ಪ್ರಾಧಾನ್ಯತೋಧಾನ್ಯತೋ
ಧರ್ಮ್ಮವಿಶೇಷ ಏಷ ಸಾಮಾನ್ಯತಃ ಸರ್ವಮೇವಾಖಿಲಾನಾಮ್ ।
ವಯಂ ಹಿ ದೇವಾಸ್ತೇನ
ಸರ್ವಂ ಹಿ ಕರ್ಮ್ಮ ಪ್ರಾಯೇಣ ನೋ ಧರ್ಮ್ಮತಾಮೇತಿ ಶಶ್ವತ್ ॥೨೨.೯೬॥
ಇವು ಸ್ಥೂಲವಾಗಿ ಹೇಳಿರುವ ಪ್ರಧಾನವಾದ ಧರ್ಮ,
ಸಾಮಾನ್ಯ ಧರ್ಮಗಳು ಎಲ್ಲರಲ್ಲಿರುತ್ತವೆಂಬ ಮರ್ಮ.
ವಿಶೇಷ ದೇವತೆಗಳಾದ ನಮಗಿದೆ ಎಲ್ಲಾ ಧರ್ಮ,
ಧರ್ಮಸ್ಥಾಪನೆಗಾಗಿ ಮಾಡಬೇಕಿದೆ ಯುದ್ಧಕರ್ಮ.
ಏತೈರ್ದ್ಧರ್ಮ್ಮೈರ್ವಿಷ್ಣುನಾ
ಪೂರ್ವಕ್ಲ್ ಪ್ತೈಃ ಸರ್ವೈರ್ವರ್ಣ್ಣೈರ್ವಿಷ್ಣುರೇವಾಭಿಪೂಜ್ಯಃ ।
ತದ್ಭಕ್ತಿರೇವಾಖಿಲಾನಾಂ
ಚ ಧರ್ಮ್ಮೋ ಯಥಾಯೋಗ್ಯಂ ಜ್ಞಾನಮಸ್ಯಾಪಿ ಪೂಜಾ ॥೨೨.೯೭॥
ಎಲ್ಲಾ ವರ್ಣಗಳ ಕರ್ಮ ಕ್ರಿಯೆಗಳಿಂದ ಪೂಜಿತನಾಗಬೇಕು ನಾರಾಯಣ,
ಯೋಗ್ಯತಾನುಸಾರವಾಗಿ ಎಲ್ಲರೂ ದೈವವ ತಿಳಿದುಕೊಳ್ಳಲೇ ಬೇಕಾದ ಕಾರಣ.
ಪಿತಾ ಗುರುಃ ಪರಮಂ
ದೈವತಂ ಚ ವಿಷ್ಣುಃ ಸರ್ವೇಷಾಂ ತೇನ ಪೂಜ್ಯಃ ಸ ಏವ ।
ತದ್ಭಕ್ತತ್ವಾದ್
ದೇವತಾಶ್ಚಾಭಿಪೂಜ್ಯಾ ವಿಶೇಷತಸ್ತೇಷು ಯೇSತ್ಯನ್ತಭಕ್ತಾಃ
॥೨೨.೯೮॥
ಭಗವಂತ ಎಲ್ಲರ ತಂದೆ, ಉಪದೇಶಕ, ಜ್ಞಾನಪ್ರದ, ಉತ್ಕೃಷ್ಟ ಸತ್ವ,
ತಾರತಮ್ಯೋಕ್ತ ಭಕ್ತ ದೇವತೆಗಳನ್ನು ದೇವರನ್ನೂ ಪೂಜಿಸಬೇಕೆಂದು ತತ್ವ.
ಎಲ್ಲವೂ ಭಕ್ತಿಯ ಮಟ್ಟದ ತಾರತಮ್ಯದಿಂದ ರೂಪಿತ,
ಭಗವದ್ಭಕ್ತಿ ಪ್ರಮುಖವೆಂಬುದು ಸಕಲ ಶಾಸ್ತ್ರ ಸಮ್ಮತ.
ಸಮ್ಪೂಜಿತೋ ವಾಸುದೇವಃ ಸ
ಮುಕ್ತಿಂ ದದ್ಯಾದೇವಾಪೂಜಿತೋ ದುಃಖಮೇವ ।
ಸ್ವತನ್ತ್ರತ್ವಾತ್
ಸುಖದುಃಖಪ್ರದೋSಸೌ ನಾನ್ಯಃ
ಸ್ವತಸ್ತದ್ವಶಾ ಯತ್ ಸಮಸ್ತಾಃ ॥೨೨.೯೯॥
ಪೂಜಿತ ವಾಸುದೇವನಿಂದ ಮುಕ್ತಿ ಪ್ರದಾನ,
ಪೂಜಿಸದಿದ್ದವರಿಗೆ ಲಭ್ಯ ದುಃಖದ ವರದಾನ.
