Wednesday 9 January 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 158 - 161

ತತಾsಪಿ ರಾಮಸೇವನಾದ್ದರೇಶ್ಚ ಸನ್ನಿಧಾನಯುಕ್ ।
ಸುದರ್ಶನೀಯಕರ್ಣ್ಣತಃ ಸ ಕರ್ಣ್ಣನಾಮಕೋsಭವತ್   ॥೧೧.೧೫೮॥

ಹೀಗೆ ಅಲ್ಲಿ ಸೂರ್ಯದೇವ ಹುಟ್ಟಿದ್ದರೂ ಕೂಡಾ ಅಸುರಾವೇಶದಿಂದ,
ನಾರಾಯಣ ಸನ್ನಿಧಾನವಿತ್ತಲ್ಲಿ ಸುಗ್ರೀವವತಾರದ ಪೂರ್ವ ಸೇವೆಯಿಂದ.
ಅವನು ಅಂದವಾದ ಕಿವಿಯುಳ್ಳವನಾಗಿ ಬಂದ,
ಹಾಗೆಂದೇ ಕರ್ಣ ಎಂಬ ಹೆಸರು ಉಳ್ಳವನಾದ.

ಸ ರತ್ನಪೂರ್ಣ್ಣಮಞ್ಜುಷಾಗತೋ ವಿಸರ್ಜ್ಜಿತೋ ಜಲೇ ।
ಜನಾಪವಾದಭೀತಿತಸ್ತಯಾ ಯಮಸ್ವಸುರ್ದ್ದ್ರುತಮ್  ॥೧೧.೧೫೯॥
ನದೀಪ್ರವಾಹತೋ ಗತಂ ದದರ್ಶ ಸೂತನನ್ದನಃ ।
ತಮಗ್ರಹೀತ್ ಸರತ್ನಕಂ ಚಕಾರ ಪುತ್ರಕಂ ನಿಜಮ್  ॥೧೧.೧೬೦॥



ಬಾಲೆ ಕುಂತಿಗೆ ಆವರಿಸಿತು ಸಹಜವಾದ ಜನಾಪವಾದದ ಭೀತಿ,
ರತ್ನಾಭರಿತ ಪೆಟ್ಟಿಗೆಯಲ್ಲಿಟ್ಟವನ ಯಮುನೆಗೆ ಬಿಟ್ಟಳು ಕುಂತಿ.
ನದಿಯಲ್ಲಿ ಹೋಗುತ್ತಿರುವ ಪೆಟ್ಟಿಗೆಯ ನೋಡಿದ ಅಧಿರಥನೆಂಬೊಬ್ಬ ಸೂತ,
ಸ್ವೀಕರಿಸುತ್ತಾ ಆ ಪೆಟ್ಟಿಗೆಯ ತನ್ನ ಮಗನನ್ನಾಗಿ ಮಾಡಿಕೊಳ್ಳುತ್ತಾನೆ ಆತ.
ವಿಧಿಲಿಖಿತ ನಾಟಕದಲ್ಲಿ ಸೂತ ಅಧಿರಥನದೂ ಒಂದು ಪಾತ್ರ,
ಅವನ ಮಗನಾಗಿ ಬೆಳೆದ ಕರ್ಣ ಕರೆಯಲ್ಪಡುತ್ತಾನೆ ಸೂತಪುತ್ರ.

ಸೂತೇನಾಧಿರಥೇನ ಲಾಳಿತತನುಸ್ತದ್ಭಾರ್ಯ್ಯಯಾ ರಾಧಯಾ ।
ಸಂವೃದ್ಧೋ ನಿಖಿಲಾಃ ಶ್ರುತಿರಧಿಜಗೌ ಶಾಸ್ತ್ರಾಣಿ ಸರ್ವಾಣಿ ಚ ।
ಬಾಲ್ಯಾದೇವ ಮಹಾಬಲೋ ನಿಜಗುಣೈಃ ಸಮ್ಭಾಸಮಾನೋsವಸ-
ನ್ನಾಮ್ನಾsಸೌ ವಸುಷೇಣತಾಮಗಮದಸ್ಯಾsಸೀದ್ಧ್ಯಮಾ ತದ್ ವಸು ॥೧೧.೧೬೧॥

ಆ ಅಧಿರಥನೆಂಬ ಸೂತ ಮತ್ತವನ ಮಡದಿಯಾದ ರಾಧೆಯಲ್ಲಿ,
ಬೆಳೆಯುತ್ತಾನೆ ಕರ್ಣ ವೇದ ಶಾಸ್ತ್ರ ಕಲಿಯುತ್ತ ಅವರ ಪಾಲನೆಯಲ್ಲಿ.
ಸಂಪತ್ತಿನೊಂದಿಗೆ ಬಂದವನಾದ್ದರಿಂದ ವಸುಷೇಣ ಎಂದವನ ಹೆಸರು,
ಮಹಾಬಲ ಗುಣಗಳಿಂದ ಬೆಳಗುತ್ತಿತ್ತು ಕುಂತಿಯ ಮೊದಲ ಬಸಿರು.
[Contributed by Shri Govind Magal]

No comments:

Post a Comment

ಗೋ-ಕುಲ Go-Kula