Wednesday, 30 January 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 199 - 201

ಯ ಉಗ್ರಸೇನಃ ಸುರಗಾಯಕಃ ಸ ಜಾತೋ ಯದುಷ್ವೇಷ ತಥಾಭಿಧೇಯಃ ।
ತವೈವ ಸೇವಾರ್ತ್ಥಮಮುಷ್ಯ ಪುತ್ರೋ ಜಾತೋsಸುರಃ ಕಾಲನೇಮಿಃ ಸ ಈಶ ॥೧೧.೧೯೯॥

ಉಗ್ರಸೇನನೆಂಬ ಹೆಸರಿನ ದೇವತೆಗಳ ಆ  ಹಾಡುಗಾರ,
ಅದೇ ಹೆಸರಿನಿಂದ ಯಾದವರಲ್ಲಿ ಮಾಡಿದ್ದಾನೆ ಅವತಾರ.
ಉಗ್ರಸೇನನ ಮಗನಾಗಿ ಹುಟ್ಟಿದ್ದಾನೆ ಕಾಲನೇಮಿ ಎಂಬಸುರ.

ಯಸ್ತ್ವತ್ಪ್ರಿಯಾರ್ತ್ಥಂ ನ ಹತೋ ಹಿ ವಾಯುನಾ ಭವತ್ಪ್ರಸಾದಾತ್ ಪರಮೀಶಿತಾsಪಿ ।
ಸ ಏಷ ಭೋಜೇಷು ಪುನಶ್ಚ ಜಾತೋ ವರಾದುಮೇಶಸ್ಯ ಪರೈರಜೇಯಃ ॥೧೧.೨೦೦॥

ನಿನ್ನ ಅನುಗ್ರಹದಿಂದ ಅತ್ಯಂತ ಸಮರ್ಥನಾಗಿರುವ ಮುಖ್ಯಪ್ರಾಣ
ನಿನ್ನ ಪ್ರೀತಿಗಾಗಿ ತೆಗೆಯಲಿಲ್ಲವೋ ಯಾರ ಉಸಿರು ಮತ್ತು ಪ್ರಾಣ.
ಅಂತಹಾ ಕಾಲನೇಮಿಯದು ಯಾದವರಲ್ಲಾಗಿದೆ ಹುಟ್ಟು,
ರುದ್ರವರಬಲದಿಂದ ಅವನದಾಗಿದೆ ಅಜೇಯತ್ವದ ಪಟ್ಟು.




ಸ ಔಗ್ರಸೇನೇ ಜನಿತೋsಸುರೇಣ ಕ್ಷೇತ್ರೇ ಹಿ ತದ್ರೂಪಧರೇಣ ಮಾಯಯಾ ।
ಗನ್ಧರ್ವಿಜೇನ ದ್ರಮಿಳೇನ ನಾಮ್ನಾ ಕಂಸೋ ಜಿತೋ ಯೇನ ವರಾಚ್ಛಚೀಪತಿಃ ॥೧೧.೨೦೧॥

ದ್ರಮಿಳನೆಂಬ ಅಸುರನಿಂದ ಉಗ್ರಸೇನನ ವೇಷಧಾರಣ,
ಅನೈತಿಕ ಸಮಾಗಮ ಆಯಿತು ಕಂಸನ ಹುಟ್ಟಿಗೆ ಕಾರಣ.
ದೈತ್ಯ ಕಂಸ ರುದ್ರವರಬಲದಿಂದ ಜಯಿಸಿದ್ದ ಶಚೀಪತಿಯನ್ನ. 
[Contributed by Shri Govind Magal]

No comments:

Post a Comment

ಗೋ-ಕುಲ Go-Kula