Tuesday, 29 January 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11:179 -183

ಏತಸ್ಮಿನ್ನೇವ ಕಾಲೇ ಕಮಲಭವಶಿವಾಗ್ರೇಸರಾಃ ಶಕ್ರಪೂರ್ವಾ
ಭೂಮ್ಯಾ ಪಾಪಾತ್ಮದೈತ್ಯೈರ್ಭುವಿ ಕೃತನಿಲಯೈರಾಕ್ರಮಂ ಚಾಸಹನ್ತ್ಯಾ ।
ಈಯುರ್ದ್ದೇವಾದಿದೇವಂ ಶರಣಮಜಮುರುಂ ಪೂರ್ಣ್ಣಷಾಡ್ಗುಣ್ಯಮೂರ್ತ್ತಿಂ
ಕ್ಷೀರಾಬ್ಧೌ ನಾಗಭೋಗೇ 
ಶಯಿತಮನುಪಮಾನನ್ದಸನ್ದೋಹದೇಹಮ್ ॥೧೧.೧೭೯॥

ಇದೇ ಕಾಲದಲ್ಲಿ, ಭುವಿಯಲ್ಲಿ ವಾಸವಾಗಿದ್ದ ಪಾಪಿಷ್ಠ ದೈತ್ಯರ ಆಕ್ರಮಣ,
ಸಹಿಸಲಾಗದ ಭೂತಾಯಿ ಬ್ರಹ್ಮ ರುದ್ರ ಇಂದ್ರಾದಿಗಳ
ಸಾರಿದಳು ಆ ಕ್ಷಣ.
ದೇವತೆಗಳದೇವ ಗುಣಪೂರ್ಣ ಷಡ್ಗುಣಗಳ ಆಗರ ಕ್ಷೀರಸಾಗರದ ಶೇಷಶಾಯಿ ದೊರೆ,
ಅಂಥಾ ಸರ್ವಸಮರ್ಥ ಪೂರ್ಣಾನಂದ ನಾರಾಯಣನ ಸ್ತುತಿಸುತ್ತ ಇಟ್ಟರವನಲ್ಲಿ ಮೊರೆ.

ಊಚುಃ ಪರಂ ಪುರುಷಮೇನಮನನ್ತಶಕ್ತಿಂ ಸೂಕ್ತೇನ ತೇsಬ್ಜಜಮುಖಾ ಅಪಿ ಪೌರುಷೇಣ ।
ಸ್ತುತ್ವಾ ಧರಾsಸುರವರಾಕ್ರಮಣಾತ್ ಪರೇಶ ಖಿನ್ನಾ ಯತೋ ಹಿ ವಿಮುಖಾಸ್ತವ 
ತೇsತಿಪಾಪಾಃ ॥೧೧.೧೮೦॥

ಬ್ರಹ್ಮಾದಿದೇವತೆಗಳಿಂದ ಅನಂತಶಕ್ತಿಯ ಪರಮಪುರುಷ ನಾರಾಯಣನ ಪುರುಷಸೂಕ್ತದಿಂದ ಆರಾಧನೆ,
ಅತಿಪಾಪಿಗಳಾದ, ಭಗವಂತನಿಂದ ವಿಮುಖರಾದ ದೈತ್ಯರಿಂದ ಭೂದೇವಿ ಅನುಭವಿಸುತ್ತಿರುವ ದುಃಖದ ನಿವೇದನೆ.

ದುಸ್ಸಙ್ಗತಿರ್ಭವತಿ ಭಾರವದೇವ ದೇವ ನಿತ್ಯಂ ಸತಾಮಪಿ ಹಿ ನಃ ಶೃಣು ವಾಕ್ಯಮೀಶ ।
ಪೂರ್ವಂ ಹತಾ ದಿತಿಸುತಾ ಭವತಾ ರಣೇಷು  ಹ್ಯಸ್ಮತ್ಪ್ರಿಯಾರ್ತ್ಥಮಧುನಾ ಭುವಿ ತೇSಭಿಜಾತಾಃ ॥೧೧.೧೮೧॥

ದೇವಾ, ಸಜ್ಜನರಿಗೆ ಯಾವಾಗಲೂ ದುರ್ಜನರ ಸಮಾಗಮ ದುರ್ಭರ,
ಹಿಂದೆ ನೀನು ಮಾಡಿದ್ದಿ ನಮಗಾಗಿ ದಿತಿಮಕ್ಕಳಾದ ದೈತ್ಯರ ಸಂಹಾರ.
ಈಗ ಅವರೆಲ್ಲರೂ ಭುವಿಯಲ್ಲಿ ಮತ್ತೆ ಹುಟ್ಟಿಬಂದು ಆಗಿದ್ದಾರೆ ಭೂಭಾರ.

ಆಸೀತ್ ಪುರಾ ದಿತಿಸುತೈರಮರೋತ್ತಮಾನಾಂ ಸಙ್ಗ್ರಾಮ ಉತ್ತಮಗಜಾಶ್ವರಥದ್ವಿಪದ್ಭಿಃ ।
ಅಕ್ಷೋಹಿಣೀಶತಮಹೌಘಮಹೌಘಮೇವ ಸೈನ್ಯಂ ಸುರಾತ್ಮಕಮಭೂತ್ ಪರಮಾಸ್ತ್ರಯುಕ್ತಮ್ ॥೧೧.೧೮೨॥

ಹಿಂದೊಮ್ಮೆ ದೈತ್ಯರಿಗೂ ದೇವತಾಶ್ರೇಷ್ಠರಿಗೂ ಯುದ್ಧವಾದ ಸಮಯ,
ಆನೆ ಕುದುರೆ ರಥ ಕಾಲಾಳು ಅಕ್ಷೋಹಿಣಿ ಮಹೌಘಗಳ ಸೈನ್ಯ ಸಮೂಹ.

ತಸ್ಮಾನ್ಮಹೌಘಗುಣಮಾಸ ಮಹಾಸುರಾಣಾಂ ಸೈನ್ಯಂ ಶಿಲಾಗಿರಿಮಹಾಸ್ತ್ರಧರಂ ಸುಘೋರಮ್ ।
ತೇಷಾಂ ರಥಾಶ್ಚ ಬಹುನಲ್ವಪರಿಪ್ರಮಾಣಾ ದೇವಾಸುರಪ್ರವರಕಾರ್ಮ್ಮುಕಬಾಣಪೂರ್ಣ್ಣಾಃ ।
ನಾನಾಮ್ಬರಾಭರಣವೇಷವರಾಯುಧಾಢ್ಯಾ ದೇವಾಸುರಾಃ ಸಸೃಪುರಾಶು 
ಪರಸ್ಪರಂ ತೇ ॥೧೧.೧೮೩॥

ದೇವತೆಗಳ ಸೈನ್ಯಸಂಖ್ಯೆಗಿಂತ ಮಹೌಘದಿಂದ ಗುಣಿತವಾದ ಭಾರೀ ಸೈನ್ಯ,
ಕಲ್ಲು ಬೆಟ್ಟ ಅಸ್ತ್ರಗಳ ಅತಿಭಯಾನಕ ಸೈನ್ಯವಿತ್ತು ದೈತ್ಯಗಣದ ಅಧೀನ.
ಇಬ್ಬರಲ್ಲೂ ಬಿಲ್ಲು ಬಾಣಗಳಿಂದ ಕೂಡಿದ ಬಹು ನಲ್ವಪ್ರಮಾಣದ ರಥಗಳಿದ್ದವಂತೆ,
ತರ ತರ ಬಟ್ಟೆ ಆಭರಣಗಳ ವೇಷ ಆಯುಧದಿಂದ ಯುದ್ಧಕ್ಕಾಗಿ ಎದುರುಬದಿರಾದರಂತೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula