ಷಣ್ಮಾಸೇsತಿಗತೇSಪಶ್ಯನ್ಮೂಕಂ
ನಾಮಾಸುರಂ ಗಿರೌ ।
ವರಾಹರೂಪಮಾಯಾತಂ
ವಧಾರ್ತ್ಥಂ ಫಲ್ಗುನಸ್ಯ ಚ ॥೨೨.೧೩೪॥
ಆರು ತಿಂಗಳು ಕಾಲವಾದ ಮೇಲೆ ಆ ಬೆಟ್ಟದಲ್ಲಿ ಹಂದಿಯೊಂದು ಕಂಡಿತ್ತು,
ಅದು ಮೂಕನೆಂಬ ಅಸುರನಾಗಿದ್ದು ಅರ್ಜುನನ ವಧಿಸಲು ಬಂದಿತ್ತು
ತಂ ಜ್ಞಾತ್ವಾ ಫಲ್ಗುನೋ
ವೀರಃ ಸಜ್ಯಂ ಕೃತ್ವಾ ತು ಗಾಣ್ಡಿವಮ್ ।
ಚಿಕ್ಷೇಪ
ವಜ್ರಸಮಿತಾಂಸ್ತತ್ಕಾಯೇ ಸಾಯಕಾನ್ ಬಹೂನ್ ॥೨೨.೧೩೫॥
ಶೂರ ಅರ್ಜುನ ಮೂಕಾಸುರ ಬಂದಿದ್ದನ್ನು ತಿಳಿದ,
ತನ್ನ ಗಾಂಡೀವ ಧನುಸ್ಸನ್ನು ಸಜ್ಜುಗೊಳಿಸಿದ,
ವಜ್ರಾಯುಧ ಸಮ ಬಾಣಗಳವನ ಮೇಲೆಸೆದ.
ಕಿರಾತರೂಪಸ್ತಮನು
ಸಭಾರ್ಯ್ಯಶ್ಚ ತ್ರಿಯಮ್ಬಕಃ ।
ಸ ಮಮಾರ ಹತಸ್ತಾಭ್ಯಾಮ್
ದಾನವಃ ಪಾಪಚೇತನಃ ॥೨೨.೧೩೬॥
ಶಿವನೂ ಪಾರ್ವತೀ ಸಮೇತ ಬೇಡವೇಷದಿಂದ ಅಲ್ಲಿದ್ದ,
ರುದ್ರದೇವನೂ ಅಸುರನ ಮೇಲೆ ಬಹಳ ಬಾಣ ಎಸೆದ.
ಎರಡೂ ಕಡೆಯಿಂದ ಹೊಡೆಸಿಕೊಂಡ ಅಸುರ ಉಸಿರೆಳೆದ.
ತೇನೋಕ್ತೋSಸೌ ಮಯೈವಾಯಂ ವರಾಹೋSನುಗತೋSದ್ಯ ಹಿ ।
ತಮವಿದ್ಧ್ಯೋ ಯತಸ್ತ್ವಂ
ಹಿ ತದ್ ಯುದ್ಧ್ಯಸ್ವ ಮಯಾ ಸಹ ॥೨೨.೧೩೭॥
ನನ್ನ ಬೇಟೆಯಾಗಿತ್ತು ಆ ವರಾಹ, ನೀನದನ್ನ
ಹೊಡೆದದ್ಯಾವ ನ್ಯಾಯ.
ನನ್ನೊಡನೆ ನೀನು ಮಾಡೀಗ ಯುದ್ಧ, ಬೇಡ ವೇಷದ ಶಿವನು
ಹೀಗೆ ನುಡಿದ.
ಇತ್ಯುಕ್ತಃ ಫಲ್ಗುನಃ
ಪ್ರಾಹ ತಿಷ್ಠತಿಷ್ಠ ನ ಮೋಕ್ಷ್ಯಸೇ ।
ಇತ್ಯುಕ್ತ್ವಾ ತಾವುಭೌ
ಯುದ್ಧಂ ಚಕ್ರತುಃ ಪುರುಷರ್ಷಭೌ ॥೨೨.೧೩೮॥
ಅರ್ಜುನ : 'ನಿಲ್ಲು ನಿಲ್ಲು
ನಿನ್ನನ್ನು ಬಿಡುವುದಿಲ್ಲ' ಎಂದ,
ಪ್ರಾರಂಭವಾಯಿತಾಗ ಮಹಾಪುರುಷರ ಮಧ್ಯೆ ಯುದ್ಧ.
ತತ್ರಾಖಿಲಾನಿ
ಚಾಸ್ತ್ರಾಣಿ ಫಲ್ಗುನಸ್ಯಾಗ್ರಸಚ್ಛಿವಃ ।
ತತೋSರ್ಜ್ಜುನಸ್ತು ಗಾಣ್ಡೀವಂ ಸಮಾದಾಯಾಭ್ಯತಾಡಯತ್ ॥೨೨.೧೩೯॥
ಆಗ ಅರ್ಜುನನ ಎಲ್ಲಾ ಬಾಣಗಳನ್ನು ಶಿವ ನುಂಗಿದ,
ಆನಂತರ ಅರ್ಜುನ ಗಾಂಡೀವವೆತ್ತಿ ಶಿವನ ಹೊಡೆದ.
ತದಪ್ಯಗ್ರಸದೇವಾಸೌ
ಪ್ರಹಸನ್ ಗಿರಿಶಸ್ತದಾ ।
ಬಾಹುಯುದ್ಧಂ
ತತಸ್ತ್ವಾಸೀತ್ ತಯೋಃ ಪುರುಷಸಿಂಹಯೋಃ ॥೨೨.೧೪೦॥
ನಸುನಗುತ್ತಾ ಸದಾಶಿವ ಗಾಂಡೀವವನ್ನೂ ನುಂಗಿದ,
ನಂತರ ನಡೆಯಿತು ಪುರುಷಸಿಂಹರ ಮಧ್ಯೆ ಬಾಹುಯುದ್ಧ.
ಪಿಣ್ಡೀಕೃತ್ಯ ತತೋ
ರುದ್ರಶ್ಚಿಕ್ಷೇಪಾಥ ಧನಞ್ಜಯಮ್ ।
ಮೂರ್ಚ್ಛಾಮವಾಪ ಮಹತೀಂ
ಫಲ್ಗುನೋ ರುದ್ರಪೀಡಿತಃ ॥೨೨.೧೪೧॥
ಬಾಹುಯುದ್ಧದಿ ಶಿವ ಅರ್ಜುನನ ಮುದ್ದೆ ಮಾಡಿ ಎಸೆದ,
ನೋವಿಗೊಳಗಾದ ಅರ್ಜುನ ಗಾಢವಾಗಿ ಮೂರ್ಛೆ ಹೋದ.
No comments:
Post a Comment
ಗೋ-ಕುಲ Go-Kula