Monday, 14 January 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 162 - 166

ಅಥ ಕುನ್ತೀ ದತ್ತಾ ಸಾ ಪಾಣ್ಡೋಃ ಸೋsಪ್ಯೇತಯಾ ಚಿರಂ ರೇಮೇ ।
ಶೂರಾಚ್ಛೂದ್ರ್ಯಾಂ ಜಾತಾಂ ವಿದುರೋsವಹದಾರುಣೀಂ ಗುಣಾಢ್ಯಾಂ ಚ ॥೧೧.೧೬೨ ॥

ಕರ್ಣನ ಹುಟ್ಟಿನ ನಂತರದಲ್ಲಿ ಕುಂತಿ,
ಪಾಂಡುವಿಗೆ ಕೊಡಲ್ಪಟ್ಟಾದಳವನ ಹೆಂಡತಿ.
ಪಾಂಡುರಾಜನದು ಕುಂತಿಯೊಡನೆ ಅನೇಕ ವರ್ಷಗಳ ವಿಹಾರ,
ಕುಂತೀಪಿತ ಶೂರನ ಶೂದ್ರಸ್ತ್ರೀಪುತ್ರಿ ಆರುಣಿಯ ವರಿಸಿದ ವಿದುರ.

ಅಥ ಚರ್ತ್ತಾಯನನಾಮಾ ಮದ್ರೇಶಃ ಶಕ್ರತುಲ್ಯಪುತ್ರಾರ್ತ್ಥೀ ।
ಕನ್ಯಾರತ್ನಂ ಚೇಚ್ಛಂಶ್ಚಕ್ರೇ ಬ್ರಾಹ್ಮಂ ತಪೋ ವರಂ ಚಾsಪ ॥೧೧.೧೬೩॥

ಋತಾಯನ ಎಂಬ ಹೆಸರುಳ್ಳ ಮದ್ರದೇಶದ ದೊರೆ,
ಇಂದ್ರಸಮಪುತ್ರ,ಕನ್ಯಾರತ್ನಕ್ಕಾಗಿ ಬ್ರಹ್ಮತಪದ ಮೊರೆ.
ಸಂಬಂಧಿತ ತಪಸ್ಸಿನಿಂದ ವರವಾಯ್ತು ಅವನ ಕೈಸೆರೆ.

ಪ್ರಹ್ಲಾದಾವರಜೋ ಯಃ ಸಹ್ಲಾದೋ ನಾಮತೋ ಹರೇರ್ಭಕ್ತಃ ।
ಸೋsಭೂದ್ ಬ್ರಹ್ಮವರಾನ್ತೇ ವಾಯೋರಾವೇಶಯುಕ್ ಸುತೋ ರಾಜ್ಞಃ ॥೧೧.೧೬೪॥

ಪ್ರಹ್ಲಾದನ ತಮ್ಮನಾದ ಸಹ್ಲಾದ ಭಗವಂತನ  ಪರಮ ಭಕ್ತನಾಗಿದ್ದ,
ಬ್ರಹ್ಮವರದಂತೆ ಮುಖ್ಯಪ್ರಾಣಾವೇಶದಿಂದ ಋತಾಯನನ ಮಗನಾದ.  

ಸ ಮಾರುತಾವೇಶವಶಾತ್ ಪೃಥಿವ್ಯಾಂ ಬಲಾಧಿಕೋsಭೂದ್ ವರತಶ್ಚ ಧಾತುಃ ।
ಶಲ್ಯಶ್ಚ ನಾಮ್ನಾsಖಿಲಶತ್ರುಶಲ್ಯೋ ಬಭೂವ ಕನ್ಯಾsಸ್ಯ ಚ ಮಾದ್ರಿ ನಾಮ್ನೀ ॥೧೧.೧೬೫॥

ಅವನಲ್ಲಿತ್ತು ಮುಖ್ಯಪ್ರಾಣನ ಆವೇಶ ಬ್ರಹ್ಮದೇವರ ವರ,
ಬಲಾಢ್ಯನಾಗಿ ಎಲ್ಲ ರಾಜರಿಗೆ ಮುಳ್ಳಿನಂತಿದ್ದ ಶಲ್ಯನ ತೆರ.
ಮಾದ್ರಿ ಎಂಬ ಹೆಸರಿನ ಕನ್ಯೆಯ ಹುಟ್ಟಾಯ್ತು ಅವನ ದ್ವಾರ.

ಸಾ ಪಾಣ್ಡುಭಾರ್ಯ್ಯೈವ ಚ ಪೂರ್ವಜನ್ಮನ್ಯಭೂತ್ ಪುನಶ್ಚ ಪ್ರತಿಪಾದಿತಾsಸ್ಮೈ ।
ಶಲ್ಯಶ್ಚ ರಾಜ್ಯಂ ಪಿತೃದತ್ತಮಞ್ಜೋ ಜುಗೋಪ ಧರ್ಮ್ಮೇಣ ಸಮಸ್ತಶಾಸ್ತ್ರವಿತ್ ॥೧೧.೧೬೬॥

ಮಾದ್ರಿಯಾಗಿದ್ದಳು ಮೂಲರೂಪದಲ್ಲಿ ಪಾಂಡುವಿನ ಹೆಂಡತಿ,
ಈಗ ಮತ್ತೆ ಪಾಂಡುವಿಗೆ ಕೊಡಲ್ಪಟ್ಟು ಆದಳು ಅವನ ಸತಿ.
ಶಲ್ಯಗೆ ತಂದೆಯಿಂದ ಬಂದ ರಾಜ್ಯ ಅಧಿಕಾರ,
ಶಾಸ್ತ್ರ ತಿಳಿದು ಧರ್ಮದಿ ಮಾಡಿದ ರಾಜ್ಯಭಾರ.

No comments:

Post a Comment

ಗೋ-ಕುಲ Go-Kula