
ಅಮುಷ್ಯ ಚಾಗ್ರಜಃ ಪುರಾ ನಿಹನ್ತುಮುದ್ಯತೋ ಹಿ ಮಾಮ್ ।
ಅದೃಶ್ಯವಾಕ್ಯತೋsತ್ಯಜತ್ ಪ್ರತಾಡನಾತ್ ಸುಪೀಡಿತಮ್ ॥೧೭.೦೮॥
ಇವನು ಏಕಾಂಗಿಯಾಗಿದ್ದಾಗಲೂ ಕೂಡಾ,
ನಮಗೆ ಪ್ರತಿಬಾರಿ ತೋರಿದ್ದಾನೆ ಸೋಲಿನ ಜಾಡ.
ನಾವೆಲ್ಲಾ ಒಟ್ಟಾಗಿ ಮಾಡಿದರೂ ಹೋರಾಟ,
ಅವನದೆಂದೂ ಸೋಲಿರದ ಗೆಲುವಿನಾಟ.

ಕಿಮಸ್ಯ ತೂಚ್ಯತೇ ಬಲಂ ವಯಂ ತೃಣೋಪಮಾಃ ಕೃತಾಃ ।
ಸಮಸ್ತಶೋ ಮೃಧೇಮೃಧೇ ಹಿ ಯೇನ ಚಾಕ್ಷತೇನ ಹಾ ॥೧೭.೦೯॥
ಇನ್ನು ಇವನ ಬಲದ ಬಗ್ಗೆ ವಿಶೇಷವಾಗಿ  ಹೇಳುವುದೇನು,
ಅವನೆದುರು ನಾವು ಹುಲ್ಲಿಗಿಂತ ಕಡಿಮೆಯಾಗಿಲ್ಲವೇನು.
ಪ್ರತಿಯುದ್ಧದಲ್ಲೂ ಅವನಿಗಾಗಿಲ್ಲ ನಾಶ,
ಗಾಯವೂಗೊಂಡಿಲ್ಲ ಅವನು ಲವಲೇಶ.

ಕಿಮತ್ರ ಕುರ್ವತಾಂ ಸುಖಂ ಭವೇದುದೀರ್ಣ್ಣಸಙ್ಕಟೇ ।
ಇತಿ ಬ್ರುವನ್ನವಾಙ್ ಮುಖಂ ನೃಪಶ್ಚಕಾರ ವಿಚ್ಛವಿ ॥೧೭.೧೦॥
ಮಹಾಸಂಕಟ ಪ್ರಾಪ್ತವಾಗಿರುವ ಇಂಥಾ ಪರಿಸ್ಥಿತಿಯಲ್ಲಿ,
ಸುಖ ಹೇಗೆಂದು ಕಳೆಗುಂದಿದ ತಲೆ ತಗ್ಗಿಸಿದ ಜರಾಸಂಧನಲ್ಲಿ.


No comments:

Post a Comment

ಗೋ-ಕುಲ Go-Kula