Wednesday, 30 January 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 199 - 201

ಯ ಉಗ್ರಸೇನಃ ಸುರಗಾಯಕಃ ಸ ಜಾತೋ ಯದುಷ್ವೇಷ ತಥಾಭಿಧೇಯಃ ।
ತವೈವ ಸೇವಾರ್ತ್ಥಮಮುಷ್ಯ ಪುತ್ರೋ ಜಾತೋsಸುರಃ ಕಾಲನೇಮಿಃ ಸ ಈಶ ॥೧೧.೧೯೯॥

ಉಗ್ರಸೇನನೆಂಬ ಹೆಸರಿನ ದೇವತೆಗಳ ಆ  ಹಾಡುಗಾರ,
ಅದೇ ಹೆಸರಿನಿಂದ ಯಾದವರಲ್ಲಿ ಮಾಡಿದ್ದಾನೆ ಅವತಾರ.
ಉಗ್ರಸೇನನ ಮಗನಾಗಿ ಹುಟ್ಟಿದ್ದಾನೆ ಕಾಲನೇಮಿ ಎಂಬಸುರ.

ಯಸ್ತ್ವತ್ಪ್ರಿಯಾರ್ತ್ಥಂ ನ ಹತೋ ಹಿ ವಾಯುನಾ ಭವತ್ಪ್ರಸಾದಾತ್ ಪರಮೀಶಿತಾsಪಿ ।
ಸ ಏಷ ಭೋಜೇಷು ಪುನಶ್ಚ ಜಾತೋ ವರಾದುಮೇಶಸ್ಯ ಪರೈರಜೇಯಃ ॥೧೧.೨೦೦॥

ನಿನ್ನ ಅನುಗ್ರಹದಿಂದ ಅತ್ಯಂತ ಸಮರ್ಥನಾಗಿರುವ ಮುಖ್ಯಪ್ರಾಣ
ನಿನ್ನ ಪ್ರೀತಿಗಾಗಿ ತೆಗೆಯಲಿಲ್ಲವೋ ಯಾರ ಉಸಿರು ಮತ್ತು ಪ್ರಾಣ.
ಅಂತಹಾ ಕಾಲನೇಮಿಯದು ಯಾದವರಲ್ಲಾಗಿದೆ ಹುಟ್ಟು,
ರುದ್ರವರಬಲದಿಂದ ಅವನದಾಗಿದೆ ಅಜೇಯತ್ವದ ಪಟ್ಟು.




ಸ ಔಗ್ರಸೇನೇ ಜನಿತೋsಸುರೇಣ ಕ್ಷೇತ್ರೇ ಹಿ ತದ್ರೂಪಧರೇಣ ಮಾಯಯಾ ।
ಗನ್ಧರ್ವಿಜೇನ ದ್ರಮಿಳೇನ ನಾಮ್ನಾ ಕಂಸೋ ಜಿತೋ ಯೇನ ವರಾಚ್ಛಚೀಪತಿಃ ॥೧೧.೨೦೧॥

ದ್ರಮಿಳನೆಂಬ ಅಸುರನಿಂದ ಉಗ್ರಸೇನನ ವೇಷಧಾರಣ,
ಅನೈತಿಕ ಸಮಾಗಮ ಆಯಿತು ಕಂಸನ ಹುಟ್ಟಿಗೆ ಕಾರಣ.
ದೈತ್ಯ ಕಂಸ ರುದ್ರವರಬಲದಿಂದ ಜಯಿಸಿದ್ದ ಶಚೀಪತಿಯನ್ನ. 
[Contributed by Shri Govind Magal]

Tuesday, 29 January 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 195 - 198

ತತೋsಸುರಾಸ್ತೇ ನಿಹತಾ ಅಶೇಷಾತ್ವಯಾ ತ್ರಿಭಾಗಾ ನಿಹತಾಶ್ಚತುರ್ತ್ಥಮ್ ।
ಜಘಾನ ವಾಯುಃ ಪುನರೇವ ಜಾತಾಸ್ತೇ ಭೂತಳೇ 
ಧರ್ಮ್ಮಬಲೋಪಪನ್ನಾಃ ॥೧೧.೧೯೫॥

ದೈತ್ಯ ಕಾಲನೇಮಿಯ ಸಂಹಾರವಾದ ಆನಂತರ,
ಅಸುರರ ಮೂರು ಭಾಗ ನಿನ್ನಿಂದಾಯ್ತು ಸಂಹಾರ.
ಮುಖ್ಯಪ್ರಾಣ ಮುಗಿಸಿದ ಉಳಿದೊಂದು ಭಾಗದ ವ್ಯಾಪಾರ,
ಪಾರಂಪರಿಕ ಧರ್ಮಬಲದಿ ಭುವಿಯಲ್ಲಿ ಹುಟ್ಟಿದರು  ಆಗಿ ಭೂಭಾರ.

ರಾಜ್ಞಾಂ ಮಹಾವಂಶಸುಜನ್ಮನಾಂ ತು ತೇಷಾಮಭೂದ್ ಧರ್ಮ್ಮಮತಿರ್ವಿಪಾಪಾ ।
ಶಿಕ್ಷಾಮವಾಪ್ಯ ದ್ವಿಜಪುಙ್ಗವಾನಾಂ ತ್ವದ್ಭಕ್ತಿರಪ್ಯೇಷು ಹಿ ಕಾಚನ ಸ್ಯಾತ್ ॥೧೧.೧೯೬॥

ಭಾಗವತರಾದ ದೊಡ್ಡ ರಾಜವಂಶದಲ್ಲಿ ಆ ದೈತ್ಯರ ಹುಟ್ಟು,
ಪಾಪರಹಿತ ಧರ್ಮಪ್ರಜ್ಞೆ ಅವರಲ್ಲಿ ಬೆಳೆಯುತ್ತಿರುವ ಗುಟ್ಟು.
ಶ್ರೇಷ್ಠಬ್ರಾಹ್ಮಣರ ಪ್ರಭಾವದಿ ಭಕ್ತಿಅಂಶ ಹುಟ್ಟಿರಲೂ ಉಂಟು.

ತ್ವದ್ಭಕ್ತಿಲೇಶಾಭಿಯುತಃ ಸುಕರ್ಮ್ಮಾ ವ್ರಜೇನ್ನ ಪಾಪಾಂ ತು ಗತಿಂ ಕಥಞ್ಚಿತ್ ।
ದೈತ್ಯೇಶ್ವರಾಣಾಂ ಚ ತಮೋsನ್ಧಮೇವ ತ್ವಯೈವ ಕ್ಲೃಪ್ತಂ ನನು 
ಸತ್ಯಕಾಮ ॥೧೧.೧೯೭॥

ನಿನ್ನಲ್ಲಿ ಲೇಶಭಕ್ತಿಯ ಹೊಂದಿ ಸತ್ಕರ್ಮ ಮಾಡಿದವ ಎಂದೂ ನರಕ ಹೊಂದಲಾರ,
ಹೇ ಸತ್ಯಕಾಮ ಸತ್ಯಸಂಕಲ್ಪ ಮಹಾದೈತ್ಯರಿಗೆ ಅಂಧಂತಮಸ್ಸೆಂದು ನಿಂದೇ ನಿರ್ಧಾರ.

ಧರ್ಮಸ್ಯ ಮಿತ್ಥ್ಯಾತ್ವಭಯಾದ್ ವಯಂ ತ್ವಾಮಥಾಪಿವಾ ದೈತ್ಯಶುಭಾಪ್ತಿಭೀಷಾ ।
ಸಮ್ಪ್ರಾರ್ತ್ಥಯಾಮೋ ದಿತಿಜಾನ್ ಸುಕರ್ಮ್ಮಣಸ್ತ್ವದ್ಭಕ್ತಿತಶ್ಚ್ಯಾವಯಿತುಂ ಚ 
ಶೀಘ್ರಮ್ ॥೧೧.೧೯೮॥

ಪುಣ್ಯಕರ್ಮ ವ್ಯರ್ಥವಾದೀತು ಎಂಬುದು ನಮ್ಮ ಭಯ,
ದೈತ್ಯರಿಗೆ ಹೇಗೆ ಸದ್ಗತಿಯಾದೀತು ಎಂಬ ದ್ವಂದ್ವದ ಭಾವ.
ಧರ್ಮ ವೇದವಾಕ್ಯ ಎಂದೆಂದೂ ಆಗಬಾರದಲ್ಲವೇ ಸುಳ್ಳು,
ದೈತ್ಯರನ್ನು ಸುಕರ್ಮ ಭಕ್ತಿಯಿಂದ ವಿಮುಖರಾಗಿಸಿ ತಳ್ಳು. 
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 189 - 194

ತಸ್ಮಿನ್ ಹತೇ ದಾನವಲೋಕಪಾಲೇ ದಿತೇಃ ಸುತಾ ದುದ್ರುವುರಿನ್ದ್ರಭೀಷಿತಾಃ ।
ತಾನ್ ವಿಪ್ರಚಿತ್ತಿರ್ವಿನಿವಾರ್ಯ್ಯ ಧನ್ವೀ ಸಸಾರ ಶಕ್ರಪ್ರಮುಖಾನ್ ಸುರೋತ್ತಮಾನ್ ॥೧೧.೧೮೯॥

ಇಂದ್ರನಿಂದ ಕೊನೆಗೊಳ್ಳುತ್ತಿರಲು ದೈತ್ಯರ ಒಡೆಯ ಶಂಬರನ ಆಟ,
ದೈತ್ಯರು ಭಯಗೊಂಡು ಪ್ರಾರಂಭಿಸಿದರು ಜೀವ ಉಳಿಸಿಕೊಳ್ಳಲು ಓಟ.
ಓಡುತ್ತಿರುವ ದೈತ್ಯರನ್ನು ವಿಪ್ರಚಿತ್ತಿ ಎಂಬ ಅಸುರ ತಡೆದ,
ಬಿಲ್ಲು ಹಿಡಿದ ವಿಪ್ರಚಿತ್ತಿ ಇಂದ್ರ ಮುಂತಾದ  ದೇವತೆಗಳಿಗೆ ಎದುರಾದ.

ವರಾದಜೇಯೇನ ವಿಧಾತುರೇವ ಸುರೋತ್ತಮಾಂಸ್ತೇನ ಶರೈರ್ನ್ನಿಪಾತಿತಾನ್ ।
ನಿರೀಕ್ಷ್ಯ ಶಕ್ರಂ ಚ ವಿಮೋಹಿತಂ ದ್ರುತಂ ನ್ಯವಾರಯತ್ ತಂ ಪವನಃ ಶರೌಘೈಃ ॥೧೧.೧೯೦॥

ಬ್ರಹ್ಮದೇವರ ವರದಿಂದ  ಅಜೇಯನಾಗಿದ್ದ ವಿಪ್ರಚಿತ್ತಿಯ ಬಾಣ,
ದೇವತೆಗಳ ಬೀಳಿಸಿ ಇಂದ್ರನ ಮೂರ್ಛೆಗೊಳಿಸಿ ಕಸಿಯಿತು ತ್ರಾಣ.
ವಿಪ್ರಚಿತ್ತಿಯ ತಡೆದ ಇದನ್ನೆಲ್ಲಾ ಗಮನಿಸುತ್ತಿದ್ದ ಮುಖ್ಯಪ್ರಾಣ.

ಅಸ್ತ್ರಾಣಿ ತಸ್ಯಾಸ್ತ್ರವರೈರ್ನ್ನಿವಾರ್ಯ್ಯ ಚಿಕ್ಷೇಪ ತಸ್ಯೋರಸಿ ಕಾಞ್ಚನೀಮ್ ಗದಾಮ್ ।
ವಿಚೂರ್ಣ್ಣಿತೋsಸೌ ನಿಪಪಾತ ಮೇರೌ ಮಹಾಬಲೋ 
ವಾಯುಬಲಾಭಿನುನ್ನಃ ॥೧೧.೧೯೧॥

ಪವನ ವಿಪ್ರಚಿತ್ತಿಯ ಅಸ್ತ್ರಗಳನ್ನು ತನ್ನ ಅಸ್ತ್ರಗಳಿಂದ ತಡೆದ,
ವಿಪ್ರಚಿತ್ತಿಯ ಎದೆಯ ಮೇಲೆ ಬಂಗಾರದ ಗದೆಯ ತಾ ಎಸೆದ.
ಪ್ರಾಣ ಬಲಕ್ಕೆ ವಿಪ್ರಚಿತ್ತಿ ಮೇರುಪರ್ವತದ ಮೇಲೆ ಬಿದ್ದು ಪುಡಿಯಾದ.

ಅಥಾsಸಸಾದಾsಶು ಸ ಕಾಲನೇಮೀಸ್ತ್ವದಾಜ್ಞಯಾ ಯಸ್ಯ ವರಂ ದದೌ ಪುರಾ ।
ಸರ್ವೈರಜೇಯತ್ವಮಜೋsಸುರಃ ಸ ಸಹಸ್ರಶೀರ್ಷೋ 
ದ್ವಿಸಹಸ್ರಬಾಹುಯುಕ್ ॥೧೧.೧೯೨॥

ಹೀಗೆ ನಡೆದಮೇಲೆ ವಿಪ್ರಚಿತ್ತಿಯ ಘೋರ ಸಾವು,
ಕಾಲನೇಮಿಗಿತ್ತು ನಿನ್ನಾಜ್ಞೆಯ ಅಜೇಯತ್ವದ ಬ್ರಹ್ಮ ವರವು.
ಅಂಥಾ ಕಾಲನೇಮಿ ಬಂದ ಹೊಂದಿ ಸಾವಿರತಲೆ ಎರಡುಸಾವಿರ ಬಾಹು.

ತಮಾಪತನ್ತನಂ ಪ್ರಸಮೀಕ್ಷ್ಯ ಮಾರುತಸ್ತ್ವದಾಜ್ಞಯಾ ದತ್ತವರಸ್ತ್ವಯೈವ ।
ಹನ್ತವ್ಯ ಇತ್ಯಸ್ಮರದಾಶು ಹಿ ತ್ವಾಂ 
ತದಾssವಿರಾಸೀಸ್ತ್ವಮನನ್ತಪೌರುಷಃ ॥೧೧.೧೯೩॥

ಯುದ್ಧಭೂಮಿಗೆ ಬರುತ್ತಿರುವ ಕಾಲನೇಮಿಯನ್ನು ಕಂಡ  ಮಾರುತ,
ನಿನ್ನಾಜ್ಞೆಯ ವರ ಹೊಂದಿದವ ನಿನ್ನಿಂದಲೇ ಆಗಲೆಂದು ಹತ.
ಹೀಗೆ ಯೋಚಿಸಿ ನಿನ್ನ ಸ್ಮರಿಸಿದ ಆ ಪ್ರಾಣದೇವ,
ಆಗಾಯಿತು ಅನಂತಪರಾಕ್ರಮದ ನಿನ್ನಾವಿರ್ಭಾವ.

ತಮಸ್ತ್ರಶಸ್ತ್ರಾಣಿ ಬಹೂನಿ ಬಾಹುಭಿಃ ಪ್ರವರ್ಷಮಾಣಂ ಭುವನಾಪ್ತದೇಹಮ್ ।
ಚಕ್ರೇಣ ಬಾಹೂನ್ ವಿನಿಕೃತ್ಯ ಕಾನಿ ಚ ನ್ಯವೇದಯಶ್ಚಾsಶು ಯಮಾಯ 
ಪಾಪಮ್ ॥೧೧.೧೯೪ ॥

ಅಸಂಖ್ಯ ಬಾಹುಗಳಿಂದ ಅಸ್ತ್ರಶಸ್ತ್ರಗಳೆಸೆಯುತ್ತ ಭುವಿಯ ವ್ಯಾಪಿಸಿದ್ದ ಕಾಲನೇಮಿ,
ಅವನ ಕೈತಲೆಗಳ ಸುದರ್ಶನದಿ ಕತ್ತರಿಸುತ್ತಾ ಅವನ ದೇಹವ ಯಮಗೆ ಕೊಟ್ಟೆ ನೀ ಭಕ್ತಪ್ರೇಮಿ. 
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 184 - 188


ಜಘ್ನುರ್ಗ್ಗಿರೀನ್ದ್ರತಳಮುಷ್ಟಿಮಹಾಸ್ತ್ರಶಸ್ತ್ರೈಶ್ಚಕ್ರುರ್ನ್ನದೀಶ್ಚ ರುಧಿರೌಘವಹಾ 
ಮಹೌಘಮ್ ।
ತತ್ರ ಸ್ಮ ದೇವವೃಷಭೈರಸುರೇಶಚಮ್ವಾ ಯುದ್ಧೇ ನಿಸೂದಿತ ಉತೌಘಬಲೈಃ 
ಶತಾಂಶಃ ॥೧೧.೧೮೪॥

ಹೀಗೆ ಸೇರಿದ ದೈತ್ಯ-ದೇವತೆಗಳ ಯುದ್ಧ ಸಮಯದ ಆ ನೋಟ,
ಬೆಟ್ಟ ಕೈತಳ ಮುಷ್ಠಿ ಅಸ್ತ್ರ ಶಸ್ತ್ರಗಳಿಂದ ನಡೆದ ಆ  ಹೊಡೆದಾಟ.
ಆ ರೀತಿಯ ಯುದ್ಧದಲ್ಲಿ ರಕ್ತದ ಹೊಳೆ ನದಿಗಳು ಹರಿದವು ಆಗ,
ಯುದ್ಧದಿ ನಾಶವಾಯಿತು ದೈತ್ಯಸೈನ್ಯದ ನೂರನೇ ಒಂದು ಭಾಗ.

ಅಥಾsತ್ಮಸೇನಾಮವಮೃದ್ಯಮಾನಾಂ ವೀಕ್ಷ್ಯಾಸುರಃ ಶಮ್ಬರನಾಮಧೇಯಃ ।
ಸಸಾರ ಮಾಯಾವಿದಸಹ್ಯ̐ಮಾಯೋ ವರಾದುಮೇಶಸ್ಯ ಸುರಾನ್ 
ವಿಮೋಹಯನ್ ॥೧೧.೧೮೫॥

ನಾಶವಾಗುತ್ತಿರುವ ತನ್ನ ಸೇನೆಯನ್ನು ಕಂಡ ಮಾಯಾವಿದ್ಯೆಯ ಬಲ್ಲ ಶಂಬರ,
ಕಣ್ಕಟ್ಟುವಿದ್ಯೆ, ರುದ್ರವರ ಪ್ರಭಾವದಿಂದ ದೇವತೆಗಳ ಪ್ರಜ್ಞೆ ತಪ್ಪಿಸುತ್ತಾ ಬಂದ ಅಸುರ.

ಮಾಯಾಸಹಸ್ರೇಣ ಸುರಾಃ ಸಮರ್ದ್ದಿತಾ ರಣೇ ವಿಷೇದುಃ 
ಶಶಿಸೂರ್ಯ್ಯಮುಖ್ಯಾಃ ।
ತಾನ್ ವಿಕ್ಷ್ಯ ವಜ್ರೀ ಪರಮಾಂ ತು ವಿದ್ಯಾಂ ಸ್ವಯಮ್ಭುದತ್ತಾಮ್ ಪ್ರಯುಯೋಜ ವೈಷ್ಣವೀಮ್॥೧೧.೧೮೬॥

ಶಂಬರಾಸುರನಿಂದ ಸಾವಿರಾರು ಮಾಯೆಗಳ ಜಾಲ,
ಚಂದ್ರ ಸೂರ್ಯಾದಿಗಳು ಆಯಾಸಗೊಂಡ ಆ ಕಾಲ.
ಇದೆಲ್ಲವನ್ನೂ ನೋಡುತ್ತಿದ್ದ ಇಂದ್ರದೇವ ಆಗ,
ಶಂಬರನ ಮೇಲೆ ಮಾಡಿದ ವೈಷ್ಣವವಿದ್ಯೆ ಪ್ರಯೋಗ.

ಸಮಸ್ತಮಾಯಾಪಹಯಾ ತಯೈವ ವರಾದ್ ರಮೇಶಸ್ಯ ಸದಾsಪ್ಯಸ̐ಹ್ಯಯಾ
ಮಾಯಾ ವಿನೇಶುರ್ದ್ದಿತಿಜೇನ್ದ್ರಸೃಷ್ಟಾ ವಾರೀಶವಹ್ನೀನ್ದುಮುಖಾಶ್ಚ 
ಮೋಚಿತಾಃ ॥೧೧.೧೮೭॥

ಎಲ್ಲಾ ಮಾಯೆಗಳನ್ನು ನಾಶ ಮಾಡುವ ಆ ವೈಷ್ಣವ ವಿದ್ಯೆಯಿಂದ,
ನಿನ್ನ ವರದಿಂದ ನಾಶವಾಯಿತು ಶಂಬರ ನಿರ್ಮಿತ ಮಾಯಾಬಂಧ.
ಬಿಡುಗಡೆಯಾದ ವರುಣ ಅಗ್ನಿ ಚಂದ್ರ ಮೊದಲಾದ ದೇವತಾವೃಂದ.

ಯಮೇನ್ದುಸೂರ್ಯ್ಯಾದಿಸುರಾಸ್ತತೋsಸುರಾನ್ ನಿಜಘ್ನುರಾಪ್ಯಾಯಿತವಿಕ್ರಮಾಸ್ತದಾ ।
ಸುರೇಶ್ವರೇಣೋರ್ಜ್ಜಿತಪೌರುಷಾ ಬಹೂನ್ ವಜ್ರೇಣ ವಜ್ರೀ ನಿಜಘಾನ 
ಶಮ್ಬರಮ್ ॥೧೧.೧೮೮ ॥

ತದನಂತರ ಯಮಧರ್ಮ ಚಂದ್ರ ಸೂರ್ಯ,
ಎಲ್ಲಾ ದೇವತೆಗಳಿಗೆ ಬಲ ಮರಳಿದ ವ್ಯಾಪಾರ.
ದೇವೇಂದ್ರನಿಂದ ವರ್ಧಿತಬಲವುಳ್ಳ ದೇವತೆಗಳಿಂದ ಅಸುರರ ಸಂಹಾರ,
ದೇವೇಂದ್ರನ ವಜ್ರಾಯುಧಕ್ಕೆ ಶಂಬರಾಸುರನಾದ ತಾನು ಆಹಾರ.
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11:179 -183

ಏತಸ್ಮಿನ್ನೇವ ಕಾಲೇ ಕಮಲಭವಶಿವಾಗ್ರೇಸರಾಃ ಶಕ್ರಪೂರ್ವಾ
ಭೂಮ್ಯಾ ಪಾಪಾತ್ಮದೈತ್ಯೈರ್ಭುವಿ ಕೃತನಿಲಯೈರಾಕ್ರಮಂ ಚಾಸಹನ್ತ್ಯಾ ।
ಈಯುರ್ದ್ದೇವಾದಿದೇವಂ ಶರಣಮಜಮುರುಂ ಪೂರ್ಣ್ಣಷಾಡ್ಗುಣ್ಯಮೂರ್ತ್ತಿಂ
ಕ್ಷೀರಾಬ್ಧೌ ನಾಗಭೋಗೇ 
ಶಯಿತಮನುಪಮಾನನ್ದಸನ್ದೋಹದೇಹಮ್ ॥೧೧.೧೭೯॥

ಇದೇ ಕಾಲದಲ್ಲಿ, ಭುವಿಯಲ್ಲಿ ವಾಸವಾಗಿದ್ದ ಪಾಪಿಷ್ಠ ದೈತ್ಯರ ಆಕ್ರಮಣ,
ಸಹಿಸಲಾಗದ ಭೂತಾಯಿ ಬ್ರಹ್ಮ ರುದ್ರ ಇಂದ್ರಾದಿಗಳ
ಸಾರಿದಳು ಆ ಕ್ಷಣ.
ದೇವತೆಗಳದೇವ ಗುಣಪೂರ್ಣ ಷಡ್ಗುಣಗಳ ಆಗರ ಕ್ಷೀರಸಾಗರದ ಶೇಷಶಾಯಿ ದೊರೆ,
ಅಂಥಾ ಸರ್ವಸಮರ್ಥ ಪೂರ್ಣಾನಂದ ನಾರಾಯಣನ ಸ್ತುತಿಸುತ್ತ ಇಟ್ಟರವನಲ್ಲಿ ಮೊರೆ.

ಊಚುಃ ಪರಂ ಪುರುಷಮೇನಮನನ್ತಶಕ್ತಿಂ ಸೂಕ್ತೇನ ತೇsಬ್ಜಜಮುಖಾ ಅಪಿ ಪೌರುಷೇಣ ।
ಸ್ತುತ್ವಾ ಧರಾsಸುರವರಾಕ್ರಮಣಾತ್ ಪರೇಶ ಖಿನ್ನಾ ಯತೋ ಹಿ ವಿಮುಖಾಸ್ತವ 
ತೇsತಿಪಾಪಾಃ ॥೧೧.೧೮೦॥

ಬ್ರಹ್ಮಾದಿದೇವತೆಗಳಿಂದ ಅನಂತಶಕ್ತಿಯ ಪರಮಪುರುಷ ನಾರಾಯಣನ ಪುರುಷಸೂಕ್ತದಿಂದ ಆರಾಧನೆ,
ಅತಿಪಾಪಿಗಳಾದ, ಭಗವಂತನಿಂದ ವಿಮುಖರಾದ ದೈತ್ಯರಿಂದ ಭೂದೇವಿ ಅನುಭವಿಸುತ್ತಿರುವ ದುಃಖದ ನಿವೇದನೆ.

ದುಸ್ಸಙ್ಗತಿರ್ಭವತಿ ಭಾರವದೇವ ದೇವ ನಿತ್ಯಂ ಸತಾಮಪಿ ಹಿ ನಃ ಶೃಣು ವಾಕ್ಯಮೀಶ ।
ಪೂರ್ವಂ ಹತಾ ದಿತಿಸುತಾ ಭವತಾ ರಣೇಷು  ಹ್ಯಸ್ಮತ್ಪ್ರಿಯಾರ್ತ್ಥಮಧುನಾ ಭುವಿ ತೇSಭಿಜಾತಾಃ ॥೧೧.೧೮೧॥

ದೇವಾ, ಸಜ್ಜನರಿಗೆ ಯಾವಾಗಲೂ ದುರ್ಜನರ ಸಮಾಗಮ ದುರ್ಭರ,
ಹಿಂದೆ ನೀನು ಮಾಡಿದ್ದಿ ನಮಗಾಗಿ ದಿತಿಮಕ್ಕಳಾದ ದೈತ್ಯರ ಸಂಹಾರ.
ಈಗ ಅವರೆಲ್ಲರೂ ಭುವಿಯಲ್ಲಿ ಮತ್ತೆ ಹುಟ್ಟಿಬಂದು ಆಗಿದ್ದಾರೆ ಭೂಭಾರ.

ಆಸೀತ್ ಪುರಾ ದಿತಿಸುತೈರಮರೋತ್ತಮಾನಾಂ ಸಙ್ಗ್ರಾಮ ಉತ್ತಮಗಜಾಶ್ವರಥದ್ವಿಪದ್ಭಿಃ ।
ಅಕ್ಷೋಹಿಣೀಶತಮಹೌಘಮಹೌಘಮೇವ ಸೈನ್ಯಂ ಸುರಾತ್ಮಕಮಭೂತ್ ಪರಮಾಸ್ತ್ರಯುಕ್ತಮ್ ॥೧೧.೧೮೨॥

ಹಿಂದೊಮ್ಮೆ ದೈತ್ಯರಿಗೂ ದೇವತಾಶ್ರೇಷ್ಠರಿಗೂ ಯುದ್ಧವಾದ ಸಮಯ,
ಆನೆ ಕುದುರೆ ರಥ ಕಾಲಾಳು ಅಕ್ಷೋಹಿಣಿ ಮಹೌಘಗಳ ಸೈನ್ಯ ಸಮೂಹ.

ತಸ್ಮಾನ್ಮಹೌಘಗುಣಮಾಸ ಮಹಾಸುರಾಣಾಂ ಸೈನ್ಯಂ ಶಿಲಾಗಿರಿಮಹಾಸ್ತ್ರಧರಂ ಸುಘೋರಮ್ ।
ತೇಷಾಂ ರಥಾಶ್ಚ ಬಹುನಲ್ವಪರಿಪ್ರಮಾಣಾ ದೇವಾಸುರಪ್ರವರಕಾರ್ಮ್ಮುಕಬಾಣಪೂರ್ಣ್ಣಾಃ ।
ನಾನಾಮ್ಬರಾಭರಣವೇಷವರಾಯುಧಾಢ್ಯಾ ದೇವಾಸುರಾಃ ಸಸೃಪುರಾಶು 
ಪರಸ್ಪರಂ ತೇ ॥೧೧.೧೮೩॥

ದೇವತೆಗಳ ಸೈನ್ಯಸಂಖ್ಯೆಗಿಂತ ಮಹೌಘದಿಂದ ಗುಣಿತವಾದ ಭಾರೀ ಸೈನ್ಯ,
ಕಲ್ಲು ಬೆಟ್ಟ ಅಸ್ತ್ರಗಳ ಅತಿಭಯಾನಕ ಸೈನ್ಯವಿತ್ತು ದೈತ್ಯಗಣದ ಅಧೀನ.
ಇಬ್ಬರಲ್ಲೂ ಬಿಲ್ಲು ಬಾಣಗಳಿಂದ ಕೂಡಿದ ಬಹು ನಲ್ವಪ್ರಮಾಣದ ರಥಗಳಿದ್ದವಂತೆ,
ತರ ತರ ಬಟ್ಟೆ ಆಭರಣಗಳ ವೇಷ ಆಯುಧದಿಂದ ಯುದ್ಧಕ್ಕಾಗಿ ಎದುರುಬದಿರಾದರಂತೆ.
[Contributed by Shri Govind Magal]

Wednesday, 16 January 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 174 - 178

ಪಾಣ್ಡುಸ್ತತೋ ರಾಜ್ಯಭರಂ ನಿಧಾಯ ಜ್ಯೇಷ್ಠೇsನುಜೇ ಚೈವ ವನಂ ಜಗಾಮ ।
ಪತ್ನೀದ್ವಯೇನಾನುಗತೋ ಬದರ್ಯ್ಯಾಮುವಾಸ 
ನಾರಾಯಣಪಾಲಿತಾಯಾಮ್ ॥೧೧.೧೭೪॥

ತದನಂತರ ಪಾಂಡುರಾಜ ತಾನು ಪಾಲಿಸುತ್ತಿದ್ದ ರಾಜ್ಯಭಾರ,
ಹಿರಿಯಧೃತರಾಷ್ಟ್ರ ಕಿರಿವಿದುರನಿಗೆ ಮಾಡುತ್ತಾನೆ ಹಸ್ತಾಂತರ.
ಪತ್ನಿಯರೊಡಗೂಡಿ ಕಾಡಿಗೆ ತೆರಳುತ್ತಾನೆ ಪಾಂಡುರಾಜ ಆಗ,
ಯಮಸುತ ನಾರಾಯಣನ ಪಾಲನೆಯಲ್ಲಿದ್ದ ಬದರಿವಾಸದ ಯೋಗ.

ಗೃಹಾಶ್ರಮೇಣೈವ ವನೇ ನಿವಾಸಂ ಕುರ್ವನ್ ಸ ಭೋಗಾನ್ ಬುಭುಜೇ ತಪಶ್ಚ ।
ಚಕ್ರೇ ಮುನೀನ್ದ್ರೈಃ ಸಹಿತೋ ಜಗತ್ಪತಿಂ ರಮಾಪತಿಂ 
ಭಕ್ತಿಯುತೋsಭಿಪೂಜಯನ್ ॥೧೧.೧೭೫ ॥

ಪಾಂಡುರಾಜ ಗೃಹಸ್ಥಾಶ್ರಮದಲ್ಲಿ ವಾಸಮಾಡುತ್ತ,
ಯೋಗ್ಯವಾದ ಭೋಗಗಳ ತಾನು ಅನುಭವಿಸುತ್ತ,
ಋಷಿ ಮುನಿಗಳೊಂದಿಗೆ ಕೂಡಿಕೊಂಡು ಉಚಿತ ಸಾಧನೆ,
ಮಾಡಿದ ರಮೆಯರಸ ಬದರೀನಾರಾಯಣನ ಆರಾಧನೆ.

ಸ ಕಾಮತೋ ಹರಿಣತ್ವಂ ಪ್ರಪನ್ನಂ ದೈವಾದೃಷಿಂ ಗ್ರಾಮ್ಯಕರ್ಮ್ಮಾನುಷಕ್ತಮ್ ।
ವಿದ್ಧ್ವಾ ಶಾಪಂ ಪ್ರಾಪ ತಸ್ಮಾತ್ ಸ್ತ್ರಿಯಾ ಯುಙ್ಮರಿಷ್ಯಸೀತ್ಯೇವ ಬಭೂವ 
ಚಾsರ್ತ್ತ ॥೧೧.೧೭೬ ॥

ನ್ಯಸಿಷ್ಣುರುಕ್ತಃ ಪೃಥಯಾ ಸ ನೇತಿ ಪ್ರಣಾಮಪೂರ್ವಂ ನ್ಯವಸತ್ ತಥೈವ ।
ತಾಭ್ಯಾಂ ಸಮೇತಃ ಶತಶೃಙ್ಗಪರ್ವತೇ ನಾರಾಯಣಸ್ಯಾsಶ್ರಮಮದ್ಧ್ಯಗೇ 
ಪುರಃ ॥೧೧.೧೭೭॥

ದೈವದಂಕಲ್ಪದಂತೆ ನಡೆವ ಎಲ್ಲಾ ಚಟುವಟಿಕೆಗಳ ಆಟ,
ಪಾಂಡು ನೋಡುವ ಮೈಥುನದಿ ತೊಡಗಿದ ಜಿಂಕೆ ಕೂಟ.
ಜಿಂಕೆಯ ವೇಷದಲ್ಲಿದ್ದ ಋಷಿಗೆ ಪಾಂಡು ಬಾಣ ಬಿಟ್ಟ,
ಹೆಣ್ಣ ಸೇರಿದಾಗ ನಿನಗೆ ಸಾವೆಂದು ಆ ಋಷಿ ಶಾಪ ಕೊಟ್ಟ.
ಪಶ್ಚಾತ್ತಾಪದಿಂದ ಬೆಂದ ಪಾಂಡುವಿಗೆ ಆಗುತ್ತದೆ  ಸನ್ಯಾಸದ ಬಯಕೆ,
ಕುಂತಿಯಿಂದ ತಡೆಯಲ್ಪಟ್ಟು ಶತಶೃಂಗದ ನಾರಾಯಣಾಶ್ರಮದಲ್ಲಿರುವಿಕೆ.

ತಪೋ ನಿತಾನ್ತಂ ಸ ಚಚಾರ ತಾಭ್ಯಾಂ ಸಮನ್ವಿತಃ ಕೃಷ್ಣಪದಾಮ್ಬುಜಾಶ್ರಯಃ ।
ತತ್ಸಙ್ಗಪೂತದ್ಯುಸರಿದ್ವರಾಮ್ಭಃ ಸದಾವಗಾಹಾತಿಪವಿತ್ರಿತಾಙ್ಗಃ ॥೧೧.೧೭೮ ॥

ತನ್ನಿಬ್ಬರು ಹೆಂಡಂದಿರೊಡನೆ ಸದಾ ಕೃಷ್ಣಪಾದದ ಸ್ಮರಣೆ,
ಕೃಷ್ಣಪಾದೋದಕ ಗಂಗಾಸ್ನಾನಾನಂತರ ತಪಸ್ಸಿನ ಆಚರಣೆ.
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 170 - 173

ನೈಷಾ ವಿರೋಧೇ  ಕುರುಪಾಣ್ಡವಾನಾಂ ತಿಷ್ಠೇದಿತಿ ವ್ಯಾಸ ಉದೀರ್ಣ್ಣಸದ್ಗುಣಃ ।
ಸ್ವಮಾತರಂ ಸ್ವಾಶ್ರಮಮೇವ ನಿನ್ಯೇ ಸ್ನುಷೇ ಚ ತಸ್ಯಾ ಯಯತುಃ ಸ್ಮ 
ತಾಮನು ॥೧೧.೧೭೦॥

ಎಲ್ಲವನ್ನೂ ಬಲ್ಲ ಉತ್ಕೃಷ್ಟವಾದ ಗುಣವುಳ್ಳ ವೇದವ್ಯಾಸರ ಯೋಚನೆ,
ತಟ್ಟದಿರಲೆಂದು ತಾಯಿ ಸತ್ಯವತಿಗೆ ಕೌರವ ಪಾಂಡವ ಕಾಳಗದ ವೇದನೆ.
ಹಸ್ತಿನಾವತಿಯಲ್ಲಿ ಆಕೆ ಇರಬಾರದೆಂದು ತಮ್ಮ ಆಶ್ರಮಕೆ ಕರೆದೊಯ್ಯುವಿಕೆ,
ಸತ್ಯವತಿಯ ಸೊಸೆಯರಿಬ್ಬರು ವಿದುರನ ತಾಯಿ ಅವರನ್ನು ಅನುಸರಿಸುವಿಕೆ.

ಸುತೋಕ್ತಮಾರ್ಗ್ಗೇಣ ವಿಚಿನ್ತ್ಯ ತಂ ಹರಿಂ ಸುತಾತ್ಮನಾ ಬ್ರಹ್ಮತಯಾ ಚ ಸಾ ಯಯೌ ।
ಪರಂ ಪದಂ ವೈಷ್ಣವಮೇವ ಕೃಷ್ಣಪ್ರಸಾದತಃ ಸ್ವರ್ಯ್ಯಯತುಃ ಸ್ನುಷೇ 
ಚ ॥೧೧.೧೭೧॥

ಸತ್ಯವತಿಯಿಂದ ಮಗ ವ್ಯಾಸರು ಹೇಳಿದ ರೀತಿಯಲ್ಲಿ ಅನುಸಂಧಾನಪೂರ್ವಕ ನಾರಾಯಣನ ಚಿಂತನೆ,
ಹಾಗೆ ಧ್ಯಾನಿಸಿ ವೈಷ್ಣವಲೋಕ ಹೊಂದಿದಳಾಕೆ; ಸೊಸೆಯರದೂ ದೈವಾನುಗ್ರಹದ ಸ್ವರ್ಗಾರೋಹಣೆ.

ಮಾತಾ ಚ ಸಾ ವಿದುರಸ್ಯಾsಪ ಲೋಕಂ ವೈರಿಞ್ಚಮನ್ವೇವ ಗತಾsಮ್ಬಿಕಾಂ ಸತೀ ।
ವ್ಯಾಸಪ್ರಸಾದಾತ್ ಸುತಸದ್ಗುಣೈಶ್ಚ ಕಾಲೇನ ಮುಕ್ತಿಂ ಚ ಜಗಾಮ 
ಸನ್ಮತಿಃ ॥೧೧.೧೭೨ ॥

ವಿದುರನ ತಾಯಿ ಕೂಡಾ ಅಂಬಿಕೆಯನ್ನು ಅನುಸರಿಸಿ ಹೋಗುತ್ತಾಳೆ,
ವ್ಯಾಸಾನುಗ್ರಹ ವಿದುರನ ಸದ್ಗುಣಗಳಿಂದ ಬ್ರಹ್ಮಲೋಕ ಸೇರುತ್ತಾಳೆ.
ಕಾಲಾಂತರದ ಸಾಧನೆಯಿಂದ ಮುಕ್ತಿಯನ್ನೂ ಮುಂದೆ ಪಡೆಯುತ್ತಾಳೆ.

ಅಮ್ಬಾಲಿಕಾsಪಿ ಕ್ರಮಯೋಗತೋsಗಾತ್ ಪರಾಂ ಗತಿಂ ನೈವ ತಥಾsಮ್ಬಿಕಾ ಯಯೌ ।
ಯಥಾಯಥಾ ವಿಷ್ಣುಪರಶ್ಚಿದಾತ್ಮಾ ತಥಾತಥಾ ಹ್ಯಸ್ಯ ಗತಿಃ ಪರತ್ರ ॥೧೧.೧೭೩॥

ಅಂಬಾಲಿಕೆಗೆ ಕೂಡಾ ಭಕ್ತಿಮಾರ್ಗದ ಬೆಳವಣಿಗೆ ನಂತರ ವೈಷ್ಣವಲೋಕ ಪ್ರಾಪ್ತಿ.
ದುರ್ಬುದ್ಧಿಯ ಅಂಬಿಕೆಗೆ ಅವಳ ನಡೆಯನನುಸರಿಸಿ ಪರಮಗತಿಯಾಯ್ತು ನಾಸ್ತಿ.
ಸಾಧಕರದು ಇಲ್ಲಿ ಹೇಗಿರುತ್ತದೋ ಉಪಾಸನಾಮಾರ್ಗ,
ಅದನ್ನನುಸರಿಸಿ ಆಗುವ ಅವರವರ ಗತಿ ಹೊಂದುವ ಭಾಗ್ಯ.
[Contributed by Shri Govind Magal]

Monday, 14 January 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 167- 169

ಅಥಾಙ್ಗನಾರತ್ನಮವಾಪ್ಯ ತದ್ ದ್ವಯಂ ಪಾಣ್ಡುಸ್ತು ಭೋಗಾನ್ ಬುಭುಜೇ 
ಯಥೇಷ್ಟತಃ ।
ಅಪೀಪಲದ್ ಧರ್ಮ್ಮಸಮಾಶ್ರಯೋ ಮಹೀಂ ಜ್ಯೇಷ್ಠಾಪಚಾಯೀ 
ವಿದುರೋಕ್ತಮಾರ್ಗ್ಗತಃ ॥೧೧.೧೬೭॥

ಕುಂತೀ ಮಾದ್ರೀ ಎಂಬ ಇಬ್ಬರು ಹೆಂಡರಿಂದ ಪಾಂಡುವಿನ ಸುಖ ಭೋಗ,
ಧರ್ಮಾಶ್ರಿತ ಅಣ್ಣ ಧೃತರಾಷ್ಟ್ರನ ಧನಿಕನ ಮಾಡುವ ಯುವರಾಜ ಯೋಗ.
ವಿದುರ ಹೇಳಿದ ನೀತಿಗನುಗುಣವಾಗಿ ಭೂಮಿಯ ಪರಿಪಾಲನಾ ಯಾಗ.

ಭೀಷ್ಮೋ ಹಿ ರಾಷ್ಟ್ರೇ ಧೃತರಾಷ್ಟ್ರಮೇವ ಸಂಸ್ಥಾಪ್ಯ ಪಾಣ್ಡುಂ 
ಯುವರಾಜಮೇವ ।
ಚಕ್ರೇ ತಥಾsಪ್ಯನ್ಧ ಇತಿ ಸ್ಮ ರಾಜ್ಯಂ ಚಕಾರ ನಾಸಾವಕರೋಚ್ಚ 
ಪಾಣ್ಡುಃ ॥೧೧.೧೬೮ ॥

ಭೀಷ್ಮರಿಂದ ಧೃತರಾಷ್ಟ್ರನನ್ನು ರಾಜನಾಗಿ ಪಾಂಡುವನ್ನು ಯುವರಾಜನಾಗಿ ನೇಮಕ,
ಯುವರಾಜನಾದರೂ ಅಣ್ಣ ಅಂಧನಾದ್ದರಿಂದ ಪಾಂಡುವಿನದೇ ರಾಜ್ಯಭಾರದ ಕಾಯಕ.

ಭೀಷ್ಮಾಮ್ಬಿಕೇಯೋಕ್ತಿಪರಃ ಸದೈವ ಪಾಣ್ಡುಃ 
ಶಶಾಸಾವನಿಮೇಕವೀರಃ ।
ಅಥಾsಮ್ಬಿಕೇಯೋ ಬಹುಭಿಶ್ಚ ಯಜ್ಞೈರೀಜೇ ಸಪಾಣ್ಡುಶ್ಚ 
ಮಹಾಧನೌಘೈಃ ॥೧೧.೧೬೯॥

ಪಾಂಡುವಿನಿಂದ ಭೀಷ್ಮರ ಧೃತರಾಷ್ಟ್ರನ ಮೇಲ್ವಿಚಾರಣೆಯಲ್ಲಿ ಭೂಮಿಯ ಪಾಲನೆ,
ಧೃತರಾಷ್ಟ್ರ ಪಾಂಡುವಿನಿಂದ ಸಂಪತ್ತು ಬಳಸಿ ವಿಶೇಷಯಜ್ಞಗಳಿಂದ ಭಗವದಾರಾಧನೆ.
[Contributed by Shri Govind Magal]