ಸ್ವತಂತ್ರನಾದವಗೆ ಮಾತ್ರ ಸುಖ ದುಃಖ ನೀಡುವ ಗುಣ,
ನಿಶ್ಚಯವಾಗಿದೆ ಅದು ಎಲ್ಲರೂ ಭಗವಂತನ ಅಧೀನ.
ಸ್ವತನ್ತ್ರತ್ವಾತ್
ಸುಖಸಜ್ಜ್ಞಾನಶಕ್ತಿಪೂರ್ವೈರ್ಗ್ಗುಣೈಃ ಪೂರ್ಣ್ಣ ಏಷೋSಖಿಲೈಶ್ಚ ।
ಸ್ವತನ್ತ್ರತ್ವಾತ್ ಸರ್ವದೋಷೋಜ್ಜ್ಞಿತಶ್ಚ ನಿಸ್ಸೀಮಶಕ್ತಿರ್ಹಿ ಯತಃ
ಸ್ವತನ್ತ್ರಃ ॥೨೨.೧೦೦॥
ದೇವರು ಸ್ವತಂತ್ರನಾದ್ದರಿಂದ ಸುಖ ಜ್ಞಾನ ಶಕ್ತಿ ಗುಣಪೂರ್ಣ,
ಸರ್ವದೋಷವರ್ಜಿತನಾಗಿರುವುದಕ್ಕೂ ಸ್ವಾತಂತ್ರವೇ ಕಾರಣ.
ಸ್ವತಂತ್ರನಾಗಿರುವುದರಿಂದಲೇ ಅವನಿಗೆ ಎಣೆಯಿರದ ಬಲ,
ಸ್ವಾತಂತ್ರ್ಯ ಎನ್ನುವುದೊಂದೇ ಸಕಲ ಗುಣಗಳ ಮೂಲ.
ದೋಷಾಸ್ಪೃಷ್ಟೌ
ಗುಣಪೂರ್ತ್ತೌ ಚ ಶಕ್ತಿರ್ನ್ನಿಸ್ಸೀಮತ್ವಾದ್ ವಿದ್ಯತೇ ತಸ್ಯ ಯಸ್ಮಾತ್ ।
ಏವಂ ಗುಣೈರಖಿಲೈಶ್ಚಾಪಿ
ಪೂರ್ಣ್ಣೋ ನಾರಾಯಣಃ ಪೂಜ್ಯತಮಃ ಸ್ವಧರ್ಮ್ಮೈಃ ॥೨೨.೧೦೧॥
ದೋಷರಹಿತ್ವ ಗುಣಪೂರ್ಣತೆಯಲ್ಲಿದೆ ಭಗವಂತನ ಶಕ್ತಿ,
ನಾರಾಯಣ ಸಕಲ ಗುಣಪೂರ್ಣ ಎಂಬುದೇ ಮೂಲ ನೀತಿ,
ಇಂತಹಾ ನಾರಾಯಣಗೆ ಅವರವರ ಸ್ವಧರ್ಮದಿ ಪೂಜೆ ಪ್ರೀತಿ.
ಅಸ್ಮಾಕಂ ಯತ್ ತೇನ
ನಾತಿಕ್ಷಮೈವ ಧರ್ಮ್ಮೋ ದುಷ್ಟಾನಾಂ ವಾರಣಂ ಹ್ಯೇವ ಕಾರ್ಯ್ಯಮ್ ।
ಹನ್ಯಾದ್ ದುಷ್ಟಾನ್ ಯಃ
ಕ್ಷತ್ರಿಯಃ ಕ್ಷತ್ರಿಯಾಂಶ್ಚ ವಿಶೇಷತೋ ಯುದ್ಧಗತಾನ್ ಸ್ಮರನ್ ಹರಿಮ್ ॥೨೨.೧೦೨॥
ನಮ್ಮ ಧರ್ಮವದು ದುರ್ಜನರ(ತಡೆ)ವಿರೋಧ,
ತೋರುವಂತಿಲ್ಲ ಕ್ಷಮೆ ಸಹನೆಗಳನ್ನು ಅಗಾಧ.
ಮಾಡಬೇಕು ಕ್ಷತ್ರಿಯ ದುಷ್ಟ ಕ್ಷತ್ರಿಯರ ಸಂಹಾರ,
ಪೂಜೆಯಂತೆ ಮಾಡಬೇಕು ದೈವಸ್ಮರಣೆಯ ದ್ವಾರ.
ಸ್ವಭಾಹುವೀರ್ಯ್ಯೇಣ ಚ
ತಸ್ಯ ಬಾಹೂ ಚೈತನ್ಯಮಾತ್ರೌ ಭವತಃ ಸದೇಹೌ ।
ಪಾಪಾಧಿಕಾಂಶ್ಚೈವ
ಬಲಾಧಿಕಾಂಶ್ಚ ಹತ್ವಾ ಮುಕ್ತಾವಧಿಕಾSSನನ್ದವೃದ್ಧಿಃ
॥೨೨.೧೦೩॥
ಬಾಹುಬಲದಿಂದ ಪಾಪಿಷ್ಠ ಬಲಿಷ್ಠರ ಸಂಹಾರ -ಸ್ವಧರ್ಮ ಪಾಲನೆ,
ಮುಕ್ತಿಯಲ್ಲಿ ಅವನಿ(ರಿ)ಗೆ ಚೈತನ್ಯಬಾಹುಗಳ ಆನಂದದ ಮಣೆ.
ಪ್ರೀತಿಶ್ಚ ವಿಷ್ಣೋಃ
ಪರಮೈವ ತತ್ರ ತಸ್ಮಾದ್ಧನ್ತವ್ಯಾಃ ಪಾಪಿನಃ ಸರ್ವಥೈವ ।
ಯೇ ತ್ವಕ್ಷಧೂರ್ತ್ತಾ
ಗ್ರಹಣಂ ಗತಾ ವಾ ಪಾಪಾಸ್ತೇSನ್ಯೈರ್ಘಾತನೀಯಾಃ
ಸ್ವದೋರ್ಭ್ಯಾಮ್ ॥೨೨.೧೦೪॥
ಪಾಪಾತ್ಮ ಬಲಿಷ್ಠರನ್ನು ಕೊಂದರೆ ಭಗವಂತಗೆ ಪ್ರೀತಿ,
ಹಾಗಾಗಿ ಅಂಥವರನ್ನು ಕೊಲ್ಲಲೇಬೇಕೆಂಬುದು ನೀತಿ.
ಕಪಟಿ ಜೂಜುಕೋರರು ಸೆರೆಯಾಳುಗಳನ್ನು ಬೇರೊಬ್ಬರಿಂದ ಕೊಲ್ಲಿಸಬೇಕು,
ರಣರಂಗದಲ್ಲಿ ಎದುರಾಗುವ ದುಷ್ಟ ದುರುಳರನ್ನು ತಾವೇ (ನೇ)ಕೊಲ್ಲಬೇಕು.
ರಾಜಾನಂ ವಾ ರಾಜಪುತ್ರಂ
ತಥೈವ ರಾಜಾನುಜಂ ವಾSಭಿಯಾತಂ ನಿಹನ್ಯಾತ್ ।
ರಾಜ್ಞಃ ಪುತ್ರೋSಪ್ಯಕೃತೋದ್ವಾಹಕೋ ಯಃ ಸ ಘಾತನೀಯೋ ನ ಸ್ವಯಂ ವದ್ಧ್ಯ ಏವ ॥೨೨.೧೦೫॥
ರಾಜ,
ರಾಜಕುಮಾರ, ರಾಜ ಸೋದರ
ಎದುರಾದಾಗ ಕೊಲ್ಲಬೇಕು,
ಅವಿವಾಹಿತ ರಾಜಕುಮಾರ ಎದುರಾದರೆ ಗಾಯಗೊಳಿಸಿ ಬಿಡಬೇಕು.
ಹೀಗೆ ಯಾರನ್ನು ಕೊಲ್ಲಬೇಕು-ಕೊಲ್ಲಬಾರದೆಂಬ ಧರ್ಮ ಪಾಲಿಸಬೇಕು.
ಕ್ರೂರಂ ಚಾನ್ಯದ್
ಧರ್ಮ್ಮಯುಕ್ತಂ ಪರೈಸ್ತತ್ ಪ್ರಸಾಧನೀಯಂ ಕ್ಷತ್ರಿಯೈರ್ನ್ನ ಸ್ವಕಾರ್ಯ್ಯಮ್ ।
ಏವಂ ಧರ್ಮ್ಮೋ ವಿಹಿತೋ
ವೇದ ಏವ ವಾಕ್ಯಂ ವಿಷ್ಣೋಃ ಪಞ್ಚರಾತ್ರೇಷು ತಾದೃಕ್ ॥೨೨.೧೦೬॥
ಧರ್ಮಸಮ್ಮತವಾಗಿದ್ದರೆ ಕ್ರೂರ ಕಾರ್ಯ,
ಬೇರೊಬ್ಬರಿಂದ ಮಾಡಿಸುವುದು ಅನಿವಾರ್ಯ.
ಯಾವ್ಯಾವುದು ಕ್ಷತ್ರಿಯರಿಗೆ ನಿಷಿದ್ಧ,
ಅದನ್ನು ಮಾಡಬಾರದೆಂಬುದು ಸಿದ್ಧ.
ಇದು ವೇದೋಕ್ತ ವಿಹಿತವಾದ ಧರ್ಮ,
ನಾರಾಯಣ ಪಂಚರಾತ್ರದಿ ಹೇಳಿದ ಮರ್ಮ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula