Wednesday, 16 January 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 174 - 178

ಪಾಣ್ಡುಸ್ತತೋ ರಾಜ್ಯಭರಂ ನಿಧಾಯ ಜ್ಯೇಷ್ಠೇsನುಜೇ ಚೈವ ವನಂ ಜಗಾಮ ।
ಪತ್ನೀದ್ವಯೇನಾನುಗತೋ ಬದರ್ಯ್ಯಾಮುವಾಸ 
ನಾರಾಯಣಪಾಲಿತಾಯಾಮ್ ॥೧೧.೧೭೪॥

ತದನಂತರ ಪಾಂಡುರಾಜ ತಾನು ಪಾಲಿಸುತ್ತಿದ್ದ ರಾಜ್ಯಭಾರ,
ಹಿರಿಯಧೃತರಾಷ್ಟ್ರ ಕಿರಿವಿದುರನಿಗೆ ಮಾಡುತ್ತಾನೆ ಹಸ್ತಾಂತರ.
ಪತ್ನಿಯರೊಡಗೂಡಿ ಕಾಡಿಗೆ ತೆರಳುತ್ತಾನೆ ಪಾಂಡುರಾಜ ಆಗ,
ಯಮಸುತ ನಾರಾಯಣನ ಪಾಲನೆಯಲ್ಲಿದ್ದ ಬದರಿವಾಸದ ಯೋಗ.

ಗೃಹಾಶ್ರಮೇಣೈವ ವನೇ ನಿವಾಸಂ ಕುರ್ವನ್ ಸ ಭೋಗಾನ್ ಬುಭುಜೇ ತಪಶ್ಚ ।
ಚಕ್ರೇ ಮುನೀನ್ದ್ರೈಃ ಸಹಿತೋ ಜಗತ್ಪತಿಂ ರಮಾಪತಿಂ 
ಭಕ್ತಿಯುತೋsಭಿಪೂಜಯನ್ ॥೧೧.೧೭೫ ॥

ಪಾಂಡುರಾಜ ಗೃಹಸ್ಥಾಶ್ರಮದಲ್ಲಿ ವಾಸಮಾಡುತ್ತ,
ಯೋಗ್ಯವಾದ ಭೋಗಗಳ ತಾನು ಅನುಭವಿಸುತ್ತ,
ಋಷಿ ಮುನಿಗಳೊಂದಿಗೆ ಕೂಡಿಕೊಂಡು ಉಚಿತ ಸಾಧನೆ,
ಮಾಡಿದ ರಮೆಯರಸ ಬದರೀನಾರಾಯಣನ ಆರಾಧನೆ.

ಸ ಕಾಮತೋ ಹರಿಣತ್ವಂ ಪ್ರಪನ್ನಂ ದೈವಾದೃಷಿಂ ಗ್ರಾಮ್ಯಕರ್ಮ್ಮಾನುಷಕ್ತಮ್ ।
ವಿದ್ಧ್ವಾ ಶಾಪಂ ಪ್ರಾಪ ತಸ್ಮಾತ್ ಸ್ತ್ರಿಯಾ ಯುಙ್ಮರಿಷ್ಯಸೀತ್ಯೇವ ಬಭೂವ 
ಚಾsರ್ತ್ತ ॥೧೧.೧೭೬ ॥

ನ್ಯಸಿಷ್ಣುರುಕ್ತಃ ಪೃಥಯಾ ಸ ನೇತಿ ಪ್ರಣಾಮಪೂರ್ವಂ ನ್ಯವಸತ್ ತಥೈವ ।
ತಾಭ್ಯಾಂ ಸಮೇತಃ ಶತಶೃಙ್ಗಪರ್ವತೇ ನಾರಾಯಣಸ್ಯಾsಶ್ರಮಮದ್ಧ್ಯಗೇ 
ಪುರಃ ॥೧೧.೧೭೭॥

ದೈವದಂಕಲ್ಪದಂತೆ ನಡೆವ ಎಲ್ಲಾ ಚಟುವಟಿಕೆಗಳ ಆಟ,
ಪಾಂಡು ನೋಡುವ ಮೈಥುನದಿ ತೊಡಗಿದ ಜಿಂಕೆ ಕೂಟ.
ಜಿಂಕೆಯ ವೇಷದಲ್ಲಿದ್ದ ಋಷಿಗೆ ಪಾಂಡು ಬಾಣ ಬಿಟ್ಟ,
ಹೆಣ್ಣ ಸೇರಿದಾಗ ನಿನಗೆ ಸಾವೆಂದು ಆ ಋಷಿ ಶಾಪ ಕೊಟ್ಟ.
ಪಶ್ಚಾತ್ತಾಪದಿಂದ ಬೆಂದ ಪಾಂಡುವಿಗೆ ಆಗುತ್ತದೆ  ಸನ್ಯಾಸದ ಬಯಕೆ,
ಕುಂತಿಯಿಂದ ತಡೆಯಲ್ಪಟ್ಟು ಶತಶೃಂಗದ ನಾರಾಯಣಾಶ್ರಮದಲ್ಲಿರುವಿಕೆ.

ತಪೋ ನಿತಾನ್ತಂ ಸ ಚಚಾರ ತಾಭ್ಯಾಂ ಸಮನ್ವಿತಃ ಕೃಷ್ಣಪದಾಮ್ಬುಜಾಶ್ರಯಃ ।
ತತ್ಸಙ್ಗಪೂತದ್ಯುಸರಿದ್ವರಾಮ್ಭಃ ಸದಾವಗಾಹಾತಿಪವಿತ್ರಿತಾಙ್ಗಃ ॥೧೧.೧೭೮ ॥

ತನ್ನಿಬ್ಬರು ಹೆಂಡಂದಿರೊಡನೆ ಸದಾ ಕೃಷ್ಣಪಾದದ ಸ್ಮರಣೆ,
ಕೃಷ್ಣಪಾದೋದಕ ಗಂಗಾಸ್ನಾನಾನಂತರ ತಪಸ್ಸಿನ ಆಚರಣೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula